19 C
Bangalore
Thursday, November 14, 2019

ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರು ಗರಂ

Latest News

ಬೇಷರತ್ ಕ್ಷಮೆಯಾಚಿಸಿದ್ದ ರಾಹುಲ್ ಗಾಂಧಿ: ನ್ಯಾಯಾಂಗ ನಿಂದನೆ ಮೊಕದ್ದಮೆ ಕೈ ಬಿಟ್ಟ ಸುಪ್ರೀಂ ಕೋರ್ಟ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ ಚೌಕೀದಾರ್​ ಚೋರ್ ಹೈ ಎಂದಿದ್ದ ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಯವರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ...

ಕಂಠೀರವ ಸ್ಟುಡಿಯೋದಲ್ಲಿ ರೆಬಲ್ ಸ್ಟಾರ್ ದಿ. ಅಂಬರೀಷ್ ಅವರ ಮೊದಲ ಪುಣ್ಯ ತಿಥಿ: ಅರಮನೆ ಮೈದಾನದಲ್ಲಿ ಬೃಹತ್​ ಕಾರ್ಯಕ್ರಮ

ಬೆಂಗಳೂರು: ಖ್ಯಾತ ನಟ ಹಾಗೂ ಮಾಜಿ ಸಚಿವ ದಿ. ಅಂಬರೀಷ್ ಅವರ ಮೊದಲ ವರ್ಷದ ಪುಣ್ಯ ತಿಥಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಕಂಠೀರವ...

ದೇಶದ ಕಾರು ಮಾರುಕಟ್ಟೆಯ ಟಾಪ್ 10 ಕಾರುಗಳ ಪಟ್ಟಿಗೆ ಕೊರಿಯನ್​ ಕಂಪನಿ ಕಾರು!: ಉಳಿದಂತೆ ಮಾರುತಿಯದ್ದೇ ಕಾರುಬಾರು..

ಮುಂಬೈ: ದೇಶದ ಕಾರು ಮಾರುಕಟ್ಟೆಯ ಕಳೆದ ತಿಂಗಳ ಕಾರು ಮಾರಾಟ ದತ್ತಾಂಶ ಪ್ರಕಾರ, ಟಾಪ್​ 10 ಕಾರುಗಳ ಪಟ್ಟಿಯಲ್ಲಿ ಮಾರುತಿ ಕಾರುಗಳದ್ದೇ ಕಾರುಬಾರು....

ರಫೇಲ್ ವಿವಾದ ಇನ್ನು ಮುಗಿದ ಅಧ್ಯಾಯ: ಮರುಪರಿಶೀಲನಾ ಅರ್ಜಿಗಳು ವಜಾಗೊಳಿಸಿ ಸುಪ್ರೀಂ ಆದೇಶ

ನವದೆಹಲಿ: ವಿವಾದಾತ್ಮಕ ರಫೇಲ್ ಒಪ್ಪಂದವನ್ನು ಮೇಲ್ವಿಚಾರಣೆ ನಡೆಸುವಂತೆ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ತಳ್ಳಿಹಾಕಿದೆ. ರಫೇಲ್ ಒಪ್ಪಂದವನ್ನು ನ್ಯಾಯಾಲಯ ತನಿಖೆಗೆ ಒಳಪಡಿಸುವುದಿಲ್ಲ ಎಂದು...

ಶಬರಿಮಲೆ ತೀರ್ಪು ಸದ್ಯಕ್ಕಿಲ್ಲ; ಮರುಪರಿಶೀಲನಾ ಅರ್ಜಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ ಪಂಚಪೀಠ

ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ನೀಡಲಾಗಿದ್ದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಮರುಪರಿಶೀಲನಾ ಅರ್ಜಿ ವಿಚಾರಣೆಯನ್ನು ಏಳು...

<ಸರ್ವೀಸ್ ರಸ್ತೆ ಕಾಮಗಾರಿ ಆರಂಭಿಸುವಂತೆ ನವಯುಗ ಕಂಪನಿಗೆ ಜಿಲ್ಲಾಧಿಕಾರಿ ತಾಕೀತು>

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಸರ್ವೀಸ್ ರಸ್ತೆ ಅಗೆದು ಖಾಲಿ ಜಲ್ಲಿ ಹಾಕಿದರೆ ರಸ್ತೆ ಆಯಿತಾ? ಇಲ್ಲಿನ ಸಮಸ್ಯೆ ನಮಗೆ ಮಾತ್ರ ಗೊತ್ತು. ಹೆದ್ದಾರಿ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ. ಇನ್ನೂ ರಸ್ತೆ ಸಂಚಾರಕ್ಕೆ ಮುಕ್ತವಾಗಿಲ್ಲ. ಕುಂದಾಪುರ ಫ್ಲೈ ಓವರ್ ಮುಗಿಯಲು ಎಷ್ಟು ದಿನ ಬೇಕು?

-ಸ್ಥಳೀಯರ ದೂರಿನ ಮೇರೆಗೆ ಶನಿವಾರ ಸಾಯಂಕಾಲ ನವಯುಗ ಕಂಪನಿ ತಂಡವನ್ನು ಕರೆದುಕೊಂಡು ಬಂದ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಎದುರೇ ಕಂಪನಿ ವಿರುದ್ಧ ನಾಗರಿಕರು ಹರಿಹಾಯ್ದ ಪರಿ ಇದು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಬೀಜಾಡಿ ಸರ್ವೀಸ್ ರೋಡ್ ಯು ಟರ್ನ್ ನಿಂದ ಬೀಜಾಡಿ ವೈ ಜಂಕ್ಷನ್ ತಿರುವುವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಪರಿಶೀಲನೆ ನಡೆಸಿ, ಕಂಪನಿ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

ಈ ರಸ್ತೆಯಲ್ಲಿ ಸಂಚರಿಸುವುದು ಹೇಗೆ? ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಯಾವುದೇ ಸೇಫ್ ಗಾರ್ಡ್ ಇಲ್ಲ. ಇಷ್ಟೊಂದು ಅಪಾಯಕಾರಿ ಇರುವಾಗ ಕಾಲವಕಾಶ ನೀಡುವ ಪ್ರಶ್ನೆಯೇ ಇಲ್ಲ. ಸೋಮವಾರದಿಂದ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಕಂಪನಿಯನ್ನು ಬ್ಲಾೃಕ್ ಲಿಸ್ಟ್ ಹಾಕಿ ಕೇಸ್ ದಾಖಲಿಸುವ ಮೂಲಕ ತುರ್ತು ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಸ್ಥಳೀಯರು ನವಯುಗ ಕಂಪನಿ ಇಂಜಿಯರ್‌ಗಳಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿ ಸ್ಯಾಮ್ಸನ್ ಅವರನ್ನು ತರಾಟೆಗೆ ತೆಗೆದುಕೊಂಡರು.

ತಹಸೀಲ್ದಾರ್ ತಿಪ್ಪೇಸ್ವಾಮಿ ಹಾಗೂ ನವಯುಗ ಕಂಪನಿ ಅಧಿಕಾರಿಗಳ ತಂಡ ಇದ್ದರು. ಜಿಪಂ ಸದಸ್ಯೆ ಶ್ರೀಲತಾ ಸುರೇಶ ಶೆಟ್ಟಿ, ತಾಪಂ ಸದಸ್ಯೆ ವೈಲೆಟ್ ಬೆರೆಟ್ಟೋ, ಬೀಜಾಡಿ ಗ್ರಾಪಂ ಸದಸ್ಯ ವಾದಿರಾಜ ಹೆಬ್ಬಾರ್, ಪಿಡಿಒ ಗಣೇಶ, ಗೋಪಾಡಿ ಗ್ರಾಪಂ ಅಧ್ಯಕ್ಷೆ ಸರಸ್ಪತಿ ಪುತ್ರನ್, ಪ್ರಮುಖರಾದ ರಾಜು ಬೆಟ್ಟಿನ ಮನೆ, ಚಂದ್ರಶೇಖರ ಬೀಜಾಡಿ, ಅಣ್ಣಪ್ಪ ಬೆಟ್ಟಿನಮನೆ, ನಾರಾಯಣ ಭಂಡಾರಿ, ಅನಂತಕೃಷ್ಣ ಉಪಾಧ್ಯಾಯ, ಬಿ.ಜಿ.ನಾಗರಾಜ ಬೀಜಾಡಿ, ಅನೂಪ್ ಕುಮಾರ್ ಬಿ.ಆರ್., ನಾಗರಾಜ ಕಲಾವಿದ, ರಾಜೇಶ್ ಆಚಾರ್ ಗೋಪಾಡಿ, ಗಿರೀಶ್ ಬೀಜಾಡಿ, ರಾಜೇಶ್ ಆಚಾರ್ ಬೀಜಾಡಿ, ಸಂತೋಷ ಕುಲಾಲ್ ವಕ್ವಾಡಿ, ಶ್ರೀಧರ್ ಚಾತ್ರಬೆಟ್ಟು, ಬಿ.ಎಂ.ನಾಸೀರ್, ದಿನೇಶ್ ಹಲ್ತೂರು, ಸುರೇಶ್ ಬೆಟ್ಟಿನ್, ಜಯಕರ ಶೆಟ್ಟಿ, ಮಹೇಶ್ ಮಟ್ಟಿ, ಕರುಣಾಕರ ಶೆಟ್ಟಿ ಕೆದೂರು, ಮಹೇಶ್ ಭಂಡಾರಿ, ಸುಭಾಷ್ ಚಂದ್ ಮೊದಲಾದವರು ಇದ್ದರು.

ಅಪಘಾತ ವಲಯ: ಇಲ್ಲಿ 2015 ರಿಂದ 2019ರ ವರೆಗೆ 80ಕ್ಕೂ ಹೆಚ್ಚು ಅಪಘಾತವಾಗಿದೆ. 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 25ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಸ್ಥಳೀಯರು ಧೂಳಿನಿಂದ ಅನಾರೋಗ್ಯ ಪೀಡಿತರಾಗಿದ್ದಾರೆ. ಕುಂದಾಪುರ ಭಾಗದಲ್ಲಿ ಸಮರ್ಪಕವಾಗಿ ಯಾವುದೇ ಹೆದ್ದಾರಿ ಕಾಮಗಾರಿ ಆಗಿಲ್ಲ. ರಾತ್ರಿ ವೇಳೆ ಹೆದ್ದಾರಿ ದೀಪಗಳು ಉರಿಯುವುದಿಲ್ಲ. ಹೀಗಿರುವಾಗ ಕುಂದಾಪುರ ಭಾಗಕ್ಕೆ ಟೋಲ್ ಕಟ್ಟುವ ಪರಿಸ್ಥಿತಿ ಮಾತ್ರ ತಪ್ಪಿಲ್ಲ ಎಂದು ಪತ್ರಕರ್ತೆ ಐಶ್ವರ್ಯ ದೂರಿದರು.

- Advertisement -

Stay connected

278,453FansLike
560FollowersFollow
607,000SubscribersSubscribe

ವಿಡಿಯೋ ನ್ಯೂಸ್

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...

VIDEO| ಈ​ ವಿಡಿಯೋ...

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ...

VIDEO: ದುರ್ಗಾಪೂಜಾ ಥೀಮ್​...

ಕೋಲ್ಕತ: ತೃಣಮೂಲ ಕಾಂಗ್ರೆಸ್​ನಿಂದ ನೂತನವಾಗಿ ಆಯ್ಕೆಯಾದ ಸಂಸದೆಯರಾದ ನುಸ್ರತ್ ಜಹಾನ್​ ಹಾಗೂ ಮಿಮಿ ಚಕ್ರಬರ್ತಿ ದುರ್ಗಾಪೂಜಾ ಹಾಡಿಗೆ ಮನಮೋಹಕವಾಗಿ ನೃತ್ಯ ಮಾಡಿದ್ದು ವಿಡಿಯೋ ಭರ್ಜರಿ ವೈರಲ್​ ಆಗಿದೆ. ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ಈ...