ಯಾಂತ್ರೀಕರಣದಿಂದ ಅರಿಶಿಣ ಕೃಷಿ

1 Min Read
ಯಾಂತ್ರೀಕರಣದಿಂದ ಅರಿಶಿಣ ಕೃಷಿ
ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಗ್ರಾಮದ ರೈತರ ಜಮೀನಿಗೆ ಜರ್ಮನಿ ಕಂಪನಿಯ ಫ್ರೆಂಜ್ ಬೆರ್ನ್ಡ್ ಕೃತಪ್, ಅಭಿಷೇಕ್ ಸಿಂಗ್ ಶಕ್ತಿಮಾನ್, ಹಿಮಾನ್ಶ, ನಾಗಾರ್ಜುನಕುಮಾರ್, ಸಂಪತ್ತು ಭೇಟಿ ನೀಡಿದ್ದರು.

ಗುಂಡ್ಲುಪೇಟೆ: ರೈತರಿಗೆ ಆಗುತ್ತಿರುವ ಅನನುಕೂಲ ಹಾಗೂ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟ ಮತ್ತು ಶ್ರಮ ಸಂಜಾತ ರೈತ ಉತ್ಪಾದಕರ ಕಂಪನಿ ಅರಿಶಿಣ ಕೃಷಿಯನ್ನು ಯಾಂತ್ರೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಒಕ್ಕೂಟದ ಸಂಚಾಲಕ ಎಸ್.ಎಂ.ನಾಗಾರ್ಜುನಕುಮಾರ್ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಜೂ.23 ಹಾಗೂ 24ರಂದು ಜರ್ಮನಿಯ ಗ್ರೇಮೆ ಕಂಪನಿ ಮುಖ್ಯಸ್ಥ ಎಂ.ಡಿ.ಫ್ರೆಂಜ್ ಬೆರ್ನ್ಡ್ ಕೃತಪ್, ಗ್ರಿಮ್ಮೆ ಕಂಪನಿ ಸಿಇಒ ಅಭಿಷೇಕ್ ಸಿಂಗ್ ಶಕ್ತಿಮಾನ್, ಕಂಪನಿಯ ಭಾರತದ ಮುಖ್ಯಸ್ಥ ಹಿಮಾನ್ಶ ಅವರೊಂದಿಗೆ ಉತ್ಪಾದಕರ ಸಭೆ ನಡೆಸಿದ ನಂತರ ಸಭೆಯ ವಿವರ ನೀಡಿದರು.

ಶ್ರಮಸಂಜಾತ ರೈತ ಉತ್ಪಾದಕರ ಕಂಪನಿ ವತಿಯಿಂದ ಈ ಸಾಲಿನಿಂದ ಅರಿಶಿಣವನ್ನು ಯಂತ್ರದಲ್ಲಿ ನಾಟಿ ಮಾಡಲಾಗುತ್ತಿದೆ. ಈಗಾಗಲೇ ಸುಮಾರು ಕಡೆ ನಾಟಿ ಮಾಡಿದ್ದು ಯಂತ್ರದಲ್ಲಿ ನಾಟಿ ಮಾಡಿದ ಜಮೀನುಗಳಲ್ಲಿ ಗಿಡಗಳು ಹೇಗೆ ಬೆಳವಣಿಗೆ ಆಗುತ್ತಿದೆ ಅನ್ನುವುದನ್ನು ಖುದ್ದಾಗಿ ರೈತರ ಜಮೀನುಗಳಿಗೆ ತೆರಳಿ ವೀಕ್ಷಣೆ ಮಾಡಿ ರೈತರೊಂದಿಗೆ ಸಮಾಲೋಚನೆ ಮಾಡಲಾಗಿದೆ. ಕಟಾವಿನ ಸಂದರ್ಭದಲ್ಲಿ ಕೃಷಿ ಕಾರ್ಮಿಕರ ಕೊರತೆ ಆಗುತ್ತಿದ್ದು, ಹೆಚ್ಚಿನ ಕೂಲಿ ನೀಡಬೇಕಾಗಿರುವುದರಿಂದ ಯಂತ್ರದಲ್ಲೇ ಅರಿಶಿಣವನ್ನು ಒಕ್ಕಣೆ ಮಾಡುವ ಉದ್ದೇಶವನ್ನೂ ಹೊಂದಲಾಗಿದೆ ಎಂದು ತಿಳಿಸಿದರು.

ಶ್ರಮಸಂಜಾತ ರೈತ ಉತ್ಪಾದಕರ ಕಂಪನಿಯ ನಿರ್ದೇಶಕರಾದ ಚಿದಾನಂದ, ರಾಜು, ಪ್ರದೀಪ್, ಶಿವಬಸವೇಗೌಡ, ಚಂದ್ರಶೇಖರ, ಮುಖಂಡರಾದ ಕುಂದುಕೆರೆ ಸಂಪತ್ತು ಇತರರಿದ್ದರು.

See also  ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಿ
Share This Article