ಅಜ್ಜಿಯ ಟೈಪಿಂಗ್​ ವೇಗಕ್ಕೆ ಮನಸೋತರು ವೀರೂ !

ಭೋಪಾಲ್​: ಇತ್ತೀಚೆಗೆ ಅಜ್ಜಿಯೊಬ್ಬರು ಸ್ಪೀಡ್​ ಆಗಿ ಟೈಪಿಂಗ್​ ಮಷಿನ್​ನಲ್ಲಿ ಟೈಪ್​ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿತ್ತು. ಈಗ ಕ್ರಿಕೆಟಿಗ ವಿರೇಂದ್ರ ಸೆಹವಾಗ್​ ತಮ್ಮ ಟ್ವಿಟರ್​ನಲ್ಲಿ ಆ ವಿಡಿಯೋ ಶೇರ್​ ಮಾಡಿದ್ದಲ್ಲದೆ ಅವರೊಬ್ಬ ಸೂಪರ್​ ವಿಮನ್​ ಎಂದಿದ್ದಾರೆ.

ಲಕ್ಷ್ಮೀ ವರ್ಮಾ (72) ಭೋಪಾಲ್​ನ ಸೆಹೋರ್​ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಟೈಪಿಸ್ಟ್​ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಲ್ಲಿ ಕೆಲಸ ಮಾಡುತ್ತಿರುವ ವೀಡಿಯೋವೊಂದು ಟ್ವಿಟರ್​, ಫೇಸ್​ಬುಕ್​ನಲ್ಲಿ ವೈರಲ್​ ಆಗಿತ್ತು. ಹಾಗೇ ಅನೇಕ ಜನರು ಅದನ್ನು ಶೇರ್​, ರೀಟ್ವಿಟ್​ ಮಾಡಿ ಲಕ್ಷ್ಮೀ ವರ್ಮಾ ಸೆಲಿಬ್ರಿಟಿಯಾಗಿದ್ದರು.

ಈಗ ಆ ವೀಡಿಯೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿರುವ ವೀರೇಂದ್ರ ಸೆಹವಾಗ್​, ಆಕೆ ನನ್ನ ಕಣ್ಣಿಗೆ ಸೂಪರ್​ ವಿಮನ್​ನಂತೆ ಕಾಣಿಸುತ್ತಾರೆ. ಮಧ್ಯಪ್ರದೇಶದ ಸೆಹೋರ್​ನಲ್ಲಿ ವಾಸವಾಗಿರುವ ಆಕೆಯಿಂದ ಯುವ ಜನತೆ ಕಲಿಯುವುದು ಸಾಕಷ್ಟಿದೆ. ಕೆಲಸದಲ್ಲಿನ ವೇಗ ಮಾತ್ರವಲ್ಲ. ಕಲಿಯುವವರಿಗೆ ಯಾವ ಕೆಲಸವೂ ಚಿಕ್ಕದಲ್ಲ, ಯಾವ ವಯಸ್ಸೂ ದೊಡ್ಡದಲ್ಲ ಎಂಬುದನ್ನು ತೋರಿಸಿದ್ದಾರೆ. ಅವರಿಗೆ ನನ್ನ ಪ್ರಣಾಮಗಳು ಎಂದು ಟ್ವೀಟ್​ ಮಾಡಿದ್ದಾರೆ.

ಲಕ್ಷ್ಮೀ ವರ್ಮಾ ಜಿಲ್ಲಾಧಿಕಾರಿ ಕಚೇರಿಯಲ್ಲಿ 2008ರಿಂದ ಟೈಪಿಸ್ಟ್​ ಆಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಯಾವುದೋ ವಿವಾದದಲ್ಲಿ ಪತಿ ದೂರವಾದ ನಂತರ ಇಂಧೋರ್​ನ ಮುದ್ರಣ ಸಂಸ್ಥೆಯೊಂದಕ್ಕೆ ಸೇರಿದ್ದರು. ಅಲ್ಲಿಯೇ ಟೈಪಿಂಗ್​ ಕಲಿತರು. ಅಲ್ಲಿಂದ ಸೆಹೋರ್​ಗೆ ಬಂದು ಜಿಲ್ಲಾಧಿಕಾರಿ ಬಳಿ ಕೆಲಸ ಕೇಳಿದಾಗ ಇವರ ಟೈಪಿಂಗ್​ ವೇಗವನ್ನು ನೋಡಿ ಅಂದಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟರು. ಅಂದಿನಿಂದಲೂ ಇಲ್ಲಿಯೇ ಟೈಪಿಸ್ಟ್ ಆಗಿದ್ದಾರೆ.

Leave a Reply

Your email address will not be published. Required fields are marked *