ಎರಡು ಹಸುಗಳು ಸಾವು

ಯಳಂದೂರು: ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಎರಡು ಹಸುಗಳು ಏಕಾಏಕಿ ನಿತ್ರಾಣಗೊಂಡು ಮೃತಪಟ್ಟಿವೆ.

ಗ್ರಾಮದ ಶಾಂತಮ್ಮ ಹಾಗೂ ದೊಡ್ಡತಾಯಮ್ಮ ಎಂಬುವರಿಗೆ ಸೇರಿದ ಹಸುಗಳು ಮೃತಪಟ್ಟಿದ್ದು, ಹಸುಗಳನ್ನು ನೆಚ್ಚಿಕೊಂಡಿದ್ದ ಈ ಎರಡೂ ಕುಟುಂಬ ಈಗ ಕಷ್ಟ ಅನುಭವಿಸುವಂತಾಗಿದೆ. ಸಂಬಂಧಪಟ್ಟವರು ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ನಾಗರಾಜು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಪೌಷ್ಟಿಕ ಆಹಾರವಿಲ್ಲದೆ ನಿತ್ರಾಣಗೊಂಡು ಹಸುಗಳು ಮೃತಪಟ್ಟಿವೆ ಎಂದು ಮಾಹಿತಿ ನೀಡಿದ್ದಾರೆ.