ಹಠಾತ್ ಹೃದಯಾಘಾತಕ್ಕೆ ಮತ್ತೆರಡು ಬಲಿ; ಕ್ರಿಕೆಟ್​ ಆಡುತ್ತಲೇ ಕುಸಿದು ಬಿದ್ದ ಆಟಗಾರರ ಸಾವು

ನವದೆಹಲಿ: ದೇಶಾದ್ಯಂತ ಹಠಾತ್ ಹೃದಯಾಘಾತ ಪ್ರಕರಣಗಳ ಸರಣಿ ಮುಂದುವರಿದಿದ್ದು, ಆ ಪಟ್ಟಿಗೆ ಇನ್ನಿಬ್ಬರ ಸೇರ್ಪಡೆಯಾಗಿದೆ. ಇಬ್ಬರು ಯುವಕರು ಕ್ರಿಕೆಟ್ ಆಡುವಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಪ್ರಶಾಂತ್ ಕಾಂತಿಭಾಯ್​ ಭರೋಲಿಯಾ (27) ಮತ್ತು ಜಿಗ್ನೇಶ್ ಚೌಹಾನ್​ (31) ಸಾವಿಗೀಡಾದವರು. ಈ ಪೈಕಿ ಒಬ್ಬರು ಸೂರತ್​ನವರು, ಇನ್ನೊಬ್ಬರು ರಾಜ್​ಕೋಟ್​ನವರು. ಸೂರತ್​ನಲ್ಲಿ ಪ್ರಶಾಂತ್ ಶನಿವಾರ ಕ್ರಿಕೆಟ್​ ಆಡಿ ಮುಗಿಸುತ್ತಿದ್ದಂತೆ ಎದೆನೋವಿಗೆ ಒಳಗಾಗಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕಿಸಿಕೊಳ್ಳಲು ಆಗಿರಲಿಲ್ಲ. ಇದನ್ನೂ ಓದಿ: ಊಟ ಮಾಡುತ್ತಲೇ ಕುಸಿದು ಬಿದ್ದು … Continue reading ಹಠಾತ್ ಹೃದಯಾಘಾತಕ್ಕೆ ಮತ್ತೆರಡು ಬಲಿ; ಕ್ರಿಕೆಟ್​ ಆಡುತ್ತಲೇ ಕುಸಿದು ಬಿದ್ದ ಆಟಗಾರರ ಸಾವು