More

    ತುಂಗಭದ್ರಾ ನದಿ ಪಾತ್ರದಲ್ಲಿ ಗಾಳಿ- ಮಳೆಗೆ ನೆಲಕಚ್ಚಿದ ಭತ್ತ

    ಮುಂಡರಗಿ: ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಶುಕ್ರವಾರ ಗುಡುಗು, ಭಾರಿ ಗಾಳಿ ಸಹಿತ ಮಳೆ ಸುರಿಯಿತು.
    ತುಂಗಭದ್ರಾ ನದಿ ಪಾತ್ರದ ಕೊರ್ಲಹಳ್ಳಿ, ಗಂಗಾಪೂರ, ಶಿಂಗಟಾಲೂರು, ಹಮ್ಮಿಗಿ, ಗುಮ್ಮಗೋಳ, ಬಿದರಳ್ಳಿ ಮೊದಲಾದ ಕಡೆಗಳಲ್ಲಿ ಕಟಾವು ಹಂತದಲ್ಲಿದ್ದ ಭತ್ತದ ಬೆಳೆ ನೆಲಕಚ್ಚಿದೆ.

    ಭತ್ತ ಹಾಳು

    ಈಗಾಗಲೇ ನದಿ ಪಾತ್ರದ ಹಲವು ಭಾಗಗಳಲ್ಲಿ ಕೆಲ ರೈತರು ಭತ್ತವನ್ನು ಕಟಾವು ಮಾಡಿ ಒಣಗಲು ಹಾಕಿದ್ದಾರೆ. ಮತ್ತೆ ಕೆಲವು ರೈತರು ಕಟಾವು ಮಾಡಬೇಕೆನ್ನುವ ಹಂತದಲ್ಲಿದ್ದಾರೆ. ಉತ್ತಮ ಭತ್ತದ ಕಾಳು ಹಿಡಿದಿದ್ದ ಬೆಳೆ ಗಾಳಿ ಮಳೆಗೆ ನೆಲಕಚ್ಚಿದೆ. ಭತ್ತದ ಕಾಳು ಉದುರುವುದು, ಭತ್ತ ಕಪ್ಪಾಗುವುದು ಹೆಚ್ಚಿದ್ದು, ಇದರಿಂದ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಹಾಗೆಯೇ ನೆಲಕಚ್ಚಿದ ಭತ್ತದ ದರದಲ್ಲಿ ಕಡಿಮೆಯಾಗುವ ಆತಂಕ ರೈತರಲ್ಲಿ ಕಾಡುತ್ತಿದೆ.
    ರೈತರು ಕಟಾವು ಮಾಡಿ ಒಣಗಿಸುವುದಕ್ಕೆ ಹೆದ್ದಾರಿ ಬದಿಯಲ್ಲಿ ಹಾಕಿದ್ದ ಭತ್ತವು ಮಳೆಗೆ ಹಸಿಯಾಗಿದ್ದು, ಅದನ್ನು ಸಂರಕ್ಷಿಸುವುದಕ್ಕೆ ರೈತರು ತಾಡಪತ್ರೆ ಹೊದಿಸಲು ಮುಂದಾದರು.
    ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶಮೂರ್ತಿ ಟಿ.ಸಿ. ಅವರು, ಗಾಳಿ, ಮಳೆಗೆ ನೆಲಕಚ್ಚಿದ ಬೆಳೆ ಪರಿಶೀಲಿಸುವುದಕ್ಕೆ ಸಿಬ್ಬಂದಿ ಕಳುಹಿಸಲಾಗುವುದು. ಈ ಕುರಿತು ಸೂಕ್ತ ಕ್ರಮ ವಹಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts