ಬೆಳಗಾವಿ: ಅಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಿರುವ, ಗುಣಮಟ್ಟದ ಸೇವೆಗೆ ಖ್ಯಾತಿಗಳಿಸಿರುವ ಹೈಟೆಕ್ ಮೋಟಾರ್ಸ್ ಮತ್ತು ಅಟೋಮೊಬೈಲ್ಸ್ ಪ್ರೈ.ಲಿ. ಇದೀಗ ಹೊಸ ಮಾದರಿಯ ಟಿವಿಎಸ್ ಜುಪಿಟರ್-125 ಸ್ಕೂಟರ್ ಮಾರುಕಟ್ಟೆಗೆ ಲೋಕಾರ್ಪಣೆಗೊಳಿಸಿದೆ.
ನಗರದ ಹಳೇ ಪಿಬಿ ರಸ್ತೆಯಲ್ಲಿರುವ ಹೈಟೆಕ್ ಮೋಟಾರ್ಸ್ ಮತ್ತು ಅಟೋಮೊಬೈಲ್ಸ್ ಪ್ರೈ.ಲಿ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಉದ್ಘಾಟನೆ ಕಾರ್ಯಕ್ರಮದಲ್ಲಿ ಹೈಟೆಕ್ ಮೋಟಾರ್ಸ್ ನಿರ್ದೇಶಕ ವಿನಯ ಬಾಳಿಕಾಯಿ, ರಾಜೇಶ ಭೋಸಗಿ ಟಿವಿಎಸ್ ಜುಪಿಟರ್-125 ಸ್ಕೂಟರ್ ಕುರಿತು ಮಾಹಿತಿ ನೀಡಿದರು.
ಈ ಸ್ಕೂಟರ್ ಮೆಟಲ್ ಬಾಡಿ, ಅಗಲವಾದ ಎಲ್‌ಸಿಡಿ ಡಿಸ್ಪೇ ್ಲ, ಕಡಿಮೆ ಸೌಂಡ್ ತಂತ್ರಜ್ಞಾನ, ಡ್ಯುಯಲ್ ಟೋನ್ ಸೀಟ್ ಕವರ್, 12 ಇಂಚಿನ ಅಲಾಯ್ ವೀಲ್, ಎಸ್‌ಬಿಟಿ ಬ್ರೇಕ್, ದೊಡ್ಡ ಬೂಟ್ ಸ್ಪೇಸ್ ಮತ್ತು ಅಗಲವಾದ ಫುಟ್‌ರೆಸಟ್, ಸುಧಾರಿತ ಸುರಕ್ಷತಾ ವ್ಯವಸ್ಥೆ ಒಳಗೊಂಡಿದೆ. 125 ಸಿಸಿ ವಿಭಾಗದಲ್ಲಿ ಅತ್ಯುತ್ತಮ ಮೈಲೇಜ್ (ಪ್ರತಿ ಲೀಟರ್‌ಗೆ 60-65 ಕಿಮೀ) ನೀಡುವ ಸ್ಕೂಟರ್ ಇದಾಗಿದೆ. ಇದನ್ನು ’ಮೋಸ್ಟ್ ವ್ಯಾಲ್ಯೂ ಫಾರ್ ಮನಿ’ ಎಂದು ಕರೆಯಲಾಗುತ್ತಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಟಿವಿಎಸ್ ಜುಪಿಟರ್-125 ಸ್ಕೂಟರ್ ಖರೀದಿದಾರ ವಿಶ್ವನಾಥ ಮಿಸ್ಕಿನ ಮತ್ತು ಪವನ ಮಿಸ್ಕಿನ ಅವರಿಗೆ ಸ್ಕೂಟರ್‌ನ ಕೀ ನೀಡಲಾಯಿತು. ಹೈಟೆಕ್ ಮೋಟಾರ್ಸ್ ನಿರ್ದೇಶಕ ಬಸವರಾಜ ತಂಗಡಿ, ರಾಜೇಂದ್ರ ದೇಸಾಯಿ ಅಭಿನಂದನೆ ಸಲ್ಲಿಸಿದರು.