ಧಾರವಾಡ: ಬೈಕ್ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಅಣ್ಣಿಗೇರಿ ಪಟ್ಟದ ಹೊರವಲಯದಲ್ಲಿ ನಡೆದಿದೆ.
ಶಿವಪ್ಪ ಕಾಳೆ (25) ದುರ್ಗಪ್ಪ (30) ಮೃತರು. ಇನ್ನೋರ್ವನಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹಬ್ಬಳ್ಳಿಯ ಕಿಮ್ಸ್ಗೆ ಸೇರಿಸಲಾಗಿದೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗ್ಗೆಯಿಂದ ಧಾರವಾಡದಲ್ಲಿ ನಡೆದ ಮೂರನೇ ಅಪಘಾತ ಇದಾಗಿದೆ, ಈ ಎಲ್ಲ ಅಪಘಾತಗಳಿಂದ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.