VIDEO|ಕರಾವಳಿಯ ಚಿಯರ್​​ ಬಾಯ್​ ಕರಾಮತ್ತಿಗೆ ಕ್ರೀಡಾಭಿಮಾನಿಗಳು ಫಿದಾ!

ಉಡುಪಿ: ಐ.ಪಿ.ಎಲ್ ಸಂದರ್ಭ ಚಿಯರ್ ಗರ್ಲ್ಸ್‌ ಆಟಗಾರಗಾರಿಗೆ ಹುರಿದುಂಬಿಸುವುದನ್ನು ನೋಡಿರುತ್ತೀರಾ ಆಟಗಾರರಿಗಿಂತ ಚಿಯರ್ ಗರ್ಲ್ಸ್‌ಗಳೇ ಹೆಚ್ಚು ಮಿಂಚುತಿರುತ್ತಾರೆ. ಅದೇ ರೀತಿಯಾಗಿ ಕರಾವಳಿಯಲ್ಲಿ ಚಿಯರ್ ಬಾಯ್ ಒಬ್ಬರು ಭಾರೀ ಫೇಮಸ್ ಆಗಿದ್ದಾರೆ.

ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ಹಗ್ಗಜಗ್ಗಾಟ ಪಂದ್ಯಾಟಗಳು ಕರಾವಳಿ ಭಾಗದಲ್ಲಿ ನಡೆಯುತ್ತಿರುತ್ತದೆ. ಅದರಲ್ಲೂ ಹೊನಲು ಬೆಳಕಿನ ಮ್ಯಾಚ್‌ಗಳು ನಡೆಯುವುದೇ ಹೆಚ್ಚು. ಇಂತಹ ಕಾರ್ಯಕ್ರಮಗಳಲ್ಲಿ ಕ್ರೀಡಾಸಕ್ತರನ್ನು ಮನೋರಂಜಿಸುವ ಚಿಯರ್ ಬಾಯ್ ಒಬ್ಬರು ಉಡುಪಿಯಲ್ಲಿ ಇದ್ದಾರೆ. ಅವರ ಹೆಸರೇ ಚೇತನ್​.

ಚೇತನ್​ ತನ್ನದೇ ಆದ ಡೈಲಾಗ್, ನೃತ್ಯದ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದಾರೆ. ವೃತ್ತಿಯಲ್ಲಿ ಪೇಂಟರ್ ಆಗಿರುವ ಚೇತನ್​, ಹಿಂದಿನಿಂದಲೂ ತಮ್ಮ ಊರಿನ ಯಾವುದೇ ಕಾರ್ಯಕ್ರಮದಲ್ಲಿ ಎಲ್ಲರನ್ನು ನಗಿಸುವ ಪ್ರಯತ್ನ ಮಾಡುತಿದ್ದರು. ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿಶೇಷ ನೃತ್ಯ, ಹುಲಿವೇಷ ಕುಣಿತ, ವಾಲಿಬಾಲ್ ಮ್ಯಾಚ್ ಸಂದರ್ಭ ಬೊಂಬೆ ಕುಣಿತ ಸೇರಿದಂತೆ ಹಲವು ಬಗೆಗಳಲ್ಲಿ ನೆರೆದವರನ್ನು ಮನರಂಜಿಸುತಿದ್ದಾರೆ.

ವಿಶೇಷವಾಗಿ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಆಟಗಾರರನ್ನು ಹುರಿದುಂಬಿಸುತ್ತಾರೆ. ಸಿನಿಮಾ ಡೈಲಾಗ್‌ಗಳನ್ನು ಫಟಾಫಟ್ ಹೇಳಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಇದೀಗ ಚೇತನ್ ಎಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದ್ದಾರೆ ಅಂದರೆ ಕ್ರೀಡಾಕೂಟಕ್ಕೆ ಚೇತನ್ ಬರುತ್ತಾರಾ ಎಂದು ವಿಚಾರಿಸಿ ಇವರ ಮನೋರಂಜನೆ ನೋಡುವುದಕ್ಕೆಂದೆ ಬರುವವರು ಹೆಚ್ಚಾಗಿದ್ದಾರೆ. ಪಂದ್ಯಾಟ ಆಯೋಜನೆ ಮಾಡುವವರು ಸಹ ಚೇತನ್ ಅವರನ್ನು ಡಿಮ್ಯಾಂಡ್ ಮಾಡಿ ಕರೆಸಿಕೊಳ್ಳುತ್ತಾರೆ.

ಚೇತನ್ ಹಾಡಿನ ತಾಳಕ್ಕೆ ತಕ್ಕಂತೆ ಚಂಡೆಯವರೂ ಬಾರಿಸಿದ ವಿಡಿಯೋ ಸಾಮಾಜಿಕ ತಾಣದಲ್ಲಿ ಶಹಬ್ಬಾಸ್ ಗಿರಿ ಪಡೆದುಕೊಂಡಿದೆ. ಕ್ರಿಯೇಟಿವಿಟಿ ಮೂಲಕ ಪ್ರಯೋಗಗಳನ್ನು ಮಾಡುತ್ತಿರುವುದರಿಂದ ಎಲ್ಲರ ಮೆಚ್ಚುಗೆಯನ್ನು ಚೇತನ್ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್​)

Udupi, Cheer Boys, Cheer Girls, Sports, Social Media, Viral Video,

ಕರಾವಳಿಯ ಚಿಯರ್​​ ಬಾಯ್​ ಕರಾಮತ್ತಿಗೆ ಕ್ರೀಡಾಭಿಮಾನಿಗಳು ಫಿದಾ!ಉಡುಪಿ: ಐ.ಪಿ.ಎಲ್ ಸಂದರ್ಭ ಚಿಯರ್ ಗರ್ಲ್ಸ್‌ ಆಟಗಾರಗಾರಿಗೆ ಹುರಿದುಂಬಿಸುವುದನ್ನು ನೋಡಿರುತ್ತೀರಾ ಆಟಗಾರರಿಗಿಂತ ಚಿಯರ್ ಗರ್ಲ್ಸ್‌ಗಳೇ ಹೆಚ್ಚು ಮಿಂಚುತಿರುತ್ತಾರೆ. ಅದೇ ರೀತಿಯಾಗಿ ಕರಾವಳಿಯಲ್ಲಿ ಚಿಯರ್ ಬಾಯ್ ಒಬ್ಬರು ಭಾರೀ ಫೇಮಸ್ ಆಗಿದ್ದಾರೆ.ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ಹಗ್ಗಜಗ್ಗಾಟ ಪಂದ್ಯಾಟಗಳು ಕರಾವಳಿ ಭಾಗದಲ್ಲಿ ನಡೆಯುತ್ತಿರುತ್ತದೆ. ಅದರಲ್ಲೂ ಹೊನಲು ಬೆಳಕಿನ ಮ್ಯಾಚ್‌ಗಳು ನಡೆಯುವುದೇ ಹೆಚ್ಚು. ಇಂತಹ ಕಾರ್ಯಕ್ರಮಗಳಲ್ಲಿ ಕ್ರೀಡಾಸಕ್ತರನ್ನು ಮನೋರಂಜಿಸುವ ಚಿಯರ್ ಬಾಯ್ ಒಬ್ಬರು ಉಡುಪಿಯಲ್ಲಿ ಇದ್ದಾರೆ. ಅವರ ಹೆಸರೇ ಚೇತನ್​. #Udupi #CheerBoys #CheerGirls #Sports #SocialMedia #ViralVideo

Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಡಿಸೆಂಬರ್ 18, 2018