ಪುಣೆ : ತಮ್ಮ ದ್ವಿಚಕ್ರವಾಹನವನ್ನು ರೈಲ್ವೇ ಹಳಿಯ ಮೇಲೆ ಎಸೆದು, ಓಡುತ್ತಿದ್ದ ಟ್ರೈನಿಗೆ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದ್ದ ಇಬ್ಬರನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್(ಆರ್ಪಿಎಫ್) ಪೊಲೀಸರು ಬಂಧಿಸಿದ್ದಾರೆ. ಪುಣೆಯ ಪಟಸ್ನ ಬಳಿಯ ಖುತ್ಬವ್ ರೈಲು ನಿಲ್ದಾಣದ ಬಳಿಯಲ್ಲಿ ಕುಡಿದ ಅಮಲಿನಲ್ಲಿ ಈ ಅಚಾತುರ್ಯ ಎಸಗಿದ್ದರು ಎನ್ನಲಾಗಿದೆ.
ಜೂನ್ 11 ರಂದು 35 ವರ್ಷ ವಯಸ್ಸಿನ ಆಕಾಶ್ ಗುದ್ದವರ್ ಮತ್ತು ಇನ್ನೊಬ್ಬ ವ್ಯಕ್ತಿಯು ಕುಡಿದ ಮತ್ತಿನಲ್ಲಿ ದ್ವಿಚಕ್ರವಾಹನವೊಂದನ್ನು ರೈಲು ಹಳಿಯ ಮೇಲಕ್ಕೆ ನೂಕಿದ್ದರು. ಆ ಸಂದರ್ಭದಲ್ಲಿ ಖುತ್ಬವ್ ರೈಲು ನಿಲ್ದಾಣವನ್ನು ದಾಟಿದ ಪುಣೆ ದಾನಾಪುರ್ ಎಕ್ಸ್ಪ್ರೆಸ್ ಟ್ರೈನಿನ ಇಂಜಿನ್ನಿನ ಕೆಳಗೆ ಆ ವಾಹನ ಸಿಲುಕಿಕೊಂಡಿದ್ದು, 17 ಕಿಲೋಮೀಟರ್ಗಳವರೆಗೆ ಎಳೆದೊಯ್ಯಲ್ಪಟ್ಟಿತು. ತದನಂತರ ಏನೋ ಚಲನೆಯಾಗುತ್ತಿರುವುದನ್ನು ಗಮನಿಸಿದ ಚಾಲಕ ರೈಲು ನಿಲ್ಲಿಸಿದ ಪರಿಣಾಮ ಯಾವುದೇ ದುರಂತ ಸಂಭವಿಸಲಿಲ್ಲ ಎಂದು ಆರ್ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)
ಕರೊನಾ ನಿಯಮ ಗಾಳಿಗೆ ತೂರಿ ಪಕ್ಷದ ಕಛೇರಿ ಉದ್ಘಾಟನೆ: ಮಾಜಿ ಮೇಯರ್ ಬಂಧನ