ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ 1.2 ಕೆಜಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಮಾಲು ಸಮೇತ ಬಂಧಿಸಿದ್ದಾರೆ.

ಪಟ್ಟಣದ ಜಾಕೀರ್ ಹುಸೇನ್ ನಗರದ ನಿವಾಸಿ ಇಮ್ರಾನ್ ಖಾನ್ ಮತ್ತು ಕೊಡಸೋಗೆ ಗ್ರಾಮದ ರಮೇಶ್ ಬಂಧಿತರು.
ಗುರುವಾರ ಮಧ್ಯಾಹ್ನ ಗುಂಡ್ಲುಪೇಟೆಯಿಂದ ತೆರಕಣಾಂಬಿ ಕಡೆಗೆ ಬರುತ್ತಿದ್ದ ಸ್ಕೂಟಿಯನ್ನು ಪೊಲೀಸರು ತಡೆದು ಪರಿಶೀಲಿಸಿದಾಗ ಡಿಕ್ಕಿಯಲ್ಲಿ 1ಕೆಜಿ 20 ಗ್ರಾಂ ಒಣ ಗಾಂಜಾ ಇರುವುದು ಪತ್ತೆಯಾಗಿದೆ. ಇವರನ್ನು ವಿಚಾರಣೆ ಮಾಡಿದಾಗ ಮೈಸೂರಿನಲ್ಲಿ ಖರೀದಿಸಿ ಮಾರಾಟ ಮಾಡಲು ಚಾಮರಾಜನಗರಕ್ಕೆ ಹೋಗುತ್ತಿರುವುದಾಗಿ ಒಪ್ಪಿಕೊಂಡರು. ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಬ್‌ಇನ್ಸ್‌ಪೆಕ್ಟರ್ ಕೆ.ಎಂ.ಮಹೇಶ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ನಂಜುಂಡಸ್ವಾಮಿ, ಮುಖ್ಯಪೇದೆ ಸುರೇಶ್, ಸಿದ್ದರಾಮು, ನಾಗರಾಜು, ಮತ್ತು ಪೇದೆಗಳಾದ ರಾಜು, ಕೃಷ್ಣ, ಬಂಗಾರ ನಾಯಕ ರಾಘವೇಂದ್ರ ಶೆಟ್ಟಿ, ಪ್ರದೀಪ್, ಶಿವಪ್ರಸಾದ್, ನಾಗೇಂದ್ರ ಇದ್ದರು.