23.9 C
Bangalore
Friday, December 6, 2019

ಜಾಮೀನು ಅರ್ಜಿ ವಜಾ ಆದ ಬೆನ್ನಲ್ಲೇ ಮಾಜಿ ಸಚಿವ ಚಿದಂಬರಂ ಸುಳಿವಿಲ್ಲ; ಮನೆ ಬಳಿ ತೆರಳಿ ಬರಿಗೈಲಿ ವಾಪಸ್ ಬಂದ ಇ.ಡಿ., ಸಿಬಿಐ ಅಧಿಕಾರಿಗಳು

Latest News

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಜವೀರ ಮದಕರಿ ನಾಯಕ ಸಿನಿಮಾಕ್ಕೆ ಮುಹೂರ್ತ

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಐತಿಹಾಸಿಕ ಸಿನಿಮಾ ರಾಜವೀರ ಮದಕರಿ ನಾಯಕ ಸಿನಿಮಾದ ಮುಹೂರ್ತ ಕೆಂಪೇಗೌಡ ನಗರ (ಗವಿಪುರಂ ಗುಟ್ಟಹಳ್ಳಿ)ಯಲ್ಲಿ ಶುಕ್ರವಾರ...

 ಕೆಎಸ್ಒಯುನಿಂದ ಐಬಿಪಿಎಸ್ ಪರೀಕ್ಷೆಗೆ ತರಬೇತಿ: ಹೆಸರು ನೋಂದಾಯಿಸಲು ಡಿ.10 ಕೊನೇ ದಿನ

ಬೆಂಗಳೂರು: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ನಡೆಸುವ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ನೇಮಕಾತಿ ಪರೀಕ್ಷೆಗೆ ಕರ್ನಾಟಕ ರಾಜ್ಯ ಮುಕ್ತ...

ವಿದರ್ಭ ನೀರಾವರಿ ಹಗರಣದಲ್ಲಿ ಅಜಿತ್ ಪವಾರ್​ಗೆ ಕ್ಲೀನ್ ಚಿಟ್​​ ನೀಡಿದ ಮಹಾರಾಷ್ಟ್ರ ಎಸಿಬಿ

ನಾಗಪುರ: ವಿದರ್ಭ ನೀರಾವರಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರೀಯವಾದಿ ಕಾಂಗ್ರೆಸ್​ ಪಕ್ಷ(ಎನ್​ಸಿಪಿ) ನಾಯಕ ಅಜಿತ್ ಪವಾರ್​​ಗೆ ಮಹಾರಾಷ್ಟ್ರ...

ಸಾಲ ಮರುಪಾವತಿ ಅವಧಿ ವಿಸ್ತರಣೆ : ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಸೌಲಭ್ಯ

ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ ತನ್ನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್​ಎಂಇ) ಸಾಲದ ವಿನ್ಯಾಸವನ್ನು ಪರಿಷ್ಕರಿಸಿದ್ದು, ಎಂಎಸ್​ಎಂಇ ಗ್ರಾಹಕರ ಸಾಲ ಮರುಪಾವತಿ...

ಗ್ವಾಟೆಮಾಲಾ ನಗರದಲ್ಲಿ ಟಿವಿಎಸ್ ಫ್ಲ್ಯಾಗ್​ಶಿಪ್ ಶೋರೂಂ: ಕ್ಯಾಡಿಸಾ ಸಂಸ್ಥೆ ಸಹಯೋಗದೊಂದಿಗೆ ನೂತನ ಮಳಿಗೆ

ಬೆಂಗಳೂರು: ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ತಯಾರಿಕೆಯಲ್ಲಿ ವಿಶ್ವದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಟಿವಿಎಸ್ ಮೋಟಾರ್ ಕಂಪನಿ, ಕ್ಯಾಡಿಸಾ ಸಹಭಾಗಿತ್ವದಲ್ಲಿ ಮಧ್ಯ ಅಮೇರಿಕಾದ ಗ್ವಾಟೆಮಾಲಾ...

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಅವ್ಯವಹಾರ ಹಗರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಪಿ.ಚಿದಂಬರಂ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ವಜಾಗೊಳಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳು ಚಿದಂಬರಂ ಅವರ ಮನೆಗೆ ತೆರಳಿ ಬರಿಗೈಲಿ ವಾಪಸ್ ಬಂದಿದ್ದಾರೆ.

ದೆಹಲಿ ಹೈಕೋರ್ಟ್​ ಜಾಮೀನು ನೀಡಲು ನಿರಾಕರಿಸುತ್ತಿದ್ದಂತೆ ಸಿಬಿಐ ಅಧಿಕಾರಿಗಳು ತೆರಳಿದ್ದರು. ಬಳಿಕ ಇ.ಡಿ.ಯ ಇಬ್ಬರು ಅಧಿಕಾರಿಗಳು ಕೂಡ ಮನೆಯ ಬಳಿ ಹೋಗಿದ್ದರು. ಆದರೆ ಮಾಜಿ ಸಚಿವರು ಮನೆಯಲ್ಲೂ ಇಲ್ಲ, ಅವರ ಫೋನ್ ಕೂಡ ಸ್ವಿಚ್​ ಆಫ್​ ಆಗಿದೆ ಎನ್ನಲಾಗಿದೆ. ಸದ್ಯ ಸಿಬಿಐ, ಇ.ಡಿ.ಅಧಿಕಾರಿಗಳು ಅವರನ್ನು ಹುಡುಕುತ್ತಿದ್ದಾರೆ.

ಸಂಜೆ ವೇಳೆಗೆ ಸುಮಾರು 5-6 ಮಂದಿ ಅಧಿಕಾರಿಗಳು ಚಿದಂಬರಂ ಅವರ ಮನೆ ಬಳಿ ಕಾರಿನಲ್ಲಿ ಹೋಗಿದ್ದಾರೆ. ಆದರೆ ಅವರನ್ನು ಈವರೆಗೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ.

ಐಎನ್​ಎಕ್ಸ್​ ಮೀಡಿಯಾ ಗ್ರೂಪ್​ನಲ್ಲಿ ಅಕ್ರಮ ಹಣ ಹೂಡಿಕೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ತನಿಖೆ ಎದುರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಗೆ ಜಾಮೀನು ನೀಡಬೇಕು ಎಂದು ಚಿದಂಬರಂ ಅವರು ದೆಹಲಿ ಹೈಕೋರ್ಟ್​ಗೆ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು.

ಆದರೆ ಅವರನ್ನು ಕಸ್ಟಡಿಗೆ ಕೊಡಬೇಕು. ಇಲ್ಲದಿದ್ದರೆ ವಿಚಾರಣೆ ವೇಳೆ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮೊದಲಿನಿಂದಲೂ ಸಿಬಿಐ, ಇ.ಡಿ.ಅಧಿಕಾರಿಗಳು ಕೋರ್ಟ್​ನಲ್ಲಿ ವಾದಿಸುತ್ತಲೇ ಬಂದಿದ್ದರು. ಈಗ ಜಾಮೀನು ನಿರಾಕರಣೆ ಆಗಿರುವುದರಿಂದ ಅವರನ್ನು ಬಂಧಿಸಲು ಅಧಿಕಾರಿಗಳು ಕಾಯುತ್ತಿದ್ದಾರೆ.

Stay connected

278,732FansLike
580FollowersFollow
620,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...