ಉತ್ತರಾಖಂಡದಲ್ಲಿ ಶೀಘ್ರ ಯುಸಿಸಿ; ಗಣರಾಜ್ಯೋತ್ಸವ ದಿನ ಜಾರಿ ಸಾಧ್ಯತೆ, ಅಧಿಕಾರಿಗಳಿಗೆ ತರಬೇತಿ ಶುರು

Uttarakhand UCC

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಬಹುನಿರೀಕ್ಷಿತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೊಳಿಸಲು ಸಿದ್ಧತೆ ನಡೆದಿದ್ದು, ಇದೇ ತಿಂಗಳ 26ರಂದು ಹೊಸ ಕಾಯ್ದೆ ಜಾರಿಗೆ ಬರುವ ನಿರೀಕ್ಷೆ ಇದೆ.

ಯುಸಿಸಿ ಜಾರಿ ಸಂಬಂಧ ಉತ್ತರಾಖಂಡ ಸರ್ಕಾರ ಸೋಮವಾರದಿಂದ ಅಧಿಕಾರಿಗಳಿಗೆ ತರಬೇತಿ ಆರಂಭಿಸಿದೆ. ಅಧಿಕಾರಿಗಳು ಯುಸಿಸಿ ಪೋರ್ಟಲ್ ಅನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನು ಕಲಿಯುತ್ತಿದ್ದಾರೆ. ಜನವರಿ 20ರ ವೇಳೆಗೆ ತರಬೇತಿ ಮುಕ್ತಾಯವಾಗಲಿದ್ದು, ಗಣರಾಜ್ಯೋತ್ಸವದ ದಿನದಿಂದಲೇ ಹೊಸ ನಿಯಮಗಳು ರಾಜ್ಯದಲ್ಲಿ ಜಾರಿಯಾಗಲಿದೆ ಎನ್ನಲಾಗುತ್ತಿದೆ.

ಹೊಸದಾಗಿ ಜಾರಿಗೆ ಬರಲಿರುವ ನಿಯಮಗಳಲ್ಲಿ ಮದುವೆ, ವಿಚ್ಛೇದನ, ಲಿವ್ ಇನ್ (ಸಹ ಜೀವನ) ರಿಜಿಸ್ಟ್ರೇಷನ್, ಲಿವ್ ಇನ್ ಸಂಬಂಧ ಅಂತ್ಯಗೊಳಿಸುವುದು, ಆಸ್ತಿಯ ಉತ್ತಾರಾಧಿಕಾರ, ಕಾನೂನು ಬದ್ಧ ಉತ್ತರಾಧಿಕಾರಿಗಳ ನೋಂದಣೆ ಸೇರಿ ಹಲವು ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಲಿವ್ ಇನ್ ರಿಲೇಷನ್ ನಲ್ಲಿರುವವರೂ ಸಹ ಯುಸಿಸಿಯಲ್ಲಿ ನೊಂದಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಲಿವ್ ಇನ್ ರಿಲೇಷನ್​ನಲ್ಲಿ ಇರುವವರು ತಮ್ಮ ಫೋಟೋ, ಆಧಾರ್ ಕಾರ್ಡ್ ಮಾಹಿತಿ ನೀಡಿ ನೋಂದಣೆ ಮಾಡಬೇಕು ಮತ್ತು ನೋಂದಣೆಗೆ ಸಾಕ್ಷಿಯಾಗುವವರು ವಿಡಿಯೋ ಹೇಳಿಕೆ ರೆಕಾರ್ಡ್ ಮಾಡುವುದು ಕಡ್ಡಾಯವಾಗಿದೆ.

ಲಿವ್ ಇನ್ ರಿಲೇಷನ್ ನಲ್ಲಿ 2 ವಿಧದ ನೋಂದಣೆ ಇದ್ದು, ಮೊದಲಿಗೆ ಉತ್ತರಾಖಂಡದಲ್ಲಿ ವಾಸಿಸುತ್ತಿರುವ ಸಂಗಾತಿಗಳು ನೋಂದಣೆ ಮಾಡಬೇಕು, ಎರಡನೆಯದು ದೇಶದ ಬೇರೆ ರಾಜ್ಯಗಳಲ್ಲಿ ವಾಸಿಸುತ್ತಿರುವ ಉತ್ತರಾಖಂಡದ ನಿವಾಸಿಗಳು ಈ ಕಾಯ್ದೆಯಡಿ ನೋಂದಣೆ ಮಾಡಬೇಕು.

ಏನಿದು ಯುಸಿಸಿ?: ಏಕರೂಪ ನಾಗರಿಕ ಸಂಹಿತೆಯಲ್ಲಿ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು, ನಿರ್ವಹಣೆ ಇತ್ಯಾದಿ ವಿಷಯಗಳಲ್ಲಿ ಎಲ್ಲಾ ಧರ್ಮದವರಿಗೂ ಒಂದೇ ಕಾನೂನು ಇರಲಿದೆ. ಪ್ರಸ್ತುತ ಭಾರತದಲ್ಲಿ ಏಕರೂಪ ಕ್ರಿಮಿನಲ್ ಕೋಡ್ ಮಾತ್ರ ಇದೆ. ಏಕರೂಪ ನಾಗರಿಕ ಸಂಹಿತೆ ಅಥವಾ ಕಾನೂನು ಜಾರಿಯಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. 1835 ರಲ್ಲಿ ಬ್ರಿಟಿಷ್ ಸರ್ಕಾರ ನೀಡಿದ್ದ ತನ್ನ ವರದಿಯಲ್ಲಿ ಅಪರಾಧಗಳು, ಸಾಕ್ಷ್ಯಗಳು ಮತ್ತು ಒಪ್ಪಂದಗಳಿಗೆ ಸಂಬಂಧಿಸಿ ಭಾರತೀಯ ಕಾನೂನಿನ ಕ್ರೋಡೀಕರಣದಲ್ಲಿ ಏಕರೂಪತೆ ಅಗತ್ಯವಿದೆ ಎಂದು ಹೇಳಿತ್ತು. ಅಂದೇ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂದು ಬ್ರಿಟಿಷರು ಹೇಳಿದ್ದರು. ಕಾರಣಾಂತರಗಳಿಂದ ಯುಸಿಸಿ ಜಾರಿಯನ್ನು ಮುಂದೂಡುತ್ತಾ ಬರಲಾಗಿತ್ತು.

ಪವಿತ್ರವಾದ ಕಾರ್ಯ: ಮಂಗಳವಾರ ದೇಶಾದ್ಯಂತ ಉತ್ತರಾಯಣಿ ಹಬ್ಬವನ್ನು ಮಕರ ಸಂಕ್ರಾಂತಿ, ಲೋಹಿರಿ, ಪೊಂಗಲ್, ಬಿಹು ಸೇರಿದಂತೆ ವಿವಿಧ ಹೆಸರುಗಳಲ್ಲಿ ಆಚರಿಸಲಾಗುತ್ತಿದೆ. ಏಕರೂಪ ನಾಗರಿಕ ಸಂಹಿತೆ ಜಾರಿ ಸಹ ಪವಿತ್ರವಾದ ಕಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇದೇ ತಿಂಗಳಲ್ಲಿ ಯುಸಿಸಿ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಸಿಎಂ ಧಾಮಿ ತಿಳಿಸಿದ್ದಾರೆ. ಆದರೆ ಹೊಸ ನಿಯಮ ಯಾವಾಗ ಜಾರಿಗೆ ಬರಲಿದೆ ಎಂಬುದನ್ನು ತಿಳಿಸಲಿಲ್ಲ. ಜನವರಿ 23ರಂದು ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಬಳಿಕ ಯುಸಿಸಿ ಜಾರಿಗೆ ಬರುವ ಸಾಧ್ಯತೆ ಇದೆ.

ಪ್ರಮುಖ ಅಂಶಗಳು

  • ಮದುವೆ ಆಗಲು ಮಹಿಳೆಯರಿಗೆ 18 ವರ್ಷ, ಪುರುಷರಿಗೆ 21 ವರ್ಷ ತುಂಬಿರಬೇಕು. ವಿವಾಹ, ವಿಚ್ಛೇದನ ನೋಂದಣಿ ಕಡ್ಡಾಯ.
  • ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಆಸ್ತಿಯಲ್ಲಿ ಗಂಡು, ಹೆಣ್ಣು ಮಕ್ಕಳಿಗೆ ಸಮಾನ ಆನುವಂಶಿಕ ಹಕ್ಕು
  • ಲಿವ್-ಇನ್ ಸಂಬಂಧಗಳ ನೋಂದಣಿ ಕಡ್ಡಾಯ. ಇಂಥವರಿಗೆ ಕಾನೂನು ಮಾನ್ಯತೆ ನೀಡುತ್ತದೆ. ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುವುದು ಇದರ ಉದ್ದೇಶ.
  • ಎಲ್ಲಾ ವ್ಯಕ್ತಿಗಳಿಗೆ ಬಹುಪತ್ನಿತ್ವ ಸಂಪೂರ್ಣ ನಿಷೇಧ
  • ಯುಸಿಸಿ ಕಾಯ್ದೆಯು ಪರಿಶಿಷ್ಟ ಪಂಗಡದ ಜನರಿಗೆ ಅನ್ವಯಿಸುವುದಿಲ್ಲ

ಗೌತಮ್​ ಗಂಭೀರ್​ ಬಳಿಕ ಸಂಕಷ್ಟದಲ್ಲಿ ಸಹಾಯಕ ಸಿಬ್ಬಂದಿ; BCCI ನಿರ್ಧಾರದ ಕುರಿತು ಹಿರಿಯ ಅಧಿಕಾರಿಯ ಹೇಳಿಕೆ ವೈರಲ್​

ದುರ್ಘಟನೆ ನಡೆಯುತ್ತದೆ ಎಂದು ಭವಿಷ್ಯ ಹೇಳಿದ್ದರು; ಅಪಘಾತದ ಕುರಿತು ಅಸಲಿ ವಿಚಾರ ಬಿಚ್ಚಿಟ್ಟ ಸಚಿವೆ Laxmi Hebbalkar ಸಹೋದರ

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…