ಸಿನಿಮಾ

ಕಲ್ಪತರು ನಾಡಿನಲ್ಲಿ ದಾಖಲೆಯ ಶೇ.83.46 ಮತದಾನ

ತುಮಕೂರು: ಜಿಲ್ಲೆಯಲ್ಲಿ ದಾಖಲೆಯ ಶೇ.83.46 ಮತದಾನವಾಗಿದೆ. ಜಿ¯್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ಸಣ್ಣಪುಟ್ಟ ಘಟನೆಗಳ ಹೊರತುಪಡಿಸಿ ಶಾಂತಿಯುತ ಮತದಾನ ನಡೆದಿದ್ದು ಒಟ್ಟು ಶೇ. 83.46 ರಷ್ಟು ಮತದಾನ ದಾಖಲಾಗಿದೆ. 131 ಹುರಿಯಾಳುಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು ಮೇ 13 ರಂದು ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.

ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಶೇ.88.92 ದಾಖಲೆ ಮತದಾನವಾಗಿದ್ದರೆ, ಸುಶಿಕ್ಷಿತರು, ಪ್ರಜ್ಞಾವಂತ ಮತದಾರರೇ ಹೆಚ್ಚಿರುವ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿಕಡಿಮೆ ಶೇ. 66.86 ಮತದಾನವಾಗಿದೆ.

11 ವಿಧಾನಸಭಾ ಕ್ಷೇತ್ರಗಳ ಮತದಾನ ಪ್ರಮಾಣ
ಕ್ಷೇತ್ರ 2018 2023
ಚಿಕ್ಕನಾಯಕಹಳ್ಳಿ ಶೇ.84.26 ಶೇ.85.24
ತಿಪಟೂರು ಶೇ.83.20 ಶೇ.83.56
ತುರುವೇಕೆರೆ ಶೇ.84.43 ಶೇ.84.79
ಕುಣಿಗಲ್ ಶೇ.84.79 ಶೇ.87.23
ತುಮಕೂರು ನಗರ ಶೇ.65.02 ಶೇ.66.86
ತು.ಗ್ರಾಮಾಂತರ ಶೇ.85.01 ಶೇ.76.38
ಕೊರಟಗೆರೆ ಶೇ.84.12 ಶೇ.83.78
ಗುಬ್ಬಿ ಶೇ.84.54 ಶೇ.88.92
ಶಿರಾ ಶೇ.84.56 ಶೇ.83.80
ಪಾವಗಡ ಶೇ.82.32 ಶೇ.87.41
ಮಧುಗಿರಿ ಶೇ.85.51 ಶೇ.85.38

ಒಟ್ಟು ಶೇ.82.52 ಶೇ.83.46

Latest Posts

ಲೈಫ್‌ಸ್ಟೈಲ್