ಬೆಂಗಳೂರು: ಡ್ರಗ್ಸ್ ಮಾಫಿಯಾ ಮಟ್ಟ ಹಾಕುವುದಕ್ಕೆ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿರುವ ಬೆನ್ನಿಗೆ, ಅದಾವುದರ ಪರಿವೆಯೂ ಇಲ್ಲದವರಂತೆ ರಾಜ್ಯ ರಾಜಧಾನಿಯ ಎಂ.ಜಿ.ರಸ್ತೆಯಲ್ಲಿ ರಾಜಾರೋಷವಾಗಿ ಕಾರಿನಲ್ಲೇ ಮಾದಕ ವಸ್ತು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ಪೆಡ್ಲರ್ಗಳು ಸಿಸಿಬಿ ಬಲೆಗೆ ಬಿದ್ದಿದ್ದಾರೆ.
ಕೊತ್ತನೂರು ನಿವಾಸಿ ಜಾನ್ ನಿಖೋಲನ್ (21) ಮತ್ತು ಜೆ.ಪಿ.ನಗರದ ಇರ್ಫಾನ್ ಶೇಖ್ (29) ಬಂಧಿತರು. ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ ಟಿಎಚ್ಸಿ ಜೆಲ್ಲಿ (ಟೆಟ್ರಾ ಹೈಡ್ರೋ ಕೆನ್ನಾಬಿನೋಲ್), 34 ಎಕ್ಸಟಸಿ ಪಿಲ್ಸ್, 27 ಎಲ್ಎಸ್ಡಿ ಸ್ಟ್ರಿಪ್ಸ್, 2 ಮೊಬೈಲ್ ಹಾಗೂ ಕಾರು ಜಪ್ತಿ ಮಾಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಾಲ ಬರೆ ಜನರಿಗೆ ಹೊರೆ: ಸಂಪನ್ಮೂಲ ಹೆಚ್ಚಳಕ್ಕೆ ಸರ್ಕಾರ ಸರ್ಕಸ್, ತೆರಿಗೆ ಭಾರ ಬಹುತೇಕ ಫಿಕ್ಸ್
ಎಂ.ಜಿ.ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದರು. ಈ ಬಗ್ಗೆ ಮಾಹಿತಿ ಆಧರಿಸಿ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಅಶ್ವಿನ್ ಎಂಬುವನಿಂದ ಕಡಿಮೆ ಬೆಲೆಗೆ ಸಗಟು ರೂಪದಲ್ಲಿ ಡ್ರಗ್ಸ್ ಖರೀದಿಸಿ ದಂಧೆಯಲ್ಲಿ ತೊಡಗಿದ್ದರು. ತಲೆಮರೆಸಿಕೊಂಡಿರುವ ಅಶ್ವಿನ್ಗಾಗಿ ತೀವ್ರ ಶೋಧ ನಡೆಸಲಾಗಿದೆ. ಈ ಎಲ್ಲ ಡ್ರಗ್ಸ್ ವಿದೇಶದಿಂದ ಸಾಗಣೆಯಾಗಿರುವ ಶಂಕೆ ಇದೆ. ಆರೋಪಿಗಳ ವಿಚಾರಣೆ ಬಳಿಕ ಏನೆಂಬುದು ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
‘ನ್ಯಾಷನಲ್ ಅನ್ಎಂಪ್ಲಾಯ್ಮೆಂಟ್ ಡೇ’ ಟ್ರೆಂಡಿಂಗ್ ರಹಸ್ಯ ಇದೇನಾ?