ನದಿಗಳ ಪಾವಿತ್ರ್ಯೆಗೆ ಕಾನೂನು ಅವಶ್ಯಕ

blank

ಹರಿಹರ: ಸರ್ಕಾರ ನದಿಗಳ ಪಾವಿತ್ರ್ಯೆ ಕಾಪಾಡಲು ಕಾನೂನು ರೂಪಿಸುವ ಜತೆಗೆ ಕಟ್ಟುನಿಟ್ಟಾಗಿ ಪರಿಪಾಲನೆ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದರು ಹೇಳಿದರು.

blank

ಹರಿಹರ ಸಮೀಪದ ಕೋಡಿಯಾಲ ಹೊಸಪೇಟೆಯ ತುಂಗಭದ್ರಾ ನದಿ ದಡದಲ್ಲಿರುವ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀಗಳು ಶನಿವಾರ ಹಮ್ಮಿಕೊಂಡಿದ್ದ 6ನೇ ವರ್ಷದ ತುಂಗಭದ್ರಾರತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನದಿಗಳನ್ನು ಪೂಜಿಸುವ ಜನತಯೇ ಅವುಗಳನ್ನು ಅಶುದ್ಧಗೊಳಿಸುತ್ತಿರುವುದು ವಿಪರ್ಯಾಸದ ಸಂಗತಿ. ಕಾರ್ಖಾನೆ ಮತ್ತು ನಗರಗಳ ಕಲುಷಿತ ನೀರನ್ನು ನೇರವಾಗಿ ನದಿಗೆ ಬಿಡದೆ ಆ ನೀರನ್ನು ಶುದ್ಧೀಕರಣಗೊಳಿಸಿ ನದಿಗೆ ಬಿಡುವುದರಿಂದ ನದಿಗಳ ಪಾವಿತ್ರ್ಯೆ ಕಾಪಾಡಲು ಸಾಧ್ಯ ಎಂದು ತಿಳಿಸಿದರು.

ಜಗತ್ತಿನ ಸಕಲ ಜೀವರಾಶಿಗಳಿಗೆ ಮುಖ್ಯವಾಗಿ ನೀರು ಬೇಕು. ಅದನ್ನು ಕಾಪಾಡಿಕೊಳ್ಳುವುದು ಎಲ್ಲರ ಹೊಣೆ. ನದಿಗೆ ಆರತಿ, ಪೂಜೆ ಮಾಡುವುದು ನಮ್ಮ ಪರಂಪರೆ. ನದಿಯನ್ನು ತಾಯಿಗೆ ಹೋಲಿಸಿ ಪೂಜಿಸುವುದು ನಮ್ಮ ಸಂಸ್ಕೃತಿ. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿಯೇ ಗಂಗಾರತಿ ಮತ್ತು ತುಂಗಭದ್ರಾರತಿ ಮಾಡಲಾಗುತ್ತದೆ ಎಂದರು.

ಉಪ ಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ನದಿಗೆ ಆರತಿಯ ಪೂಜಾ ಕಾರ್ಯ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ. ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ನನೆಗುದಿಗೆ ಬಿದ್ದಿದ್ದು, ರಂಭಾಪುರಿ ಹಾಗೂ ಶ್ರೀಶೈಲ ಜಗದ್ಗುರುಗಳ ಸಮ್ಮುಖದಲ್ಲಿ ಶೀಘ್ರ ಸಭೆ ಕರೆದು ರ್ಚಚಿಸುವಂತೆ ವಿನಂತಿಸಿದರು.

ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ ಮಾತನಾಡಿ, ಪುಣ್ಯಕೋಟಿ ಮಠಕ್ಕೆ ಭಕ್ತರೇ ಆಸ್ತಿ ಅವರ ಕೋರಿಕೆಗೆ ಶ್ರೀಮಠವು ಎಂದಿಗೂ ಸಮ್ಮತಿಸುತ್ತಾ ಬಂದಿದೆ. ಅವರ ಆಶಯದಂತೆ ತುಂಗಭದ್ರಾರತಿ ಆಯೋಜಿಸುತ್ತಿರುವುದು ಖುಷಿ ತಂದಿದೆ ಎಂದರು.

ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, ಪರಿಸರ ಮತ್ತು ನದಿಗಳನ್ನು ಸಂರಕ್ಷಣೆ ಮಾಡದೆ ಹೋದಲ್ಲಿ ಭವಿಷ್ಯದಲ್ಲಿ ದೊಡ್ಡ ಆಪತ್ತನ್ನು ತಂದುಕೊಳ್ಳಬೇಕಾಗುತ್ತದೆ, ಈ ರೀತಿಯ ಕಾರ್ಯಕ್ರಮ ಮಾಡುವ ಮೂಲಕ ಜೀವ ಜಲ ರಕ್ಷಣೆಗೆ ಜಾಗೃತಿ ಮೂಡಿಸುತ್ತಿವುದು ಶ್ಲಾಘನೀಯ ಎಂದರು.

ಮಾಜಿ ಶಾಸಕ ಅರುಣಕುಮಾರ್ ಮಾತನಾಡಿ, ಬಾಲಯೋಗಿ ಜಗದೀಶ್ವರ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಎರಡು ಬಾರಿ ಮುಂದಕ್ಕೆ ಹೋಗಿದೆ. ಶ್ರೀಶೈಲ ಜಗದ್ಗುರುಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿ ದಿನಾಂಕ ನಿಗದಿಪಡಿಸೋಣ ಎಂದರು.

ಸವಣೂರು ದೊಡ್ಡ ಹುಣಸೇಕಲ್ಮಠದ ಚನ್ನಬಸವ ಶ್ರೀ, ವಿಜಯಪುರ ಸಿದ್ದಲಿಂಗೇಶ್ವರ ಮಠದ ಸಿದ್ದಲಿಂಗ ಶ್ರೀ, ನಾಗವಂದ ಧರ್ಮಕ್ಷೇತ್ರದ ಶಿವಯೋಗಿ ಶಿವಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಬಿಜೆಪಿ ಮುಖಂಡರಾದ ಎಸ್.ಎಂ.ವೀರೇಶ್ ಹನಗವಾಡಿ, ಐರಣಿ ಅಣ್ಣೇಶ್, ಚಂದ್ರಶೇಖರ್ ಪೂಜಾರ್, ಸಿಂಡಿಕೇಟ್ ಮಾಜಿ ಸದಸ್ಯ ಕೆ.ಎನ್ ಪಾಟೀಲ್, ಕರ್ನಾಟಕ ರಾಜ್ಯ ಮುಕ್ತ ವಿವಿ ಮೈಸೂರು ಪರೀಕ್ಷಾಂಗ ಕುಲ ಸಚಿವ ಎಚ್ ವಿಶ್ವನಾಥ್, ದೂಡಾ ಸದಸ್ಯೆ ವಾಣಿ ಬಕ್ಕೇಶ್, ತಪೋವನದ ಡಾ.ಶಶಿಕುಮಾರ್ ಮೆಹರ್ವಾಡೆ, ಗ್ರಾಪಂ ಮಾಜಿ ಅಧ್ಯಕ್ಷ ಚೇತನ್ ಕುಮಾರ್, ಮಾಜಿ ಸದಸ್ಯ ಕರಿಯಪ್ಪ ಮ್ಯಾಳಗೇರ್, ಹಿರೇಮಠ ಕುಮಾರಸ್ವಾಮಿ. ರವೀಂದ್ರ ಪಾಟೀಲ್ ಇತರರಿದ್ದರು.

ಆರಂಭದಲ್ಲಿ ಮಾತೆಯರು ತುಂಗಭದ್ರಾ ನದಿಗೆ ಬಾಗಿನ ಆರ್ಪಿಸಿ ನಂತರ ದೀಪಗಳನ್ನು ಹಚ್ಚಿ ನದಿಯಲ್ಲಿ ತೇಲಿ ಬಿಟ್ಟು ಪೂಜಿಸಿದರು, ನಂತರ ನಡೆದ ಸಂಗೀತಯುಕ್ತ ತುಂಗಾಭದ್ರಾರತಿ ಆಕರ್ಷಕ ಕಾರ್ಯಕ್ರಮವನ್ನು ನೂರಾರು ಜನ ಭಕ್ತರು ಕಣ್ತುಂಬಿಕೊಂಡರು.

Share This Article

ಹೋಟೆಲ್​ ಸ್ಟೈಲ್​​ ಮಸಾಲಾ ವಡೆ ಮನೆಯಲ್ಲೇ ಮಾಡಿ; ಇಲ್ಲಿದೆ ಸಿಂಪಲ್​ ರೆಸಿಪಿ | Recipe

ಮಸಾಲಾ ವಡೆ ಯಾರಿಗೆ ಇಷ್ಟವಿರಲ್ಲ ಹೇಳಿ. ಆದರೆ ಮನೆಯಲ್ಲಿ ಮಾಡುವ ಕಡಲೆಬೇಳೆ ವಡೆ ಹೋಟೆಲ್​ ರುಚಿ…

ಬೇಸಿಗೆಯಲ್ಲಿ ಪುದೀನಾ ಚಹಾ ಕುಡಿಯುವುದರಿಂದ ಆಗುವ ಪ್ರಯೋಜನ ಗೊತ್ತಾ?; ಇಲ್ಲಿದೆ ಉಪಯುಕ್ತ ಮಾಹಿತಿ ’ Health Tips

ಭಾರತೀಯರ ದಿನಚರಿಯ ಪ್ರಮುಖ ಭಾಗವೆಂದರೆ ಚಹಾ. ಭಾರತದ ಪ್ರತಿಯೊಂದು ಮೂಲೆಯಲ್ಲೂ ನೀವು ಚಹಾ ಪ್ರಿಯರನ್ನು ಕಾಣಬಹುದು.…

ಕ್ಯಾನ್ಸರ್​ ಮಾತ್ರವಲ್ಲ.. ಧೂಮಪಾನದಿಂದ ಬರುವ ಅಪಾಯಕಾರಿ ಕಾಯಿಲೆಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಭಾರತದಲ್ಲಿ ಧೂಮಪಾನವು ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದ್ದು, ವಿಶೇಷವಾಗಿ ಯುವಕರು ಮತ್ತು ಮಹಿಳೆಯರಲ್ಲಿ ಇದರ ಅಭ್ಯಾಸ…