ಅನುಮಾನಕ್ಕೆ ಎಡೆಮಾಡಿದ ಟಿ.ಬಿ. ಜಯಚಂದ್ರ ಪುತ್ರನ ವಾಟ್ಸ್​ಆ್ಯಪ್​ ಸಂದೇಶ

ತುಮಕೂರು: ಸಿರಾ ಕ್ಷೇತ್ರದ ಮಾಜಿ ಸಚಿವ ಟಿ. ಬಿ. ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ ಅವರ ವಾಟ್ಸ್​ಆ್ಯಪ್​ ಸಂದೇಶ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ವಾಟ್ಸ್​ಆ್ಯಪ್​ ಅಭಿಮಾನಿಗಳ ಗ್ರೂಪ್​ನಲ್ಲಿ ಕಾರ್ಯಕರ್ತರಿಗೆ ಅಭಯ ನೀಡಿ, ಯೋಚನೆ ಮಾಡಬೇಡಿ ಸಹೋದರರೇ ಏಪ್ರಿಲ್​ 2019ಕ್ಕೆ ಸಿರಾ ಕ್ಷೇತ್ರದಲ್ಲಿ ಬೈ ಎಲೆಕ್ಷನ್ ನಡೆಯಲಿದೆ. ಯುದ್ಧ ಗೆಲ್ಲಲು ಸಿದ್ಧರಾಗಿ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.

ಸಂತೋಷ್ ಜಯಚಂದ್ರ ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಪರಾಜಿತ ಕಾಂಗ್ರೆಸ್​ ಅಭ್ಯರ್ಥಿ.

Leave a Reply

Your email address will not be published. Required fields are marked *