More

    ಅರ್ಜಿ ಹಾಕದಿದ್ದರೂ ಸಿಗುತ್ತೆ ಪಿಂಚಣಿ; ಮನೆ ಬಾಗಿಲಲ್ಲೇ ಪಾವತಿ, ಉಡುಪಿಯಲ್ಲಿ ಪ್ರಾಯೋಗಿಕ ಜಾರಿ

    ಸರ್ಕಾರ ನೀಡುವ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸದಿದ್ದರೂ ಮುಂದಿನ ದಿನಗಳಲ್ಲಿ ಫಲಾನುಭವಿಗಳ ಮನೆ ಬಾಗಿಲಿಗೇ ಪಿಂಚಣಿ ಹುಡುಕಿಕೊಂಡು ಬರಲಿದೆ. ಈ ಯೋಜನೆಯನ್ನು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ನಾಲ್ಕೈದು ತಿಂಗಳಿಂದ ಕೆಲಸ ನಡೆಯುತ್ತಿದೆ. ಬಳಿಕ ರಾಜ್ಯಾದ್ಯಂತ ವಿಸ್ತರಿಸಲು ಕಂದಾಯ ಇಲಾಖೆ ನಿರ್ಧರಿಸಿದೆ.

    ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರು, ವಿಚ್ಛೇದಿತ ಮಹಿಳೆಯರು, ಲೈಂಗಿಕ ಅಲ್ಪಸಂಖ್ಯಾತರು ಸಹಿತ ಪಿಂಚಣಿ ಪಡೆಯುವ ಇತರರು ಮನೆ ಬಾಗಿಲಲ್ಲೇ ಸೌಲಭ್ಯ ಪಡೆಯಲಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿ, ಸಿಬ್ಬಂದಿ ಸ್ವಯಂಪ್ರೇರಿತವಾಗಿ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ಮಂಜೂರು ಮಾಡುವ ವ್ಯವಸ್ಥಿತ ಕ್ರಮದ ಬಗ್ಗೆ ಈಗಾಗಲೇ ತಯಾರಿ ಆರಂಭಿಸಿದ್ದಾರೆ.

    3,869 ಮಂದಿಗೆ ಮಂಜೂರಾತಿ

    ಕಳೆದ ಮೂರು ತಿಂಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ 3,869 ಪಿಂಚಣಿ ಮಂಜೂರಾತಿ ನೀಡಲಾಗಿದೆ. ಈ ಪೈಕಿ 1,938 ಪಿಂಚಣಿ ಮಂಜೂರಾತಿಯನ್ನು ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಮಾಡಿದ್ದಾರೆ. ಈ ದಾಖಲೆಯನ್ನು ಕಂದಾಯ ಇಲಾಖೆಗೆ ಸಲ್ಲಿಸಲಾಗಿದ್ದು, ಪಿಂಚಣಿಗೆ ಆಯ್ಕೆಯಾದ ಫಲಾನುಭವಿಗಳಿಗೆ ಕೆಲವೇ ದಿನಗಳಲ್ಲಿ ಪಿಂಚಣಿ ಮಂಜೂರಾತಿ ಪತ್ರ ಕೈಸೇರಲಿದೆ.

    ಒಮ್ಮೆ ಹೋಗಿಬನ್ನಿ…

    ಪಿಂಚಣಿ ಪಡೆಯಲು ತಾಲೂಕು ಕಚೇರಿಗೆ ದಾಖಲೆ ಸಮೇತ ಅರ್ಜಿ ಸಲ್ಲಿಸಬೇಕು. ಕೆಲವರಿಗೆ ಈ ಬಗ್ಗೆ ಮಾಹಿತಿ ಇಲ್ಲದೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ಭದ್ರತಾ ಯೋಜನೆಗಳಡಿ ಫಲಾನುಭವಿ ಗಳಿಗೆ ಪಿಂಚಣಿ ಮಂಜೂರು ಸಲುವಾಗಿ ಒಟಿಸಿ (ಓವರ್ ದ ಕೌಂಟರ್) ದಾಖಲೆ, ಪಡಿತರಚೀಟಿ ಹಾಗೂ ಮರಣ ಪ್ರಮಾಣಪತ್ರ ನೀಡುವ ದಾಖಲೆ ಗಳನ್ನು ಪರಿಶೀಲಿಸಿ ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ತೆರಳಿ ಫಲಾನುಭವಿಯನ್ನು ಗುರುತಿಸುತ್ತಾರೆ. ಅವರಿಂದಲೇ ಎಲ್ಲ ದಾಖಲೆ ಪಡೆದು ಸ್ವಯಂ ಪಿಂಚಣಿ ಮಂಜೂರಾತಿಗೆ ಕ್ರಮಕೈಗೊಳ್ಳಲಾಗುತ್ತದೆ.

    ಉಡುಪಿಯಲ್ಲಿ ಯೋಜನೆಯನ್ನು ಪ್ರಯೋಗಿಕವಾಗಿ ಜಾರಿಗೆ ತರಲಾಗಿದೆ. ಶೀಘ್ರ ರಾಜ್ಯ ಮಟ್ಟದಲ್ಲಿ ವಿಸ್ತರಿಸ ಲಾಗುವುದು.

    | ಆರ್.ಅಶೋಕ್ ಕಂದಾಯ ಸಚಿವ  

    | ಅವಿನ್ ಶೆಟ್ಟಿ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts