More

    ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಸ್ನೇಹಿತನ್ನು ಕಾಪಾಡಲು ನೀರಿಗೆ ಧುಮುಕಿದ ಈಜು ಬಾರದ ವಿದ್ಯಾರ್ಥಿ; ಇಬ್ಬರೂ ನೀರುಪಾಲು

    ಹಾಸನ: ಸಕಲೇಶಪುರ ಹೇಮಾವತಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾಗಿದ್ದಾರೆ.

    ಪ್ರೇಮನಗರ ಬಡಾವಣೆಯಲ್ಲಿರುವ ಬಿಸಿಎಂ ಹಾಸ್ಟೆಲ್​ ವಿದ್ಯಾರ್ಥಿಗಳಾದ ದಯಾನಂದ (17) ಮತ್ತು ಪ್ರಸಾದ್​ (18) ಮೃತರು. ದಯಾನಂದ್​ ಅವರು ಹೆನ್ನಾಲಿ ಗ್ರಾಮದವರಾಗಿದ್ದು ಪ್ರಥಮ ಪಿಯುಸಿ ಓದುತ್ತಿದ್ದರು. ಹಾಗೇ ಪ್ರಸಾದ್​ ಚಿಕ್ಕಸತ್ತಿಗಾಲ್​ ಗ್ರಾಮದವರಾಗಿದ್ದು ದ್ವಿತೀಯ ಪಿಯುಸಿ ಓದುತ್ತಿದ್ದರು.

    ಹಾಸ್ಟೆಲ್​ ಸಮೀಪವೇ ಇರುವ ಕಪ್ಪಿನಕೋಡಿ ಸಮೀಪದ ಹೇಮಾವತಿ ನದಿಗೆ ಮಧ್ಯಾಹ್ನ ಈಜಲು ತೆರಳಿದ್ದರು. ಈ ವೇಳೆ ದಯಾನಂದ್​ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ನೋಡಿ ಪ್ರಸಾದ್​ ನೀರಿಗೆ ಧುಮುಕಿದ್ದಾರೆ. ಆದರೆ ಪ್ರಸಾದ್​ಗೂ ಈಜು ಬರುತ್ತಿರಲಿಲ್ಲ. ಇಬ್ಬರೂ ನೀರುಪಾಲಾಗಿದ್ದಾರೆ.

    ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಅಗ್ನಿಶಾಮಕದ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts