ಸಿದ್ದಾಪುರ: ತಾಲೂಕಿನ ಕಾಳೇನಳ್ಳಿಯಲ್ಲಿ ನಡೆದ ಯುವಕನ ಆತ್ಮಹತ್ಯೆ ಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಿದ್ದಾಪುರ ಚನ್ನಮಾಂವನ ವಾಹನ ಚಾಲಕ ಹೇಮಂತ ಗಣಪತಿ ನಾಯ್ಕ(27) ಹಾಗೂ ಅದೇ ಊರಿನ ಶಾಮಿಯಾನ ಕೆಲಸಮಾಡುವ ಶಿವಕುಮಾರ ನಾರಾಯಣ ನಾಯ್ಕ(29) ಎನ್ನುವವರಾಗಿದ್ದಾರೆ.
ಇವರು ಬೆಂಗಳೂರಿಗೆ ತೆರಳುವಾಗ ತಾಲೂಕಿನ ಕವಂಚೂರು ಸಮೀಪ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂದಿಸುದಂತೆ ಇನ್ನು ಹಲವರಿದ್ದು ಅವರನ್ನು ಹಿಡಿಯುವುದಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಸೊರಬಾ ತಾಲೂಕಿನ ಚಿಕ್ಕ ತೌಡತ್ತಿಯ ಸಂತೋಷ ಗಣಪತಿ ನಾಯ್ಕ ತಾಲೂಕಿನ ಕಾಳೆನಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅದಕ್ಕೂ ಆತ ಮಾಡಿದ ವಿಡಿಯೋದಲ್ಲಿ ಗಂಭೀರ ವಿಷಯವಿತ್ತು. ತಾಲೂಕಿನ ಕೆಲ ಯುವಕರು ಹೈಸ್ಕೂಲ್ ಹೆಣ್ಣು ಮಕ್ಕಳನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ. ಇದೇ ವಿಚಾರ ರಾಜಕೀಯ ಆರೋಪ ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಪಿ ಎಂ.ನಾರಾಯಣ ಅವರು, ಸಿದ್ದಾಪುರ ಠಾಣೆಯ ಕಾನ್ಸ್ ಟೇಬಲ್ ಗಳಾದ ಪ್ತಶಾಂತ ಕುಮಾರ ಬಿ ಹಾಗೂ ಮೋಹನ ಗಾವಡಿ ಎಂಬುವವರನ್ನು ಅಮಾಮತು ಮಾಡಿದ್ದಾರೆ.