ಅಪಘಾತಕ್ಕೆ ಇಬ್ಬರು ಬಲಿ

ಟಿಪ್ಪರ್ ಲಾರಿ-ಬುಲೆಟ್ ಮುಖಾಮುಖಿ ಡಿಕ್ಕಿ>

ಬಂಟ್ವಾಳ: ಅಣ್ಣಳಿಕೆ-ಹಿರ್ಣಿ ರಸ್ತೆ ನಡುವಿನ ಕುಮೇರ್ ಎಂಬಲ್ಲಿ ಬುಧವಾರ ಟಿಪ್ಪರ್ ಲಾರಿ ಮತ್ತು ಬುಲೆಟ್ ಮುಖಾಮುಖಿ ಡಿಕ್ಕಿಯಾಗಿ ಬುಲೆಟ್ ಸವಾರರಿಬ್ಬರು ಮೃತಪಟ್ಟಿದ್ದಾರೆ.

ಸಿದ್ಧಕಟ್ಟೆಯ ಹಿರ್ಣಿ ನಿವಾಸಿ ರಮೇಶ್ ಪೂಜಾರಿ ಎಂಬುವರ ಪುತ್ರ, ಬೈಕ್ ಸವಾರ ಸುರೇಂದ್ರ(33), ಸಹ ಸವಾರರಾದ, ಮೃತರ ಸಂಬಂಧಿ ಜಯಲಕ್ಷ್ಮಿ(36) ಮೃತಪಟ್ಟವರು.

ಇಬ್ಬರು ಬೈಕ್‌ನಲ್ಲಿ ಕೊಡಿಯಾಲ್‌ಬೈಲ್‌ಗೆ ತೆರಳುತ್ತಿದ್ದಾಗ ಕರ್ಪೆ ಕಡೆ ಬರುತ್ತಿದ್ದ ಟಿಪ್ಪರ್ ಲಾರಿ ಅಣ್ಣಳಿಕೆ-ಹಿರ್ಣಿ ಒಳರಸ್ತೆಯ ಕುಮೇರ್ ಎಂಬಲ್ಲಿ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ, ಸಾವು ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಟ್ವಾಳ ಟ್ರಾಫಿಕ್ ಎಸ್‌ಐ ಮಂಜುನಾಥ್, ಎಎಸ್‌ಐ ಎಂ.ಕೆ.ಕುಟ್ಟಿ, ಸಿಬ್ಬಂದಿ ಸೋಮನಾಥ, ಮನೋಹರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.