ಕಾಡು ಹಂದಿ ಬೇಟೆಗಾರರಿಬ್ಬರ ಬಂಧನ


ವಿಜಯವಾಣಿ ಸುದ್ದಿಜಾಲ ಸೋಮವಾರಪೇಟೆ
ಇಬ್ಬರು ಕಾಡು ಹಂದಿ ಬೇಟೆಗಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾನುವಾರ ಸೂರ್ಲಬ್ಬಿ ಗ್ರಾಮದಲ್ಲಿ ಬಂಧಿಸಿದ್ದಾರೆ.
ಕುಂಬಾರಗಡಿಗೆ ಗ್ರಾಮದ ಯು.ಬಿ. ಸುಬ್ರಮಣಿ, ಸೂರ್ಲಬ್ಬಿಯ ಎಂ.ಪಿ. ಗಣೇಶ್ ಬಂಧಿತರು. ಮತ್ತಿಬ್ಬರು ಪರಾರಿಯಾಗಿದ್ದಾರೆ. ಇವರು ಪಶ್ಚಿಮಘಟ್ಟ ತಪ್ಪಲಿನಲ್ಲಿ ಕಾಡು ಹಂದಿ ಕೊಂದು ಸೂರ್ಲಬ್ಬಿ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಹಂಚಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಅವರಿಂದ ಎರಡು ಬಂದೂಕು, ಒಂದು ಬೈಕ್ ಮತ್ತು ಕತ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಸಿಎಫ್ ನೆಹರು, ಆರ್‌ಎಫ್‌ಒ ಶಮಾ ಮಾರ್ಗದರ್ಶನದಲ್ಲಿ ಸಾಮಾಜಿಕ ಆರಣ್ಯಾಧಿಕಾರಿ ನಮನ್, ಡಿಆರ್‌ಎಫ್‌ಒಗಳಾದ ಚಂದ್ರೇಶ್, ಶಶಿ, ಮನು ಅರಣ್ಯ ರಕ್ಷಕರಾದ ಭರಮಪ್ಪ, ಯತೀಶ್, ಚಾಲಕ ನಂದೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *