ತುಮಕೂರು: 2005-06ನೇ ಶೈಕ್ಷಣಿಕ ಸಾಲಿನಿಂದ 2015-16ನೇ ಶೈಕ್ಷಣಿಕ ಸಾಲಿನವರೆಗೂ ಪ್ರವೇಶಪಡೆದು ಡಬಲ್ ಡ್ಯೂರೇಷನ್ ಆಫ್ ದ ಕೋರ್ಸ್ ಪೂರೈಸಿರುವ ಎಲ್ಲಾ ವಿದ್ಯಾರ್ಥಿಗಳಿಗೂ ತುಮಕೂರು ವಿವಿ ಅಂತಿಮ ಅವಕಾಶ ನೀಡಿದೆ.
ಎಲ್ಲಾ ವಿದ್ಯಾರ್ಥಿಗಳಿಗೆ ಅಂತಿಮ ಅವಕಾಶಕ್ಕಾಗಿ ಒಂದು ಬಾರಿ ಎಲ್ಲಾ ಅರ್ಹ ಪೂರಕ ವಿದಯಾರ್ಥಿಗಳಿಂದ ಪರಿಕ್ಷಾ ಶುಲ್ಕ ಪಾವತಿಸಲು ಜ.3ರ ವರೆಗೂ ಅವಕಾಶ ನೀಡಲಾಗಿದ್ದು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬಹುದು.
ಈವರೆಗೆ 1400 ವಿದ್ಯಾರ್ಥಿಗಳು ಪರೀಕ್ಷೆ ನೋಂದಣಿ ಮಾಡಿಕೊಂಡಿದ್ದು ಅರ್ಹರು ವಿಶೇಷ ದಂಡ ಶುಲ್ಕದೊಂದಿಗೆ ಪರೀಕ್ಷಾ ಶುಲ್ಕ ಪಾವತಿಸಲು ಆವಕಾಶವಿದ್ದು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಕುಲಸಚಿವ ಪ್ರೊ.ನಿರ್ಮಲïರಾಜï ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದೆ ಪರೀಕ್ಷೆ ನಡೆದಿದ್ದಾಗ ಒಮ್ಮೆ 3821 ಹಾಗೂ ಮತ್ತೊಮ್ಮೆ 2257 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರಾದರೂ ಶೇ.49ರಷ್ಟು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು, ಇನ್ನುಳಿದವರು ಅವಕಾಶವನ್ನು ಸದುಪಯೋಗ ಮಾಡಿಕೊಂಡಿಲ್ಲ ಎಂದರು.
ಈಗಾಗಲೇ ಎರಡು ಬಾರಿ ಅವಕಾಶ ನೀಡಿದ್ದರಿಂದ ಈಗ ಮೂರವೇ ಅವಕಾಶವಾಗಿದೆ, ಮತ್ತೊಮ್ಮೆ ಅವಕಾಶ ನೀಡಲು ಯುಜಿಸಿ ನಿಯಮದಲ್ಲಿ ಅವಕಾಶವಿಲ್ಲದಿರುವ ಕಾರಣಕ್ಕೆ ಇದು ಕೊನೆ ಅವಕಾಶವಾಗಿದೆ.