ಸಾಮಾಜಿಕ ಜಾಲತಾಣದಲ್ಲಿ ಪಾಕ್​ ಪರ ಘೋಷಣೆ ಪ್ರಕಟಿಸಿದ ಯುವತಿ ವಶಕ್ಕೆ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಡಬಿ-ಶಿವಪೂರ ಗ್ರಾಮದಲ್ಲಿ ಭಾರಿ ಪ್ರತಿಭಟನೆ

ಬೆಳಗಾವಿ: ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಪರ ಘೋಷಣೆ ಪ್ರಕಟಿಸಿ ದೇಶದ್ರೋಹ ಎಸಗಿದ ಆರೋಪದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಡಬಿ-ಶಿವಪೂರ ಗ್ರಾಮದ ಯುವತಿಯನ್ನು ಮುರಗೋಡ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಾಸಗಿ ಶಾಲೆಯ ಶಿಕ್ಷಕಿ (25) ಬಂಧಿತೆ. ಫೇಸ್​ಬುಕ್​, ವಾಟ್ಸ್​ಆ್ಯಪ್​ಗಳಲ್ಲಿ ಪಾಕ್​ ಧ್ವಜದೊಂದಿಗೆ ಪಾಕಿಸ್ತಾನ ಕಿ ಜೈ ಹೋ ಎಂಬ ಸಂದೇಶ ಪ್ರಕಟಿಸಿದ್ದಳು. ಇದನ್ನು ವಾಟ್ಸ್​ಆ್ಯಪ್​ನ ಡಿಪಿಯನ್ನಾಗಿಯೂ ಮಾಡಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಕಡಬಿ-ಶಿವಪೂರ ಗ್ರಾಮದಲ್ಲಿ ಸಾರ್ವಜನಿಕರು ಟೈರ್​ಗೆ ಬೆಂಕಿ ಹಚ್ಚಿ ಪ್ರತಿಭಟನೆ ಆರಂಭಿಸಿದ್ದರು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಪೊಲೀಸರು ಈ ಮಹಿಳೆಯನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ವೇಳೆ ಪ್ರತಿಭಟನಾಕಾರರು ಈ ಮಹಿಳೆಯ ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ.

ಬೆಂಗಳೂರಲ್ಲಿ ತಾಹಿರ್​ ಬಂಧನ: ಪುಲ್ವಾಮದಲ್ಲಿನ ಉಗ್ರನ ದಾಳಿಗೆ ಮೆಚ್ಚುಗೆ ವ್ಯಕ್ತಪಡಿಸುವ ಜತೆಗೆ, ಆತ್ಮಾಹುತಿ ದಾಳಿಯಲ್ಲಿ ಸತ್ತ ಉಗ್ರ ಆದಿಲ್​ ಅಹ್ಮದ್​ ದರ್​ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿದ್ದ ಕಾಶ್ಮೀರ ಮೂಲದ ಬೆಂಗಳೂರು ನಿವಾಸಿ ತಾಹಿರ್​ ಲತೀಫ್​ನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ವಿದ್ಯಾರ್ಥಿಯಾಗಿರುವ ತಾಹಿರ್​ ತನ್ನ ಫೇಸ್​ಬುಕ್​ ಅಕೌಂಟ್​ನಲ್ಲಿ ಆತ್ಮಾಹುತಿ ದಾಳಿ ಮಾಡಿದ ಉಗ್ರನಿಗೆ ಬಿಗ್​ ಸೆಲ್ಯೂಟ್​…ನಿನಗೆ ಸ್ವರ್ಗ ಪ್ರಾಪ್ತಿಯಾಗುತ್ತೆ ಎಂದು ಪೋಸ್ಟ್​ ಮಾಡಿದ್ದ. ಈ ಸಂಬಂಧ ಬಾಗಲೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು.

2 Replies to “ಸಾಮಾಜಿಕ ಜಾಲತಾಣದಲ್ಲಿ ಪಾಕ್​ ಪರ ಘೋಷಣೆ ಪ್ರಕಟಿಸಿದ ಯುವತಿ ವಶಕ್ಕೆ”

  1. Mentality of mad filthy dogs. Siddaramaiah your gift of 10000crores to minorities will be used against my hindu comunities. Hindus wake up fight against jehadi siddaramaiah. Real problem is not muslims but our own hindhus like sidhu raga hdd hdk kdr

Comments are closed.