PHOTOS| ಈ ಕುಟುಂಬಕ್ಕೆ ‘ಕೃಷಿ’ಯೇ ಖುಷಿ: ಮಾಡರ್ನ್ ಉದ್ಯೋಗದಲ್ಲಿದ್ದರೂ ಬೇಸಾಯದ ಬೆನ್ನಿಗೆ ನಿಲ್ಲುವ ಮನೆಯ ಸದಸ್ಯರು!

ಉಡುಪಿ: ಬೇಸಾಯದಿಂದ ಏನೂ ಗಿಟ್ಟುವುದಿಲ್ಲ. ಬಿಜಿನೆಸ್ಸೇ ಎಲ್ಲವೆಂದು ಜನ ಹಳ್ಳಿ ಬಿಟ್ಟು ನಗರಗಳ ಕಡೆ ಮುಖ ಮಾಡುತ್ತಿದ್ದಾರೆ. ಕೃಷಿಯಿಂದ ಲಾಭವಿಲ್ಲ ಎಂದು ಎಲ್ಲವನ್ನೂ ಕೈಬಿಡುತ್ತಿದ್ದಾರೆ. ಆದರೆ, ಮನಸ್ಸಿದ್ದರೆ ಮಾರ್ಗವಿದೆ. ಕೈಗೆ ಕೈ ಜತೆ ಸೇರಿದರೆ ಮಣ್ಣಿನಲ್ಲಿ ಹೊನ್ನು ಬೆಳೆಯಬಹುದು ಎಂಬುದನ್ನು ಇಲ್ಲೊಂದು ಕೂಡು ಕುಟುಂಬ ತೋರಿಸಿಕೊಟ್ಟಿದೆ.

ಉಡುಪಿಯ ಮಟ್ಟುವಿನ ಚಿನ್ನಾರ್ ಅಂಚನ್ ಕುಟುಂಬ ಸದಸ್ಯರು ಕೃಷಿಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಚಿನ್ನಾರ್ ಅಂಚನ್ ಅವಿಭಕ್ತ ಕುಟುಂಬವಾಗಿತ್ತು. ಕಾಲ ಕ್ರಮೇಣ ಎಲ್ಲರೂ ಉದ್ಯೋಗ, ಸಂಸಾರಸ್ಥರಾದ ಕಾರಣದಿಂದ ಬೇರೆ ಬೇರೆ ಮನೆ ಮಾಡಿದ್ದಾರೆ. ಆದರೆ, ಕೃಷಿ ಚಟುವಟಿಕೆ ಸಂದರ್ಭ ಬಂದಾಗ ಕುಟುಂಬ ಸದಸ್ಯರು ಎಲ್ಲರು ಒಟ್ಟಿಗೆ ಸೇರುತ್ತಾರೆ. ಇಲ್ಲಿನ ಹಿರಿ ಜೀವದ ಏಳು ಜನ ಮಕ್ಕಳಿಂದ ಹಿಡಿದು ಮೊಮ್ಮಗುವಿನವರೆಗೂ ಎಲ್ಲರೂ ಗದ್ದೆಗೆ ಇಳಿದು ಭತ್ತ ನಾಟಿ ಕಾರ್ಯದಲ್ಲಿ ತೊಡಗುತ್ತಾರೆ.

ಇಂದಿನ ದಿನದಲ್ಲಿ ಬೇಸಾಯದ ಕೆಲಸಕ್ಕೆ ಜನರನ್ನು ಒಗ್ಗೂಡಿಸುವುದು ಎಲ್ಲಾ ರೈತರು ಎದುರಿಸುತ್ತಿರುವ ಸವಾಲಾಗಿದೆ. ಆದರೆ, ಈ ಚಿನ್ನಾರ್ ಅಂಚನ್ ಕುಟುಂಬ ಈ ವಿಷಯದಲ್ಲಿ ವಿಭಿನ್ನ. ಎಲ್ಲರೂ ಬೇಸಾಯದ ಕಾರ್ಯಕ್ಕಾಗಿ ಎಲ್ಲಿ ಯಾವುದೇ ಕೆಲಸದಲ್ಲಿ ಇದ್ದರೂ ಕೂಡಾ ಒಂದಾಗುತ್ತಾರೆ. ದೂರದ ಊರುಗಳಲ್ಲಿಯೂ ಮಾಡರ್ನ್ ಉದ್ಯೋಗದಲ್ಲಿರುವರೂ ಕೂಡಾ ಒಟ್ಟಾಗಿ ಮನೆಯ ಕೃಷಿ ಕೆಲಸದಲ್ಲಿ ತೊಡಗುತ್ತಾರೆ. ಐ.ಟಿ, ಬ್ಯೂಟಿಷೀಯನ್, ಸ್ಟೂಡೆಂಟ್ಸ್ ಆಗಿದ್ದರೂ ಕೈಯಲ್ಲಿ ಕೆಸರು ಮಾಡಿಕೊಳ್ಳುತ್ತಾರೆ. ಇದರಿಂದ ಒಂದು ಕಡೆ ಕೂಲಿಯಾಳುಗಳ ಕೊರತೆಯು ಇರುವುದಿಲ್ಲ, ಇನ್ನೊಂದು ಕಡೆ ತಮ್ಮ ಮನೆಯ ಭತ್ತ ಕೃಷಿಯನ್ನು ತಾವೇ ಮಾಡಿದ್ವಿ ಎಂಬ ಖುಷಿಯು ಇರುತ್ತದೆ ಎನ್ನುತ್ತಾರೆ ಕುಟುಂಬದವರು.

ಕೃಷಿ ಚಟುವಟಿಕೆ ಕಾರ್ಯದ ಬಳಿಕ ಎಲ್ಲರು ಜತೆಯಾಗಿ ಊಟ ಮಾಡಿ, ಉಭಯ ಕುಶಲೋಪರಿ ಹಂಚಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹೈ-ಫೈ ಲೈಫಿಗೆ ಮನಸೋತ ಮಂದಿ ಈಗ ಕೃಷಿಯತ್ತ ತಮ್ಮ ಚಿತ್ತ ನೆಡುತ್ತಿದ್ದಾರೆ. ಕೈ ಕೆಸರಾದರೆ ಮಾತ್ರ ಬಾಯಿ ಮೊಸರಾಗುವುದಕ್ಕೆ ಸಾಧ್ಯ ಎಂಬುದನ್ನು ತಿಳಿದಿರುವುದು ಒಳ್ಳೆಯ ಬೆಳವಣಿಗೆ. (ದಿಗ್ವಿಜಯ ನ್ಯೂಸ್​)

ಫೊ

One Reply to “PHOTOS| ಈ ಕುಟುಂಬಕ್ಕೆ ‘ಕೃಷಿ’ಯೇ ಖುಷಿ: ಮಾಡರ್ನ್ ಉದ್ಯೋಗದಲ್ಲಿದ್ದರೂ ಬೇಸಾಯದ ಬೆನ್ನಿಗೆ ನಿಲ್ಲುವ ಮನೆಯ ಸದಸ್ಯರು!”

Leave a Reply

Your email address will not be published. Required fields are marked *