ಪ್ರೇಮ ವಿವಾಹಕ್ಕೆ ಕುಟುಂಬದವರ ಅಡ್ಡಿ: ಸೈನೇಡ್​ ಸೇವಿಸಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

ತುಮಕೂರು: ಪ್ರೇಮ ವಿವಾಹಕ್ಕೆ ಕುಟುಂಬದವರು ಅಡ್ಡಿಪಡಿಸಿದ್ದಕ್ಕೆ ಮನನೊಂದ ಪ್ರೇಮಿಗಳಿಬ್ಬರು ಸೈನೇಡ್​ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುರುವಾರ ರಾತ್ರಿ ಶಿರಾ ತಾಲೂಕಿನ ಭೂವನಹಳ್ಳಿಯ ಚೇತನ್ (25) ಹಾಗೂ ಆತನನ್ನು ಪ್ರೀತಿಸುತ್ತಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೇತನ್ ಭೂವನಹಳ್ಳಿಯ ನಿವಾಸಿಯಾಗಿದ್ದು, ಯುವತಿ ಶಿರಾದ ಮಾಗೋಡು ಗ್ರಾಮದವಳು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಒಂದೂವರೆ ತಿಂಗಳ‌ ಹಿಂದೆ ಬೇರೊಬ್ಬ ಯುವತಿಯ ಜತೆ ಚೇತನ್​ಗೆ ಬಲವಂತವಾಗಿ ಮದುವೆ ಮಾಡಿಸಲಾಗಿತ್ತು.

ಇಷ್ಟವಿಲ್ಲದ ಮದುವೆ ಹಾಗೂ ತನ್ನ ಪ್ರೇಯಸಿ ಜತೆ ಪ್ರೇಮ ವಿವಾಹಕ್ಕೆ ಒಪ್ಪದಿದ್ದಕ್ಕೆ ಸೈನೇಡ್​ ನುಂಗಿ ಇಬ್ಬರೂ ಅಸುನೀಗಿದ್ದಾರೆ. ಈ ಸಂಬಂಧ ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

One Reply to “ಪ್ರೇಮ ವಿವಾಹಕ್ಕೆ ಕುಟುಂಬದವರ ಅಡ್ಡಿ: ಸೈನೇಡ್​ ಸೇವಿಸಿ ಪ್ರೇಮಿಗಳಿಬ್ಬರ ಆತ್ಮಹತ್ಯೆ”

Comments are closed.