ಕೊಲಂಬೊ: ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್ ಮೋಟರ್, ರೇಸ್ ಸರಣಿಯ ಟಿವಿಎಸ್ ಎನ್ಟಿಒಆರ್ಕ್ಯು-125 ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎಲ್ಇಡಿ ಡಿಆರ್ಎಲ್ಎಸ್, ಎಲ್ಇಡಿ ಹೆಡ್ಲ್ಯಾಂಪ್, ಹಜಾರ್ಡ್ ಲ್ಯಾಂಪ್ನ ಲಾಂಛನ ಸೇರಿ ಮತ್ತಿತರರ ಸೌಲಭ್ಯಗಳನ್ನು ಒಳಗೊಂಡಿದೆ. ಮೆಟಾಲಿಕ್ ಕಪು್ಪ ಮತ್ತು ಕೆಂಪು ಬಣ್ಣಗಳಲ್ಲಿ ಬೈಕ್ಗಳು ಲಭ್ಯವಿವೆ.
ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್.ದಿಲೀಪ್ ಮಾತನಾಡಿ, 37 ವರ್ಷಗಳ ಕಾಲ ಟಿವಿಎಸ್ ರೇಸಿಂಗ್ ಸರಣಿಯ ಬೈಕ್ಗಳು ಸಾಕಷ್ಟು ಜನಪ್ರಿಯವಾಗಿವೆ. ವಿಶ್ವಾದ್ಯಂತ 4 ಲಕ್ಷಕ್ಕೂ ಹೆಚ್ಚು ಯುವ ಗ್ರಾಹಕರನ್ನು ಹೊಂದಿದೆ. ಈಗ ಬಿಡುಗಡೆಯಾಗಿರುವ ಟಿವಿಎಸ್ ಎನ್ಟಿಒಆರ್ಕ್ಯು-125 ರೇಸ್ ಆವೃತ್ತಿಯೂ ಗ್ರಾಹಕರಿಗೆ ಇಷ್ಟವಾಗಲಿದೆ ಎಂದರು ಹೇಳಿದರು.
ಎನ್ಟಿಒಆರ್ಕ್ಯು ಆವೃತ್ತಿಯ ಬೈಕ್ ಬಿಡುಗಡೆಯಿಂದ ಸ್ಕೂಟರ್ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆ ಆಗುವ ಸಾಧ್ಯತೆಯಿದೆ. ರೇಸ್ ಆವೃತ್ತಿಯ ರೋಮಾಂಚನಕಾರಿ ಅಂಶಗಳನ್ನು ಬಯಸುವ ಗ್ರಾಹಕರಿಗೆ ಇದು ತೃಪ್ತಿಪಡಿಸಲಿದೆ ಎಂದು ಟಿವಿಎಸ್ ಲಂಕಾ ಸಿಇಒ ರವಿ ಲಿಯಾನಾಗೆ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ಷಮತೆ, ಶೈಲಿ, ತಂತ್ರಜ್ಞಾನವನ್ನು ಈ ಬೈಕ್ ಒಳಗೊಂಡಿದೆ. ಬೈಕ್ನಲ್ಲಿ ವಿಶೇಷ ಅಪ್ಲಿಕೇಶನ್ ಅಳವಡಿಸಲಾಗಿದೆ. 2018ರ ಸೆಪ್ಟೆಂಬರ್ನಲ್ಲಿ ಆರಂಭವಾದ ರೇಸ್ ಆವೃತ್ತಿಯ ಬೈಕ್ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅತ್ಯಾಧುನಿಕ ಸಿವಿಟಿಐ-ಆರ್ಇವಿವಿ 124.79ಸಿಸಿ, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್ ಎಸ್ಒಎಚ್ಸಿ ಇಂಜಿನ್ ಒಳಗೊಂಡಿದೆ ಎಂದರು.