16 C
Bengaluru
Wednesday, January 22, 2020

ಮೋದಿ ಅಲೆ ಎದುರು ಮೈತ್ರಿ ಬಲೆ

Latest News

ಜಗದಗಲ ಅಂಕಣ: ನಿನ್ನೆಯ ಆತಂಕ, ಇಂದಿನ ಅನಿಶ್ಚಿತತೆ, ನಾಳಿನ ಆಶಾವಾದ

ಕೊಲ್ಲಿಯಲ್ಲಿ ಈ ಕ್ಷಣಕ್ಕೆ ಯುದ್ಧವಾಗುವ ಸಾಧ್ಯತೆ ಇಲ್ಲ. ಇರಾನ್ ಕುರಿತಂತೆ ಕೊಲ್ಲಿ ರಾಷ್ಟ್ರಗಳ ಮತ್ತು ಅಮೆರಿಕದ ಅಭಿಪ್ರಾಯಗಳನ್ನೂ, ಅದರ ವಿರುದ್ಧದ ಯೋಜನೆಗಳನ್ನೂ ರಷ್ಯಾ,...

ಸ್ಟೂಲ್​ನಲ್ಲಿ ಪತ್ತೆಯಾದ 30.6 ಲಕ್ಷ ರೂ.

ಸಾಮಾನ್ಯವಾಗಿ ಕಷ್ಟಕಾಲಕ್ಕೆ ಇರಲಿ ಎಂದು ಹಿಂದಿನ ಕಾಲದ ಹಿರಿಯರು ಸ್ವಲ್ಪ ಹಣವನ್ನು ಬಚ್ಚಿಡುವುದುಂಟು. ಕೆಲವರು ಮಂಚದ ಕೆಳಗೂ ಮುಚ್ಚಿಡುವುದುಂಟು. ಕೆಲವೊಮ್ಮೆ ಅವರಿಗೇ ಅದು...

ಕನ್ನಡದಲ್ಲೇ ಇಂಗ್ಲಿಷ್ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

# ಅವನು ತನ್ನನ್ನು ಅಗಲಿದ ಪತ್ನಿಗಾಗಿ ನಿಶ್ಶಬ್ದದಲ್ಲಿ ದುಃಖಿಸಿದ / ಶೋಕ ವ್ಯಕ್ತಪಡಿಸಿದ. He mourned for his bereaved wife in silence. #...

ನಿತ್ಯ ಭವಿಷ್ಯ: ನಿಮ್ಮದು ಧಾರಾಳತನ ತೋರುವ ಗುಣವಾದರೂ ಆರ್ಥಿಕ ತೊಂದರೆಗೆ ಗುರಿಯಾಗದಿರಿ

ಮೇಷ: ಹೆಚ್ಚಿನ ಯಶಸ್ಸಿಗಾಗಿ ಮತ್ತು ನಂತರದ ಸಮಾಧಾನಕ್ಕಾಗಿ ವಿಶ್ವಾಸದಿಂದಲೇ ಕೆಲಸಗಳನ್ನು ಮಾಡಿ. ಹರ್ಷವಿದೆ. ಶುಭಸಂಖ್ಯೆ: 4 ವೃಷಭ: ನಿಮ್ಮದು ಮೌನವಾದ ಕೆಲಸ, ಆದರೆ ಪರಿಣಾಮ...

ಅಮೃತ ಬಿಂದು

ಶ್ರೀ ಶೈವಾಗಮ ಗುಣಾಗುಣವಿಮರ್ಶಸ್ಯ ತ್ಯಾಗೋ ಯಸ್ತು ಗುರೌ ಚರೇ | ಸಪ್ತತ್ರಿಂಶಂ ಸಮಾಖ್ಯಾತಂ ಶೀಲಂ ಪುಣ್ಯಫಲಪ್ರದಮ್ || ಗುರು ಮತ್ತು ಜಂಗಮನ ವಿಷಯದಲ್ಲಿ ಗುಣದೋಷಗಳ ವಿಮರ್ಶೆಯನ್ನು...

| ಅವಿನ್ ಶೆಟ್ಟಿ ಉಡುಪಿ

| ಮಂಜುನಾಥ ಎಂ.ಎನ್. ಚಿಕ್ಕಮಗಳೂರು

ಕ್ಷೇತ್ರದಲ್ಲಿ ಹಿಂದೆಲ್ಲ ಬಿಜೆಪಿ ಅಭ್ಯರ್ಥಿ ಎದುರು ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತ್ಯೇಕ ಅಭ್ಯರ್ಥಿಗಳಿರುತ್ತಿದ್ದರು. ಆದರೆ ಈ ಬಾರಿ ಮೈತ್ರಿಕೂಟದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಉಳಿದಂತೆ ಪ್ರಮುಖ ಅಭ್ಯರ್ಥಿಗಳು ಕ್ಷೇತ್ರದಲ್ಲಿಲ್ಲ. ಹಾಗಾಗಿ ಇದು ಬಿಜೆಪಿ ಮತ್ತು ಮೈತ್ರಿಕೂಟದ ನಡುವಿನ ನೇರ ಹಣಾಹಣಿ.

ಮೈತ್ರಿ ಅಭ್ಯರ್ಥಿ ಎದುರು ಕಮಲ ಪಡೆ ಏಕಾಂಗಿ ಹೋರಾಟಕ್ಕೆ ಧುಮುಕಿದೆ. ಕಾಂಗ್ರೆಸ್ ರಾಜ್ಯದಲ್ಲಿ ಜೆಡಿಎಸ್​ಗೆ ಬಿಟ್ಟುಕೊಟ್ಟಿರುವ 7 ಸೀಟುಗಳಲ್ಲಿ ಉಡುಪಿ-ಚಿಕ್ಕಮಗಳೂರು ಸಹ ಸೇರಿದ್ದು, ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವ ಇಲ್ಲದಿದ್ದರೂ ಅನಿವಾರ್ಯವಾಗಿ ಕಾಂಗ್ರೆಸ್​ನಿಂದ ಅಭ್ಯರ್ಥಿಯನ್ನು (ಪ್ರಮೋದ್ ಮಧ್ವರಾಜ್) ಜೆಡಿಎಸ್ ಎರವಲು ಪಡೆದು ಕಣಕ್ಕಳಿಸಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೆಡಿಎಸ್ ಸ್ವಲ್ಪಮಟ್ಟಿಗೆ ಗುರುತಿಸಿಕೊಂಡಿದ್ದರೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷದಿಂದ ಸ್ಪರ್ಧಿಸಿದ್ದ ಧನಂಜಯ ಕುಮಾರ್ ಕೇವಲ 14,895 ಮತ ಗಳಿಸಿದ್ದರು. 5,81,168 ಮತ ಗಳಿಸಿ ವಿಜಯಿಯಾದ ಶೋಭಾ ಕರಂದ್ಲಾಜೆ ಎದುರು ಕಣಕ್ಕಿಳಿದಿದ್ದ ಕಾಂಗ್ರೆಸ್​ನ ಜಯಪ್ರಕಾಶ್ ಹೆಗ್ಡೆ 3,99,525 ಮತ ಗಳಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳ ಅಭ್ಯರ್ಥಿಗಳು ಗಳಿಸಿದ ಮತಗಳನ್ನು ಒಟ್ಟುಗೂಡಿಸಿದರೂ 1,66,746 ಮತಗಳಿಂದ ಮುಂದಿದ್ದ ಬಿಜೆಪಿ ಮೋದಿ ಅಲೆಯಲ್ಲಿ ಬೀಗಿತ್ತು. ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಕಾರಣ ಈ ಕೂಟದ ಅಭ್ಯರ್ಥಿಯನ್ನು ಕ್ಷೇತ್ರ ಹೇಗೆ ಪರಿಗಣಿಸುತ್ತದೆ ಎನ್ನುವುದು ಕುತೂಹಲದಾಯಕ ಅಂಶ.

ನಮೋ ಬ್ರ್ಯಾಂಡ್: ಬಿಜೆಪಿ ಪಾಳಯದಲ್ಲಿ ‘ಚೌಕಿದಾರ್ ನಮೋ’ ಬ್ರ್ಯಾಂಡ್ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ವರವಾಗುವ ಸಾಧ್ಯತೆ ಇದೆ. ಕಾರ್ಯಕರ್ತರಲ್ಲಿ ಅಭ್ಯರ್ಥಿ ಬಗ್ಗೆ ಅಸಮಾಧಾನವಿದ್ದರೂ ಮೋದಿಗಾಗಿ ವೋಟು ಹಾಕಿ ಎಂದು ಅವರು ಪ್ರಚಾರಕ್ಕೆ ಇಳಿದಿದ್ದಾರೆ. ಗೆಲುವಿನ ಆತ್ಮವಿಶ್ವಾಸ ಶೋಭಾ ಕರಂದ್ಲಾಜೆ, ಪ್ರಮೋದ್ ಮಧ್ವರಾಜ್ ಇಬ್ಬರಲ್ಲೂ ಇದೆ. ಮೋದಿ ಅಲೆ, ಯುವ ಮತದಾರರಿಂದಾಗಿ ಭಾರಿ ಅಂತರದ ಗೆಲುವು ಸಾಧ್ಯ ಎಂಬುದು ಬಿಜೆಪಿ ಪಾಳಯದ ಲೆಕ್ಕಾಚಾರ.

ಮೀನುಗಾರರು, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಜನಪ್ರತಿನಿಧಿ ಜಿಲ್ಲೆಗೆ ಅವಶ್ಯ. ಜನತೆ ನನ್ನ ಪರ ಒಲವು ಹೊಂದಿದ್ದಾರೆ. ನಿರಂತರ ಜನ ಸಂಪರ್ಕ, ಪಕ್ಷದ ಕಾರ್ಯಕರ್ತರೊಡನೆ ಒಡನಾಟ ಇಟ್ಟುಕೊಂಡಿರುವ ವ್ಯಕ್ತಿ ನಾನು. ಬಿಜೆಪಿ ಅಭ್ಯರ್ಥಿಗೆ ಅವರ ಪಕ್ಷದಲ್ಲೇ ಅಸಮಾಧಾನವಿದೆ, ನನ್ನ ಗೆಲುವು ಎರಡು ಪಕ್ಷದ ಗೆಲುವಾಗಲಿದೆ.

| ಪ್ರಮೋದ್ ಮಧ್ವರಾಜ್ ಜೆಡಿಎಸ್ ಅಭ್ಯರ್ಥಿ

ಕ್ಷೇತ್ರದಲ್ಲಿನ ಸಮಸ್ಯೆಗಳು

ಉಡುಪಿ ಜಿಲ್ಲೆ ಪ್ರವಾಸೋದ್ಯಮ ಮೂಲಕ ಅಭಿವೃದ್ಧಿ ಆಗುವ ಸಾಕಷ್ಟು ಅವಕಾಶಗಳಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಅದಾಗಿಲ್ಲ. ಸಿಆರ್​ರೆಡ್ ನಿಯಮಾವಳಿ, ಹಸಿರು ಪೀಠದಲ್ಲಿ ಮರಳುಗಾರಿಕೆ ಬಗ್ಗೆ ವಿಚಾರಣೆ ನಡೆಯುತ್ತಿರುವುದರಿಂದ ಜಿಲ್ಲೆಯಲ್ಲಿ ಮರಳು ದಿಬ್ಬ ತೆರವು, ಮರಳುಗಾರಿಕೆ ವ್ಯವಸ್ಥಿತವಾಗಿ ನಡೆಯದೇ ಶಾಶ್ವತ ಪರಿಹಾರ ಸಾಧ್ಯವಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುತ್ತಿದ್ದು, ಶಾಶ್ವತ ಕಾಮಗಾರಿ ಯೋಜನೆಯಿಂದ ಉಪಯೋಗ ಆಗುತ್ತಿಲ್ಲ. ಮೀನುಗಾರರ ಜೀವನ ಭದ್ರತೆ, ಮೀನುಗಾರಿಕೆಗೆ ಸಂಬಂಧಿಸಿದ ಪೂರಕ ಉದ್ಯಮಗಳ ಆರ್ಥಿಕ ಸ್ಥಿತಿಗತಿ ಡೋಲಾಯಮಾನ ಆಗಿದೆ. ಸ್ಥಳೀಯರ ಟೋಲ್ ವಿನಾಯಿತಿ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮ ಕುರಿತ ಅಭಿವೃದ್ಧಿ ನಿರೀಕ್ಷಿಸುತ್ತಿದೆ. ಮಲೆನಾಡು-ಬಯಲುಸೀಮೆಯಿಂದ ಕೂಡಿರುವ ಈ ಜಿಲ್ಲೆಯಲ್ಲಿ ಕಾಫಿಗೆ ಬಿಳಿಕಾಂಡ ಕೊರಕದ ಬಾಧೆ ಇದ್ದು, ಅಡಕೆಗೆ ಹಳದಿ ಎಲೆ ಹೆಮ್ಮಾರಿ ಕಾಡುತ್ತಿದೆ. ಎರಡಕ್ಕೂ ಪರಿಹಾರ ಕಂಡುಹಿಡಿಯುವಲ್ಲಿ ನಡೆದಿರುವ ಪ್ರಯತ್ನ ಸಾಲದೆಂಬ ಅಸಮಾಧಾನವಿದೆ. ಬರದ ಭೀತಿಯಲ್ಲಿರುವ ಕಡೂರು ತಾಲೂಕಿನಲ್ಲಿ ತೆಂಗು ಬೆಳೆ ಅವನತಿ ಅಂಚಿನಲ್ಲಿದೆ. ಬಯಲು ಪ್ರದೇಶಕ್ಕೆ ಶಾಶ್ವತ ನೀರೊದಗಿಸುವ ಬೇಡಿಕೆ, ಕೆರೆಗಳನ್ನು ತುಂಬಿಸುವ ಯೋಜನೆಗಳು ಅನುಷ್ಠಾನವಾಗಿಲ್ಲ.

ಕಾಂಗ್ರೆಸ್​ಗೆ ಮುಜುಗರ

ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಟಿಕೆಟ್ ಆಕಾಂಕ್ಷಿ ಆಗಿದ್ದ ಎಐಸಿಸಿ ಸದಸ್ಯ ಅಮೃತ್ ಶೆಣೈ ಮೈತ್ರಿಯಿಂದಾಗಿ ಟಿಕೆಟ್ ವಂಚಿತರಾಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಉಡುಪಿ ಜಿಲ್ಲೆಯ ಕಾಂಗ್ರೆಸ್​ಗೆ ಮುಜುಗರ. ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹಾಗೂ ನಾಯಕರು ಅಮೃತ್ ಶೆಣೈ ಅವರನ್ನು ಮನವೊಲಿಸಲು ಮುಂದಾದರೂ ಸಫಲವಾಗಿಲ್ಲ. ಬಳಿಕ ಪಕ್ಷ ವಿರೋಧಿ ಚಟುವಟಿಕೆ ಎಂದು ಶೆಣೈ ಅವರನ್ನು ಕಾಂಗ್ರೆಸ್​ನಿಂದ ಅಮಾನತುಗೊಳಿಸಲಾಯಿತು. ಈ ಎಲ್ಲ ಬೆಳವಣಿಗೆ ಸಣ್ಣಮಟ್ಟಿಗೆ ಮತದಾರರ ಮೇಲೆ ಪ್ರಭಾವ ಬೀಳಲಿದೆ. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಎರಡೂ ಅಭ್ಯರ್ಥಿಗಳಿಗೆ ಯಾವುದೇ ಬಂಡಾಯ ಕಾಟವಿಲ್ಲ.

ಅಭಿವೃದ್ಧಿ ಕಾರ್ಯ, ಕೇಂದ್ರ ಸರ್ಕಾರದ ಸಾಧನೆಗಳು, ಕ್ಷೇತ್ರದ ಜನತೆಗೆ ಪ್ರಧಾನಿ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿಸುವ ಇಚ್ಛೆ ನನ್ನ ಗೆಲುವಿನ ಶ್ರೀರಕ್ಷೆ. ಮೈತ್ರಿ ಸರ್ಕಾರದ ಆಡಳಿತ ವೈಫಲ್ಯ ಜನರಿಗೆ ತಿಳಿದಿದೆ. ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ವಿಜಯ ಪತಾಕೆ ಹಾರಿಸಲಿದೆ.

| ಶೋಭಾ ಕರಂದ್ಲಾಜೆ ಬಿಜೆಪಿ ಅಭ್ಯರ್ಥಿ

ಪ್ರಮೋದ್​ಗೆ ಗೆಲ್ಲುವ ಹಠ

ಕಳೆದ ವಿಧಾನಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆಲ್ಲಲೇಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಸಿಎಂ ಎರಡೆರಡು ಬಾರಿ ಪ್ರವಾಸ ಮಾಡಿದ್ದು ಮೈತ್ರಿ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದೆ. ಜೆಡಿಎಸ್​ಗೆ ಸೇರಿ ಸ್ಪರ್ಧಿಸುತ್ತಿರುವ ಪ್ರಮೋದ್​ಗೆ, ಆ ಪಕ್ಷ ಯಾವ ರೀತಿ ನೆರವಾಗಬಲ್ಲದು ಎಂಬ ಕುತೂಹಲವಿದೆ. ಅವರು ಕಾಂಗ್ರೆಸ್ ಅಭ್ಯರ್ಥಿ ಅಲ್ಲದಿದ್ದರೂ ಎಲ್ಲ ಚುನಾವಣಾ ಚಟುವಟಿಕೆ ಕಾಂಗ್ರೆಸ್ ಭವನದಲ್ಲೇ ನಡೆಯುತ್ತಿದೆ.

ಕಣದಲ್ಲಿರುವ ಇತರರು

ಸುರೇಶ್ ಕುಂದರ್(ಯುಪಿಪಿ), ಪಿ.ಪರಮೇಶ್ವರ (ಬಿಎಸ್​ಪಿ), ಶೇಖರ ಹಾವಂಜೆ (ಆರ್​ಪಿಐ), ಎಂ.ಕೆ. ದಯಾನಂದ (ಪ್ರೌಟಿಸ್ಟ್ ಸರ್ವ ಸಮಾಜ್), ಪಿ.ಗೌತಮ್ ಪ್ರಭು (ಶಿವಸೇನೆ), ವಿಜಯ ಕುಮಾರ್ (ಸಿಪಿಐಎಂ ಲೆನಿನಿಸ್ಟ್ ರೆಡ್ ಸ್ಟಾರ್), ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಸಿ.ಪ್ರಕಾಶ್, ಅಮೃತ್ ಶೆಣೈ ಪಿ., ಅಬ್ದುಲ್ ರೆಹಮಾನ್, ಎಂ.ಕೆ. ಗಣೇಶ್ ಕಣದಲ್ಲಿದ್ದಾರೆ.

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...