ಇಬ್ಬರು ಮಂಗಳಮುಖಿಯರ ಮೇಲೆ ಮೂವರು ಕಾಮುಕರಿಂದ ಅತ್ಯಾಚಾರ

ಬೆಂಗಳೂರು: ಬೆಂಗಳೂರಲ್ಲಿ ಮಂಗಳಮುಖಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮಣಿಪುರ ಮೂಲದ ಇಬ್ಬರು ಮಂಗಳಮುಖಿ ವಿದ್ಯಾರ್ಥಿನಿಯರ ಮೇಲೆ ಕುಡಿದ ಅಮಲಿನಲ್ಲಿ ಮೂರು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ನಾಲ್ಕು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಣಿಪುರ ಮೂಲದ ಮಂಗಳಮುಖಿಯರು ಬೆಂಗಳೂರಲ್ಲಿ ನೆಲೆಸಿ ಮೂರು ವರ್ಷಗಳಿಂದಲೂ ಮೇಕಪ್ ಆರ್ಟಿಸ್ಟ್ಸ್ಆಗಿ ಕೆಲಸ ಮಾಡುತಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ನಿನ್ನೆ ರಾತ್ರಿ ಡಿಸಿಪಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?

ಮೇ 12ರಂದು ಘಟನೆ ನಡೆದಿದ್ದು, ಸಂತ್ರಸ್ತರು ಟಿವಿ ನೋಡುತ್ತಾ ಕುಳಿತಿದ್ದರು. ಹಸಿವಾಗುತ್ತಿರುವುದರಿಂದ ಕೆಎಫ್‌ಸಿಯಲ್ಲಿ ಫ್ರೈಡ್‌ ಚಿಕನ್‌ ಆರ್ಡರ್‌ ಮಾಡಿ ಕಾಯುತ್ತಿದ್ದರು. 20 ನಿಮಿಷ ಕಳೆದಿತ್ತು ಅಷ್ಟರಲ್ಲಿ ಡೋರ್‌ ಬೆಲ್‌ ಸದ್ದಾಯಿತು. ಡೆಲಿವರಿ ಬಾಯ್‌ ಇರಬೇಕೆಂದು ಹೋಗಿ ಬಾಗಿಲು ತೆರೆದಾಗ ಚೆನ್ನಾಗಿ ಕುಡಿದು ಕತ್ತಿ ಹಿಡಿದುಕೊಂಡಿದ್ದ ಮೂವರು ಬೆದರಿಸಿ ಒಳನುಗ್ಗಿದ್ದಾರೆ. ಬಾಗಿಲು ಮುಚ್ಚಿ ಕುತ್ತಿಗೆ ಬಳಿ ಕತ್ತಿಯನ್ನಿಟ್ಟು ಬೆದರಿಸಿ ವಿವಸ್ತ್ರವಾಗುವಂತೆ ಮತ್ತು ನೆಲದ ಮೇಲೆ ಮಗಲುವಂತೆ ಸೂಚಿಸಿದ್ದಾರೆ. ಎಷ್ಟೇ ಮನವಿ ಮಾಡಿದರೂ ಕೇಳದೆ ಮೂವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ನಮ್ಮ ಮೊಬೈಲ್‌ ನಂಬರ್‌ ಪಡೆದು ಘಟನೆಯನ್ನು ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಹೇಳಿ ಹೊರಟುಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *