ತುಮಕೂರುನಲ್ಲಿ ಚೌಡಯ್ಯ ಜಾತ್ರೆ 29ಕ್ಕೆ

ವಡಗೇರಾ: ತುಮಕೂರು ಗ್ರಾಮದಲ್ಲಿ 29ರಂದು ನಡೆಯಲಿರುವ ನಿಜಶರಣ ಅಂಬಿಗರ ಚೌಡಯ್ಯ ಜಾತ್ರೆ ಹಾಗೂ ರಥೋತ್ಸವ ನಿಮಿತ್ತ ಉಮೇಶ ಕೆ. ಮುದ್ನಾಳ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಜಾತ್ರಾ ಮಹೋತ್ಸವ ಯಶಸ್ವಿಗೆ ವಿವಿಧ ಸಮಿತಿ ರಚಿಸಲಾಯಿತು. ಜಾತ್ರೆ ನಿಮಿತ್ತ 29ರಂದು ಬೆಳಗ್ಗೆ ಗಂಗಾಸ್ನಾನ, ಸಂಜೆ 5.30ಕ್ಕೆ ರಥೋತ್ಸವ ಜರುಗಲಿದೆ ಎಂಬ ಮಾಹಿತಿ ನೀಡಲಾಯಿತು.

ಉಮೇಶ ಕೆ. ಮುದ್ನಾಳ್ ಮಾತನಾಡಿ ಸಮಾಜದ ಜಾಗೃತಿ ಮೂಡಿಸಿದ ಚೌಡಯ್ಯನವರನ್ನು ರಾಜ್ಯಕ್ಕೆ ಪರಿಚಯಿಸಿದ ವಿಠಲ್ ಹೇರೂರು ಅವರು ಇಂತಹ ಸಂಭ್ರಮ ನೋಡಲು ಇರಬೇಕಿತ್ತು ಎಂದು ನೆನದ ಅವರು, ಈ ಬಾರಿ ಎಲ್ಲ ಕಡೆಗೆ ಪ್ರಚಾರ ಮಾಡುವ ಮೂಲಕ ಜಾತ್ರೆ ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕೆಂದು ಹೇಳಿದರು.

ಪ್ರಮುಖರಾದ ಯಂಕಪ್ಪ, ಬಸವರಾಜಪ್ಪ, ದೇವಪ್ಪ, ಚೌಡಯ್ಯ, ಶಿವಪ್ಪ, ಸಾಬಣ್ಣ, ರಂಗಪ್ಪ, ನಿಂಗಪ್ಪ, ದಂಡಪ್ಪ, ಚೆನ್ನಪ್ಪ, ಲಗುಮಪ್ಪ, ಲಕ್ಷ್ಮಣ, ಮಲ್ಲು, ಸಾಬಣ್ಣ, ಯಲ್ಲಪ್ಪ, ಮಲ್ಲಪ್ಪ, ತಿಪ್ಪಣ್ಣ, ಕಾಶಪ್ಪ, ಬಸವರಾಜ ನಿಜಶರಣ ಅಂಬಿಗರ ಚೌಡಯ್ಯ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.