ಈಜಲೆಂದು ನೀರಿಗಿಳಿದ ಯುವಕರಿಬ್ಬರು ಹೊರಗೆ ಬರಲಿಲ್ಲ

ಚಾಮರಾಜನಗರ: ಸ್ನೇಹಿತರೆಲ್ಲ ಸೇರಿ ಕೆರೆಗೆ ಈಜಲು ಹೋಗಿದ್ದಾರೆ. ಆದರೆ ಅವರಲ್ಲಿ ಇಬ್ಬರು ಯುವಕರು ನೀರಿನಿಂದ ಹೊರಗೆ ಬಂದಿಲ್ಲ.

ಗುಂಡ್ಲುಪೇಟೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ನಂದೀಶ್​ (23) ಹಾಗೂ ತಮಿಳನ್​ (29) ಈಜಲೆಂದು ಹೋಗಿ ನೀರುಪಾಲಾಗಿದ್ದಾರೆ. ಇವರಿಬ್ಬರೂ ತೆರಕಣಾಂಬಿ ನಿವಾಸಿಗಳು. ಈಜಲೆಂದು ಹುತ್ತೂರು ಕೆರೆಗೆ ತೆರಳಿದ್ದರು. ಇವರಿಬ್ಬರಿಗಾಗಿ ಹುಡುಕಾಟ ನಡೆದಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.

ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.