ಲವ್​ ಮಾಡು ಎಂದು ಅಪ್ರಾಪ್ತ ತಂಗಿಯನ್ನು ಪೀಡಿಸುತ್ತಿದ್ದ, ಮುಂದೇನಾಯ್ತು?

ತುಮಕೂರು: ತನ್ನನ್ನು ಲವ್​ ಮಾಡುವಂತೆ ಅಪ್ರಾಪ್ತ ಸೋದರಿಯನ್ನು ಆಕೆಯ ದೊಡ್ಡಪ್ಪನ ಮಗನೇ ಪೀಡಿಸುತ್ತಿದ್ದ ಘಟನೆ ನಡೆದಿದೆ.

ತುಮಕೂರು ಮಹಿಳಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೋಡಿದಿದ್ದು, ಪ್ರೀತಿಸದಿದ್ದರೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇಷ್ಟೇ ಅಲ್ಲದೆ, ಪ್ರೀತಿಸಲು ನಿರಾಕರಿಸಿದ್ದಕ್ಕೆ ತಂಗಿ ಮೇಲೆ ಹಲ್ಲೆ ಮಾಡಿದ್ದಾನೆ. ಬಾಲಕಿ ತಲೆಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸಂತ್ರಸ್ತೆಯ ಪಾಲಕರು ತುಮಕೂರು ಮಹಿಳಾ ಪೊಲೀಸ್​ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ ನಂತರ, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *