ಅತ್ಯಾಚಾರ, ಮಹಿಳೆಯನ್ನು ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪ; ಕಿರುತೆರೆ ನಟನ ಬಂಧನ

ಮುಂಬೈ: ಅತ್ಯಾಚಾರ ಮತ್ತು ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಟೆಲಿವಿಷನ್‌ ನಟ ಕರಣ್‌ ಒಬೆರಾಯ್‌ನನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.

ನಟ ಮತ್ತು ಮಾಡೆಲ್‌ ಆಗಿದ್ದ ವಿವೇಕ್‌ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರಣ್‌ ಒಬೆರಾಯ್‌ ಅವರು ಕೇವಲ ಮಹಿಳೆಯನ್ನು ಅತ್ಯಾಚಾರ ಎಸಗಿರುವುದಲ್ಲದೆ ಅದನ್ನು ಚಿತ್ರೀಕರಣ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಹಣ ನೀಡದಿದ್ದರೆ ವಿಡಿಯೋವನ್ನು ರಿಲೀಸ್‌ ಮಾಡುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಓಶಿವಾರಾ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಆರೋಪಿಯು 1995ರ ಮಹೇಶ್‌ ಭಟ್​ ನಿರ್ದೇಶನದ ಸ್ವಾಭಿಮಾನ್‌ ಸೋಪ್‌ ಒಪೆರಾದಿಂದ ವೃತ್ತಿ ಜೀವನ ಆರಂಭಿಸಿದ್ದು, ಬೊಬ್ಬಿ ಮತ್ತು ಸಾಯಾ, ಜಸ್ಸಿ ಜೈಸಿ ಕೋಯಿ ನಹಿನ್‌, ಇನ್‌ಸೈಡ್‌ ಎಡ್ಜ್‌ ಸೇರಿ ಇತರೆ ಧಾರವಾಹಿಗಳಲ್ಲಿ ನಟಿಸಿದ್ದಾರೆ. 2001ರಲ್ಲಿ ಕಟ್ಟಲಾದ ಎ ಬಾಂದ್‌ ಆಫ್‌ ಬಾಯ್ಸ್‌ ನ ತಂಡದ ಸದಸ್ಯರಾಗಿದ್ದ ಇವರು ಹಲವಾರು ಜಾಹೀರಾತು ಕಂಪನಿಗಳಲ್ಲಿಯೂ ಕಾರ್ಯನಿರ್ವಹಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *