ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಕೂಲಿ ಕಾರ್ಮಿಕರಿಬ್ಬರು ಆತ್ಮಹತ್ಯೆ

ಶಿವಮೊಗ್ಗ: ಹೊಸನಗರದ ಮಾರಿಗುಡ್ಡದ ಸ್ಮಶಾನದಲ್ಲೇ ಮರಕ್ಕೆ ನೇಣು ಬಿಗಿದು ಕೂಲಿ ಕಾರ್ಮಿಕರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಸನಗರದ ಶ್ರೀಕಾಂತ್(29) ಮತ್ತು ಪ್ರಕಾಶ (32) ಎಂಬವರು ಒಂದೇ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ.

ಮೃತರಿಬ್ಬರೂ ಸ್ನೇಹಿತರಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *