ನವದೆಹಲಿ: ಕಳೆದ ಕೆಲವು ತಿಂಗಳುಗಳಿಂದ ಭಾರತ ಸರ್ಕಾರ ಹಾಗೂ ಟ್ವಿಟರ್ ನಡುವೆ ನಡೆಯುತ್ತಿರುವ ಸಂಘರ್ಷ ಈಗ ಮತ್ತೊಮ್ಮೆ ಭುಗಿಲೆದ್ದಂತಿದೆ. ಏಕೆಂದರೆ ಇತ್ತೀಚೆಗಷ್ಟೇ ನೇಮಕವಾಗಿದ್ದ ರೆಸಿಡೆಂಟ್ ಗ್ರೀವಿಯನ್ಸ್ ಆಫೀಸರ್ ಧರ್ಮೇಂದ್ರ ಚತುರ್ ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಭಾರತದ ಹೊಸ ಐಟಿ ಕಾಯ್ದೆ ಪ್ರಕಾರ ಸೋಷಿಯಲ್ ಮೀಡಿಯಾ ಸಂಸ್ಥೆಗಳು ರೆಸಿಡೆಂಟ್ ಗ್ರೀವಿಯನ್ಸ್ ಆಫೀಸರ್ ಅವರನ್ನು ನೇಮಿಸುವುದು ಕಡ್ಡಾಯ. ಅದರಂತೆ ಈ ಅಧಿಕಾರಿಯನ್ನು ನೇಮಿಸಲು ಟ್ವಿಟರ್ ಹಿಂದೇಟು ಹಾಕುತ್ತಲೇ ಬಂದಿದ್ದು, ಕೊನೆಗೂ ಇತ್ತೀಚೆಗೆ ಧರ್ಮೇಂದ್ರ ಚತುರ್ ಅವರನ್ನು ರೆಸಿಡೆಂಟ್ ಗ್ರೀವಿಯನ್ಸ್ ಆಫೀಸರ್ ಆಗಿ ನೇಮಕ ಮಾಡಿತ್ತು.
ಇದನ್ನೂ ಓದಿ: ಸೀಟ್ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ
ಇದೀಗ ಅವರು ಕೇಂದ್ರ ಸರ್ಕಾರದೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ ಎನ್ನಲಾಗಿದ್ದು, ಟ್ವಿಟರ್ನಲ್ಲಿ ಮತ್ತೆ ಆ ಸ್ಥಾನ ತೆರವುಗೊಂಡಿದೆ. ಇದರಿಂದಾಗಿ ಸದ್ಯ ಟ್ವಿಟರ್ ಮತ್ತೆ ಭಾರತದ ಕಾನೂನನ್ನು ಪಾಲಿಸದಂತಾಗಿದೆ. ಈ ಬಗ್ಗೆ ಟ್ವಿಟರ್ನಿಂದ ಇನ್ನೂ ಅಧಿಕೃತ ಪ್ರಕಟಣೆ ಹೊರಬೀಳಬೇಕಾಗಿದೆ. ಮೊನ್ನೆಯಷ್ಟೇ ಕೇಂದ್ರ ಐಟಿ ಸಚಿವರ ಟ್ವಿಟರ್ ಹ್ಯಾಂಡಲನ್ನು ಸಂಸ್ಥೆ ಕೆಲಕಾಲದ ಮಟ್ಟಿಗೆ ಬ್ಲಾಕ್ ಮಾಡಿತ್ತು. ಇದೀಗ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.
ಕೇಂದ್ರ ಸಚಿವರ ಟ್ವಿಟರ್ ಖಾತೆಯೇ ಬ್ಲಾಕ್; ಕಾಯ್ದೆ ಪಾಲಿಸಿ ಎಂದಿದ್ದವರಿಗೆ ಕಾನೂನು ಹೆಸರಲ್ಲೇ ಕಾಲೆಳೆಯಿತಾ ಟ್ವಿಟರ್?