ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ 50 ಅರಿಶಿನ ಬೆಳೆಗಾರರ ಸ್ಪರ್ಧೆ: ಅರಿಶಿನ ನಿಗಮಕ್ಕಾಗಿ ಒತ್ತಾಯ

ನವದೆಹಲಿ: ರೈತರ ಹಿತಕಾಯಲು ವಿಫಲರಾದರು ಎಂದು ಆರೋಪಿಸಿ ತಮಿಳುನಾಡಿನ ಕೆಲ ರೈತರು ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ ಬೆನ್ನಲ್ಲೇ ಆಂಧ್ರ ಪ್ರದೇಶದ ಅರಿಶಿನ ಬೆಳೆಗಾರರು ಕೂಡ ಪ್ರಧಾನಿ ವಿರುದ್ಧ ಸ್ಪರ್ಧಿಸಲು ಅಣಿಯಾಗುತ್ತಿದ್ದಾರೆ.

ಅರಿಶಿನ ನಿಗಮ ಸ್ಥಾಪನೆಗೆ ಒತ್ತಾಯಿಸಿ ನಿಜಾಮಾಬಾದ್​ ಮೂಲದ 50 ಅರಿಶಿನ ಬೆಳೆಗಾರರು ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇವರೆಲ್ಲರೂ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಕಾಂಗ್ರೆಸ್​ನಿಂದ ಇನ್ನೂ ನಿರ್ಧಾರವಾಗಿಲ್ಲ

ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲಿರುವ ಕಾಂಗ್ರೆಸ್​ ಅಭ್ಯರ್ಥಿ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಬಯಸಿದರೆ ಅಥವಾ ಸೂಚಿಸಿದರೆ ತಾವು ಕಣಕ್ಕಿಳಿಯುವುದಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳುತ್ತಿದ್ದಾರೆ. ಆದರೆ, ಅದು ಕೂಡ ಇನ್ನೂ ಸ್ಪಷ್ಟವಾಗಿಲ್ಲ. (ಏಜೆನ್ಸೀಸ್​)

One Reply to “ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ 50 ಅರಿಶಿನ ಬೆಳೆಗಾರರ ಸ್ಪರ್ಧೆ: ಅರಿಶಿನ ನಿಗಮಕ್ಕಾಗಿ ಒತ್ತಾಯ”

  1. The fake farmers created by opposition to degrade PM. Nobody can beat Chowkidar I know you know everyone know. Now a day farmers are fond of freebees. Mufath ka chandan gismiri nandan

Comments are closed.