ಬೆಂಗಳೂರು: ದಶಮಾನೋತ್ಸವ ಅಂಗವಾಗಿ ಬೆಂಗಳೂರಿನ ಉಡುಪ ಪ್ರತಿಷ್ಠಾನವು ಮೇ. 22 ಮತ್ತು 23ರಂದು ‘ಉಡುಪ ಸಂಗೀತೋತ್ಸವ’ ಹಮ್ಮಿಕೊಂಡಿದೆ. ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಭವನದಲ್ಲಿ ಸಂಜೆ 7 ಗಂಟೆಗೆ ಸಂಗೀತ ಸುಧೆ
ವಿಜೃಂಭಿಸಲಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಶ್ರೋತೃಗಳನ್ನು ರಂಜಿಸಲಿದ್ದಾರೆ. ಮೇ 22ರ ಸಂಜೆ 7ಕ್ಕೆ ತಾಳವಾದ್ಯ- ಕಛೇರಿಯಲ್ಲಿ ವಿದ್ವಾನ್ ಆನೂರು ಆರ್. ಅನಂತಕೃಷ್ಣ ಶರ್ಮ -ಮೃದಂಗ, ಪಂಡಿತ್ ಬಿಕ್ರಮ್ ಘೋಷ್ – ತಬಲಾ ಮತ್ತು ವಿದ್ವಾನ್ ಸಿ. ಪಿ. ವ್ಯಾಸ ವಿಠ್ಠಲ – ಖಂಜಿರಾ ವಾದನವಿದೆ. ನಂತರ ಖ್ಯಾತ ಗಾಯಕ ಪಂಡಿತ್ ವೆಂಕಟೇಶ ಕುಮಾರ್ ಗಾಯನವಿದೆ. ಶ್ರೀ ವ್ಯಾಸಮೂರ್ತಿ ಕಟ್ಟಿ- ಹಾರ್ಮೋನಿಯಂ ಮತ್ತು ಕೇಶವ ಜೋಶಿ ಅವರು ತಬಲಾ ಸಹಕಾರ ನೀಡುವರು.
ಮೇ 23ರ ಸಂಜೆ 7 ಗಂಟೆಗೆ ವಿದ್ವಾನ್ ಡಾ. ಎಲ್. ಸುಬ್ರಮಣ್ಯಂ ಅವರ ಪಿಟೀಲು ವಾದನ ಕಛೇರಿ ನೆರವೇರಲಿದೆ. ಇವರ ಜತೆ ವಿದ್ವಾನ್ ಅಂಬಿ ಸುಬ್ರಮಣ್ಯಂ-ಪಿಟೀಲು, ವಿ. ವಿ. ರಮಣ ಮೂರ್ತಿ-ಮೃದಂಗ, ಉಸ್ತಾದ್ ಫಜಲ್ ಖುರೇಷಿ- ತಬಲಾ, ತ್ರಿಪುಣಿತುರ ಎನ್. ರಾಧಾಕೃಷ್ಣನ್- ಘಟಂ ಮತ್ತು ವಿದುಷಿ ಲತಾ ರಾಮಾಚಾರ್ -ಖಂಜಿರಾ ಸಹಕಾರ ನೀಡಲಿದ್ದಾರೆ ಎಂದು ಫೌಂಡೇಷನ್ ಟ್ರಸ್ಟಿ ಸಂಧ್ಯಾ ಉಡುಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
