ಕಲಬುರಗಿಯಲ್ಲಿ ಇಬ್ಬರ ಅಪರಿಚಿತ ಶವ ಪತ್ತೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಗುರುವಾರ ಬೆಳ್ಳಂಬೆಳಗ್ಗೆ ನಗರದಲ್ಲಿ ಇಬ್ಬರು ವ್ಯಕ್ತಿಗಳ ಪತ್ತೆಯಾಗಿವೆ. ಜೋಡಿ ಕೊಲೆಯಾಗಿದೆ ಎಂಬ ಸುದ್ದಿಹರಡಿ ಜನರು ಗಾಬರಿಗೊಂಡು ಬೆಚ್ಚಿ ಬೀಳುವಂತಾಗಿತ್ತು. ಇಬ್ಬರು ಯಾರು ಎಂಬ ಗುರುತು ಪತ್ತೆಯಾಗಿಲ್ಲ.

ನಗರದ ಎಸ್.ಎಂ.ಪಂಡಿತ ರಂಗ ಮಂದಿರದ ಬಳಿಯಿರುವ ಹೊಟೇಲ್ವೊಂದರ ಮುಂಭಾಗದ ಶೌಚಗೃಹ ಹಿಂಭಾಗದಲ್ಲಿನ ಕಂಟಿಯಲ್ಲಿ ಸುಮಾರು 30ರಿಂದ 40 ವರ್ಷದೊಳಗಿನ ವ್ಯಕ್ತಿಯ ಶವ ಪತ್ತೆಯಾಗಿದೆ. ಆತನನ್ನು ಮುಖವನ್ನು ದುಷ್ಕಮರ್ಿಗಳು ಕಲ್ಲಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಪೊದೆಯಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ. ಕೈಮೇಲೆ ಅಣವೀರ ಎಂದು ಹಚ್ಚೆ ಇದೆ.

ಮುಖವನ್ನು ಜಜ್ಜಿದ್ದರಿಂದ ಗುರುತಿಸಲಾಗಿಲ್ಲ. ಅಲ್ಲದೆ ಈ ಕೊಲೆ ಎರಡು ದಿನಗಳ ಹಿಂದೆ ನಡೆದಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಪಕ್ಕದಲ್ಲಿಯೇ ಸಾರ್ವಜನಿಕ ಉದ್ಯಾನದ ಟೌನ್ಹಾಲ್ ಬಳಿಯಲ್ಲಿ ಬೋರಲಾಗಿ ಬಿದ್ದು ಗಾಯಗೊಂಡು ಮೃತಪಟ್ಟಿರುವ ರೀತಿಯಲ್ಲಿ 30ರಿಂದ 40 ವರ್ಷದೊಳಗಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಆತನ ಅಮಲಿನಲ್ಲಿ ಸಮೀಪದಲ್ಲಿರುವ ಕಲ್ಲಿನ ಮೇಲೆ ಕುಳಿತುಕೊಂಡಾಗ ಆಯತಪ್ಪಿ ಬಿದ್ದು ಮೃತಪಟ್ಟಿರುವ ಇಲ್ಲವೇ ಹೃದಯಾಘಾತವಾಗಿ ಬಿದ್ದು ರಕ್ತ ವಾಂತಿಕೊಂಡು ಸತ್ತಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಅಸಹಜ ಸಾವು ಎಂದು ದೂರು ದಾಖಲಿಸಿಕೊಳ್ಳಲಾಗಿದೆ.

ಜೋಡಿ ಕೊಲೆ ನಡೆದಿದೆ ಎಂಬ ಸುದ್ದಿ ಹರಡುತ್ತಲೇ ಸುತ್ತಲಿನ ಜನರು ಎರಡು ಘಟನಾ ಸ್ಥಳಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜಮಾಗೊಂಡರು. ಶವಗಳನ್ನು ನೋಡಿ ಜನರು ಆತಂಕ ವ್ಯಕ್ತಪಡಿಸಿದರು. ನಿಯಂತ್ರಿಸಲು ಪೊಲೀಸರು ಹೆಣಗಾಡುವಂತಾಯಿತು. ಸುದ್ದಿ ಅರಿಯುತ್ತಲೇ ಎಸ್ಪಿ ಎನ್.ಶಶಿಕುಮಾರ, ಡಿಎಸ್ಪಿ ಎಸ್.ಎಸ್.ಹುಲ್ಲೂರ, ಪಾಂಡುರಂಗಯ್ಯ, ಇನ್ಸ್ಪೆಕ್ಟರ್ ಶ್ರೀಮಂತ ಇಲ್ಲಾಳ ಮತ್ತು ಸಿಬ್ಬಂದಿ ಭೇಟಿ ನೀಡಿದರು. ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.

ಇಬ್ಬರ ಶವಗಳು ಪತ್ತೆಯಾಗಿವೆ. ಯಾರೆಂಬ ಗುರುತು ಪತ್ತೆಯಾಗಿಲ್ಲ. ಅದರಲ್ಲಿ ಒಬ್ಬನ ಮುಖವನ್ನು ಕಲ್ಲಿಂದ ಜಜ್ಜಿ ಕೊಲೆ ಮಾಡಲಾಗಿದೆ. ಇನ್ನೊಬ್ಬನದು ಕೊಲೆಯಲ್ಲ, ಅಸಹಜ ಸಾವು ಇರುವ ಸಾಧ್ಯತೆಯಿದೆ. ವಾರಸುದಾರರನ್ನು ಶೋಧ ಮಾಡಲಾಗುತ್ತಿದೆ. ಎರಡು ಘಟನೆಗಳ ಕುರಿತು ತನಿಖೆ ನಡೆಸಲಾಗುವುದು.
| ಎನ್.ಶಶಿಕುಮಾರ ಎಸ್ಪಿ ಕಲಬುರಗಿ