ಬೆಂಗಳೂರು: ಒಂದೇ ಮಾತಿನಲ್ಲಿ ಹೇಳುವುದಾದರೆ ಇವರಿಬ್ಬರು ಕಳ್ಳಪೊಲೀಸರು. ಅಂದರೆ ಪೊಲೀಸರಾಗಿದ್ದರೂ ಕಳ್ಳತನಕ್ಕೆ ಇಳಿದು ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಇಬ್ಬರು ಕಳ್ಳಪೊಲೀಸರನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಹೆಡ್ ಕಾನ್ಸ್ಟೆಬಲ್ ಮೋಹನ್, ಮಹದೇವಪುರ ಠಾಣೆಯ ಹೆಡ್ ಕಾನ್ಸ್ಟೆಬಲ್ ಮಮ್ತೇಶ್ ಗೌಡ ಬಂಧಿತ ಪೊಲೀಸರು. ಇವರಿಬ್ಬರನ್ನು ಬಂಧಿಸಿರುವ ಹೊಸಕೋಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇವರು ಕಳ್ಳಸಾಗಣೆ ಮಾಡುತ್ತಿದ್ದವರನ್ನು ತಡೆದು ಪೊಲೀಸರು ಎಂದು ಬೆದರಿಸಿ ಅವರಲ್ಲಿದ್ದ ರಕ್ತಚಂದನವನ್ನು ದೋಚುತ್ತಿದ್ದರು. ಹೀಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಕಳೆದ ಡಿ. 15ರಂದು ಟಾಟಾ ಏಸ್ವೊಂದನ್ನು ತಡೆದು ಸ್ಮಗ್ಲರ್ಸ್ಗೆ ಬೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ರಕ್ತಚಂದನವನ್ನು ದೋಚಿದ್ದ ಇವರು ಈಗ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.