More

    10 ವರ್ಷಗಳ ಹಿಂದೆ ಕಾಣೆಯಾದ ಮಗ ಮರಳಿ ಬಂದರೂ ಮನೆಗೆ ಸೇರಿಸದ ಪಾಲಕರು…!

    ತುಮಕೂರು: ಕಾಣೆಯಾಗಿದ್ದ ಮಗ ಮರಳಿ ಮನೆಗೆ ಬಂದರೆ ಯಾವ ತಂದೆ-ತಾಯಿಗೆ ತಾನೇ ಖುಷಿಯಾಗಲ್ಲ. ಅದರಲ್ಲೂ 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಮರಳಿ ಬಂದರೆ ಪಾಲಕರ ಸಂಭ್ರಮ ಹೇಗಿರುತ್ತದೆ ಎಂಬುದನ್ನು ಅಂದಾಜು ಸಹ ಮಾಡಲಾಗದು. ಆದರೆ, ಈ ಸ್ಟೋರಿಯಲ್ಲಿ ಆಗಿದ್ದೆಲ್ಲಾ ಉಲ್ಟಾಪಲ್ಟಾ.

    ಇದನ್ನೂ ಓದಿ: VIDEO| ಹೊಸ ವೇಷದಲ್ಲಿ ಮರಳಿದ ಕಣ್ಸನ್ನೆ ಬೆಡಗಿ ಇನ್​ಸ್ಟಾಗ್ರಾಂನಿಂದ ಕಾಣೆಯಾಗಿದ್ದಕ್ಕೆ ಕಾರಣ ಬಿಚ್ಚಿಟ್ರು!

    ಕಾಣೆಯಾದ ಮಗ 10 ವರ್ಷದ ನಂತರ ಪತ್ತೆಯಾದರೂ ತಂದೆ-ತಾಯಿ ಮಾತ್ರ ಆತನನ್ನು ಮನೆಗೆ ಬಿಟ್ಟುಕೊಳ್ಳಲಿಲ್ಲ. ಹೀಗೊಂದು ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಗುನ್ನಾಗೆರೆ ಗ್ರಾಮದಲ್ಲಿ ನಡೆದಿದೆ. ಅಯ್ಯೋ ಇವರೆಂಥ ತಂದೆ-ತಾಯಿ ಎಂದು ಟೀಕಿಸುವ ಮುನ್ನ ಒಮ್ಮೆ ಪೂರ್ತಿ ಓದಿದರೆ ಒಳ್ಳೆಯದು.

    ಕೃಷ್ಣಪ್ಪ ಎನ್ನುವವರ ಮಗ ರಂಗಸ್ವಾಮಿ 10 ವರ್ಷದ ಹಿಂದೆ ಶಾಲೆಗೆಂದು ಹೋಗಿದಾಗ ನಾಪತ್ತೆಯಾಗಿದ್ದ. ಊರಿಗೆ ಮರಳಲಾರದೇ ಬೀದರ್ ಜಿಲ್ಲೆಯ ಬಾಲ್ಕಿಯಲ್ಲಿ ರಂಗಸ್ವಾಮಿ ಕೆಲಸ ಮಾಡಿಕೊಂಡಿದ್ದ. ಲಾಕ್​ಡೌನ್​ನಿಂದ ಕೆಲಸ ಇಲ್ಲದೇ ಗುನ್ನಾಗೆರೆ ಗ್ರಾಮಕ್ಕೆ ಶುಕ್ರವಾರ ಆಗಮಸಿದ್ದ.

    ಇದನ್ನೂ ಓದಿ: ಚಿಕಿತ್ಸೆ ನೀಡುತ್ತಾ ಕರೊನಾ ಸೋಂಕಿಗೆ ಒಳಗಾಗಿ ಚರ್ಮದ ಬಣ್ಣವೇ ಕಪ್ಪಾಗಿದ್ದ ಚೀನಾ ವೈದ್ಯ ಮೃತ

    ಇತ್ತ ಮಗ ಮರಳಿ ಬಂದ ಸಂತೋಷವಿದ್ದರೂ ಮನೆಯೊಳಗೆ ಸೇರಿಸಿಕೊಳ್ಳದೇ ಮಹಾಮಾರಿ ಕರೊನಾ ವೈರಸ್​ ಭೀತಿಯಿಂದ ಸಂಬಂಧಿಸಿದವರಿಗೆ ಮಾಹಿತಿ ನೀಡಿ ತಂದೆ-ತಾಯಿಯೇ ರಂಗಸ್ವಾಮಿಯನ್ನು ಕ್ವಾರಂಟೈನ್​ಗೆ ಕಳುಹಿಸಿದ್ದಾರೆ. ಸದ್ಯ ರಂಗಸ್ವಾಮಿ ಹುಲಿಯೂರು ದುರ್ಗದ ಹೇಮಗಿರಿಬೆಟ್ಟದ ವಸತಿ ಶಾಲೆಯಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ. ಡೆಡ್ಲಿ ಕರೊನಾ ಎಷ್ಟೆಲ್ಲಾ ಭೀತಿ ಸೃಷ್ಟಿಸಿದೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ. (ದಿಗ್ವಿಜಯ ನ್ಯೂಸ್​)

    ಸಾಮಾನ್ಯದವರಲ್ಲ ಈ ತಾಯಿ-ಮಗ: ಯುವತಿಯರ ಹೆಸರಲ್ಲಿ ಟೆಕ್ಕಿಗಳಿಂದ ಕೋಟಿ ಕೋಟಿ ವಂಚನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts