ನಿಯಂತ್ರಣ ತಪ್ಪಿ ಮಗುಚಿಬಿದ್ದ ಟಿಪ್ಪರ್​: ಚಾಲಕ ಸೇರಿ ಇಬ್ಬರ ದುರ್ಮರಣ

ಉಡುಪಿ: ಸಂತೆಕಟ್ಟೆ ಸಮೀಪ ಉಪ್ಪೂರು ಕೇಜಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ಒಂದು ನಿಯಂತ್ರಣ ತಪ್ಪಿ ಮಗುಚಿಬಿದ್ದು ಚಾಲಕ ಮತ್ತು ಕಾರ್ಮಿಕ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಟಿಪ್ಪರ್ ಚಾಲಕ ಬ್ರಹ್ಮಾವರ ನಿವಾಸಿ ನಾಗರಾಜ ಗಾಣಿಗ (30) ಮತ್ತು ಟಿಪ್ಪರ್‌ನಲ್ಲಿದ್ದ ಕಾರ್ಮಿಕ ಭಟ್ಕಳದ ಕುಮಾರ್ (27) ಮೃತಪಟ್ಟವರು. ಟಿಪ್ಪರ್ ಚಾಲಕ ನಾಗರಾಜ ಗಾಣಿಗ ಸ್ಥಳದಲ್ಲೇ ಮೃತಪಟ್ಟರೇ, ಕುಮಾರ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಟಿಪ್ಪರ್‌ನಲ್ಲಿದ್ದ ಇನ್ನೊರ್ವ ವ್ಯಕ್ತಿ ರಾಘವೇಂದ್ರ ಎಂಬವರು ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಅದೇ ದಾರಿಯಲ್ಲಿ ಸಾಗುತಿದ್ದ ವಿಧಾನ ಪರಿಷತ್ತು ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಘಟನ ಸ್ಥಳಕ್ಕೆ ದಾವಿಸಿ ಗಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.

Leave a Reply

Your email address will not be published. Required fields are marked *