ಸ್ನೇಹಿತನ ಅಂಗಡಿಯಲ್ಲಿ ಟೀ ಕುಡಿದು ಬಂದ ಕೆಲವೇ ಕ್ಷಣದಲ್ಲಿ ಇಬ್ಬರು ಸ್ನೇಹಿತರ ಅನುಮಾನಾಸ್ಪದ ಸಾವು

ದಾವಣಗೆರೆ: ಸ್ನೇಹಿತನ ಅಂಗಡಿಯಲ್ಲಿ ಟೀ ಕುಡಿದ ಬಳಿಕ ಅಪ್ತ ಸ್ನೇಹಿತರಿಬ್ಬರು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆಯಲ್ಲಿ ನಡೆದಿದೆ.

ಕಲ್ಲಪ್ಪ (38), ಶಂಕರ ನಾಯ್ಕ (45) ಮೃತರು. ಶುಕ್ರವಾರ ರಾತ್ರಿ ತಮ್ಮ ಸ್ನೇಹಿತನ ಚಹಾ ಅಂಗಡಿಯಲ್ಲಿ ಟೀ ಕುಡಿದು ಬಂದ ಕಲ್ಲಪ್ಪ ತನ್ನ ಮನೆಯ ಮುಂದೆ ಬಿದ್ದಿದ್ದಾರೆ. ಬಳಿಕ ಗ್ರಾಮಸ್ಥರು ಜಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಕಲ್ಲಪ್ಪ ಆಸ್ಪತ್ರೆಗೆ ಹೋಗುತ್ತಿದ್ದಂತೆ ಇತ್ತ ಶಂಕರ ನಾಯ್ಕ ಕುಸಿದು ಬಿದ್ದು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಹಲವು ವರ್ಷಗಳಿಂದ ಅಪ್ತ ಸ್ನೇಹಿತರಾಗಿದ್ದ ಕಲ್ಲಪ್ಪ, ಶಂಕರ ನಾಯ್ಕ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿರುವುದು ಗ್ರಾಮಸ್ಥರಲ್ಲಿ ಸಂಶಯಕ್ಕೆ ದಾರಿ ಮಾಡಿಕೊಟ್ಟಿದೆ. ಟೀ ಅಂಗಡಿ ಮಾಲೀಕನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ಬಿಳಿಗೋಡು ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *