ಹರಪನಹಳ್ಳಿ: ತಾಲೂಕಿನ ಕರೇಕಾನಹಳ್ಳಿಯಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ರಸ್ತೆ ಕಾಮಗಾರಿ ಉದ್ಘಾಟನೆ ವೇಳೆ ವ್ಯಕ್ತಿಯೊಬ್ಬ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಕರೇಕಾನಹಳ್ಳಿಯ ಹನುಮಂತ ಹಲ್ಲೆ ಮಾಡಿದವ. ಶಾಸಕಿ ಎಂ.ಪಿ.ಲತಾ ಅವರು ರಸ್ತೆ ಕಾಮಗಾರಿ ಉದ್ಘಾಟನೆಗೆಂದು ಗ್ರಾಮಕ್ಕೆ ತೆರಳಿದಾಗ ಅವರ ಬಂದೋಬಸ್ತ್‌ಗಾಗಿ ಹರಪನಹಳ್ಳಿ ಠಾಣೆ ಪೇದೆಗಳಾದ ಗುರುಬಸವರಾಜ್ ಡಿ. ಹಾಗೂ ಗೋಪಿಚಂದ್ ಆರ್. ತೆರಳಿದ್ದರು.
ಈ ವೇಳೆ ಹನುಮಂತ ಎಂಬುವರು ನಾನು ಶಾಸಕರೊಂದಿಗೆ ಮಾತನಾಡಬೇಕೆಂದು ಹಠ ಹಿಡಿದಿದ್ದಾನೆ. ಪೊಲೀಸರು ಉದ್ಘಾಟನೆ ಕಾರ್ಯಕ್ರಮ ಬಳಿಕ ಮಾತನಾಡಿ ಎಂದಿದ್ದಾರೆ. ಇದನ್ನು ಕೇಳದ ಹನುಮಂತ, ಗಲಾಟೆ ಮಾಡಿದ್ದಾನೆ. ಸುಮ್ಮನಿರಲು ಹೇಳಿದಾಗ ಪೊಲೀಸರ ಮೇಲೆ ಕಟ್ಟಿಗೆ ಹಾಗೂ ಕೈಯಿಂದ ಹಲ್ಲೆ ಮಾಡಿದ್ದಾನೆ. ಹನುಮಂತನನ್ನು ವಶಕ್ಕೆ ಪಡೆದ ಪೊಲೀಸರು, ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.