ತೊಗರಿ ಟೆಕ್ನಾಲಜಿ ಪಾರ್ಕ್ ಪ್ರಸ್ತಾವನೆ : ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್

blank

ಭಾಗ್ಯವಂತಿ ದಾಲ್ ಇಂಡಸ್ಟಿಸ್‌ನಲ್ಲಿ ಸಾರ್ಟೇಕ್ಸ್ ಘಟಕ ಉದ್ಘಾಟನಾ ಸಮಾರಂಭದಲ್ಲಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಶರಣಬಸಪ್ಪ ದರ್ಶನಾಪುರ  ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ  ಶಾಸಕರಾದ  ಸುನೀಲ್ ಪಾಟೀಲ್ ವಿಜಯಪುರ,  ಬಸವರಾಜ ಮತ್ತಿಮಡು, ಡಾ.ಬಿ.ಜಿ.ಪಾಟೀಲ್ ಭಾಗಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ತೊಗರಿ ಬೆಳೆಗಾರರು ಹಾಗೂ ಉದ್ಯಮ ಬೆಳೆಸಲು ಪೂರಕವಾಗಿ ಕಲಬುರಗಿಯಲ್ಲಿ ತೊಗರಿ ಟೆಕ್ನಾಲಜಿ ಪಾರ್ಕ್ ಸ್ಥಾಪನೆ ಮಾಡಬೇಕು ಎಂಬ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರಾದ ಶಾಸಕ ಡಾ.ಅಜಯ ಧರ್ಮಸಿಂಗ್ ಹೇಳಿದರು.
ನಗರದ ಕಪನೂರ ಕೈಗಾರಿಕಾ ಪ್ರದೇಶದ ಭಾಗ್ಯವಂತಿ ದಾಲ್ ಇಂಡಸ್ಟಿçÃಸ್‌ನಲ್ಲಿ ಸಾರ್ಟೇಕ್ಸ್ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕೆಕೆಸಿಸಿಐ ಹಾಗೂ ದಾಲ್ ಮಿಲ್‌ದವರವರು ಬಹುದಿನಗಳಿಂದ ಟೆಕ್ನಾಲಜಿ ಪಾರ್ಕ್ ಇಲ್ಲವೇ ಕ್ಲಸ್ಟರ್ ಸ್ಥಾಪಿಸುವಂತೆ ಬೇಡಿಕೆ ಮಂಡಿಸುತ್ತಲೇ ಬಂದಿದ್ದು, ಈ ಕುರಿತು ಕೃಷಿ ಸಚಿವರ ಜತೆಗೆ ಮಾತನಾಡಿ, ಪ್ರಸ್ತಾವನೆ ಬೇಗನೆ ಕೈಗೆತ್ತಿಕೊಳ್ಳಲು ಒತ್ತಾಯಿಸುವೆ ಎಂದರು.
ಕರ್ನಾಟಕ ತೊಗರಿ ಮಂಡಳಿಗೆ ಇನ್ನೂ ಬಲ ತುಂಬಲು ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ಕೊಡಿಸಲು ಶ್ರಮಿಸುವೆ. ತೊಗರಿ ಟೆಕ್ನಾಲಜಿ ಪಾರ್ಕ್ ಬರುವುದರಿಂದ ಬೇಳೆ ಕಾಳು ಉತ್ಪಾದನಾ ವಲಯಕ್ಕೆ ಅನುವು ಆಗಲಿದೆ. ಅಲ್ಲದೆ ರೈತರಿಗೆ ಬೇಕಾಗಿರುವ ತಳಿಗಳನ್ನು ಸಂಶೋಧನೆಗಳನ್ನು ಮಾಡಲು ಮಂಡಳಿ ಕೆಲಸ ಮಾಡಲು ಪೂರಕವಾಗಲಿದೆ ಎಂದು ಡಾ.ಅಜಯಸಿಂಗ್ ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಮತ್ತು ವಿಧಾನ ಪರಿಷತ್ ಸದಸ್ಯ ಸುನೀಲ್ ಪಾಟೀಲ್ ವಿಜಯಪುರ, ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅವರು ಜತೆಗೂಡಿಕೊಂಡು ಸಾರ್ಟೇಕ್ಸ್ ಘಟಕ ಉದ್ಘಾಟಿಸಿ, ಶರಣಪ್ಪ ವಾಡಿ ಸಾಹುಕಾರ ಕಾರ್ಯ ಶ್ಲಾಘಿಸಿದರು.
ಶಾಸಕರಾದ ಬಸವರಾಜ ಮತ್ತಿಮಡು, ಡಾ.ಬಿ.ಜಿ.ಪಾಟೀಲ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಶಶಿಕಾಂತ ಪಾಟೀಲ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ, ದಾಲ್ ಮಿಲ್ರ‍್ಸ್ ಅಸೋಸಿಯೇಷನ್‌ಅಧ್ಯಕ್ಷ ಚಂದ್ರಶೇಖರ ಕೋಬಾಳ, ಬೀಜ ಕಾಳುಗಳ ವ್ಯಾಪಾರಿ ಸಂಘದ ಅಧ್ಯಕ್ಷ ಸಂತೋಷಕುಮಾರ ಲಂಗರ್, ಜಿಪಂ ಮಾಜಿ ಉಪಾಧ್ಯಕ್ಷರಾದ ಗುರುಲಿಂಗಪ್ಪಗೌಡ ಆಂದೋಲಾ, ಅರುಣಕುಮಾರ ಪಾಟೀಲ್,ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಎಂ.ಡಿ.ಪಾಟೀಲ, ಎಪಿಎಂಸಿ ಕಾರ್ಯದರ್ಶಿ ಅಲ್ಲಭಕ್ಷ ಬಿಜಾಪುರ, ಉದ್ಯಮಿಗಳಾದ ನೀಲಕಮಠ ಮೂಲಗೆ, ಶರಣಪ್ಪ ವಾಡಿ ಸಾಹುಕಾರ, ರೇವಣಸಿದ್ದಪ್ಪ ವಾಡಿ ಸಾಹುಕಾರ, ವಿಜಯಕುಮಾರ ವಾಡಿ ಸಾಹುಕಾರ, ತಾಪಂ ಮಾಜಿ ಅಧ್ಯಕ್ಷ ಶಾಮರಾಯಗೌಡ ಪಾಟೀಲ್ ವಡಗೇರಾ,

 

=====

 

 

Share This Article

ಬಿರು ಬೇಸಿಗೆಯಲ್ಲಿ ನೆಲ್ಲಿಕಾಯಿ ಸೇವಿಸಿ, ಈ ಅದ್ಭುತ ಪ್ರಯೋಜನ ಪಡೆಯಿರಿ; ಇಲ್ಲಿದೆ ಉಪಯುಕ್ತ ಮಾಹಿತಿ | Amla

Amla Benefits: ಸಾಮಾನ್ಯವಾಗಿ ಭಾರತೀಯ ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಆಮ್ಲಾ/ ಗೂಸ್​ಬೆರಿ ಎಂದು ಕರೆಯಲಾಗುತ್ತದೆ. ಇದು…

ಮನೆಯಲ್ಲಿ ಈ 4 ವಸ್ತುಗಳಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ! ಇದನ್ನು ಗಮನಿಸದೆ ಹೋದ್ರೆ ಕೈಯಲ್ಲಿ 1 ಪೈಸೆಯೂ ಉಳಿಯಲ್ಲ | Vastu Tips

Vastu Tips: ಇಂದು ಯಾರಿಗೆ ತಾನೇ ಧನಲಕ್ಷ್ಮಿ ಬೇಡ? ವಿದ್ಯೆ ಇಲ್ಲದೇ ಹೋದ್ರೂ ಪರವಾಗಿಲ್ಲ ಹಣವೇ…

ರಾತ್ರಿ 11 ಗಂಟೆ ಮೇಲೆ ನಿದ್ದೆ ಮಾಡುತ್ತಿದ್ದೀರಾ.. ಕಾದಿದೆ ನಿಮಗೆ ಅಪಾಯ; ತಜ್ಞರ ಕೊಟ್ಟ ಏಚ್ಚರಿಕೆ ಏನು ಗೊತ್ತೆ! | Sleep

Sleep:ಇಂದಿನ ಕಾಲದ ಜನರ ಜೀವನ ಶೈಲಿಯಲ್ಲಿ ಹಲವು ಬದಲಾವಣೆಯಾಗಿವೆ. ಈ ಬದಲಾವಣೆಯಲ್ಲಿ ಒಂದು ರಾತ್ರಿ ಬೇಗ…