ಹುಬ್ಬಳ್ಳಿ : ‘ಯು.ಐ.’ ಪ್ಯಾನ್ಇಂಡಿಯಾ ಸಿನೆಮಾ ವಿಶಿಷ್ಟ ಕಲ್ಪನೆಯೊಂದಿಗೆ ನಿರ್ವಿುಸಲಾಗಿದೆ. ಚಿತ್ರ ವೀಕ್ಷಿಸಿದ ನಂತರವೇ ಅದನ್ನು ವಿಶ್ಲೇಷಿಸಬಹುದಾಗಿದೆ ಎಂದು ಚಿತ್ರದ ನಟ, ನಿರ್ದೇಶಕ ಉಪೇಂದ್ರ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷದ ಸತತ ಪ್ರಯತ್ನದ ನಂತರ ಯುಐ ಚಿತ್ರ ನಿರ್ವಣಗೊಂಡಿದೆ. ಡಿ. 20ರಂದು ಭಾರತ ಹಾಗೂ ವಿದೇಶಗಳಲ್ಲಿ ತೆರೆಕಾಣಲಿದೆ ಎಂದರು.
ಕನ್ನಡ, ಹಿಂದಿ, ತಮಿಳು, ತೆಲಗು, ಮಲಿಯಾಳಿ ಭಾಷೆಯಲ್ಲಿ ಚಿತ್ರ ನಿರ್ವಿುಸಲಾಗಿದೆ. ಈ ಸಿನೆಮಾ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಲಿದೆ. ಈ ಸಿನೆಮಾದ ಎರಡನೇ ಭಾಗದ ಅವಶ್ಯಕತೆ ಇದೆಯೆಂದು ಪ್ರೇಕ್ಷಕರು ಇಚ್ಛಿಸಿದರೆ ಅದನ್ನೂ ನಿರ್ವಿುಸಲಾಗುವುದು ಎಂದು ತಿಳಿಸಿದರು.
ಪ್ರೇಕ್ಷಕರು ಬುದ್ಧಿವಂತರು. ಅವರ ಮನಸ್ಥಿತಿ ಅರಿತು ಈ ಚಿತ್ರ ನಿರ್ವಿುಸಲಾಗಿದೆ. ‘ಎ’ ಚಿತ್ರಕ್ಕಿಂತ ವಿಭಿನ್ನ ಅನುಭವವನ್ನು ‘ಯುಐ’ ಚಿತ್ರ ನೀಡಲಿದೆ ಎಂದು ಹೇಳಿದರು.
ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ, ನವೀನ, ಲಹರಿ ಸಂಸ್ಥೆಯ ವೇಣು, ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣವರ, ವಿಜಯಕುಮಾರ ಅಪ್ಪಾಜಿ ಸುದ್ದಿಗೋಷ್ಠಿಯಲ್ಲಿ ಇದ್ದರು.