ತುಮ್ಕೋಸ್‌ಗೆ 8.56. ಕೋಟಿ ನಿವ್ವಳ ಲಾಭ

ಚನ್ನಗಿರಿ: ಪಟ್ಟಣದ ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ 2017-18 ನೇ ಸಾಲಿನಲ್ಲಿ ಒಟ್ಟು ಆರಂಭ ದಾಸ್ತಾನು 10.43.45.195 ಕೋಟಿ ಹೊಂದಿದೆ. ಈ ಸಾಲಿನಲ್ಲಿ ಒಟ್ಟು 8.56.73.016 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ತಿಳಿಸಿದರು.

ಪಟ್ಟಣದ ತುಮ್ಕೋಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 2017-18ನೇ ಸಾಲಿನ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ವಾರ್ಷಿಕ ವರದಿ ಕ್ಷಿುಂಡಿಸಿದರು.

ಸಹಕಾರ ಸಂಘಗಳ ಕಾಯ್ದೆಯಲ್ಲಿ ನೋಂದಣಿಯಾಗಿದೆ. 35 ವರ್ಷಗಳಿಂದ ಸೇವೆ ನೀಡುತ್ತಾ ಬಂದಿದೆ. 2017-18ನೇ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಶ್ರೀ ಲಕ್ಷ್ಮಣ್‌ರಾವ್ ಇನಾಮ್‌ದಾರ್ ನ್ಯಾಷನಲ್ ಆವಾರ್ಡ್ ಆಫ್ ಕೋ ಅಪರೇಟಿವ್ ಪ್ರಶಸ್ತಿ ಪಡೆದಿದೆ. ಈ ಸಾಲಿನಲ್ಲಿ 2.36.316 ಚೀಲ ಅಡಕೆ ಆವಕವಾಗಿದೆ. ಇದರಲ್ಲಿ 1.82.606 ಚೀಲಗಳು ಖರ್ಚಾಗಿರುತ್ತದೆ. 2017 ರಲ್ಲಿ ಸಂಘದ ಸದಸ್ಯರು ನೀರಿನ ತೊಂದರೆ ಅನುಭವಿಸುವಾಗ ಅಡಕೆ ಸಂಸ್ಕರಣ ಸಾಲವಾಗಿ 170 ಕೋಟಿ, ಅಡಮಾನ ಸಾಲವಾಗಿ 62 ಕೋಟಿ ಹಾಗೂ ಗುಣಮಟ್ಟದ ಪರಿಕರಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ನೀಡಲಾಗಿದೆ ಎಂದರು.

ಸಂಘದ ನಿರ್ದೆಶಕರಾದ ಆರ್.ಎಂ.ರವಿ, ಡಾ.ಬಿ.ಸ್ವಾಮಿ, ಎಂ.ಎನ್.ಮರುಳಪ್ಪ, ಜಿ.ಸಿ.ಶಿವಕುಮಾರ್, ಪಿ.ಎಂ.ಪ್ರಕಾಶ್, ಟಿ.ವಿ.ರಾಜು, ಜಿ.ಆರ್.ಪ್ರಕಾಶ್, ಜಿ.ಆರ್.ಶಿವಕುಮಾರ್, ಟಿ.ಕೆ.ರುದ್ರಪ್ಪ, ಕೆ.ತಿಪ್ಪೇಶಪ್ಪ, ಎಲ್.ವಿ.ಶೋಭ, ಎಂ.ವಿ.ಶೋಭಾ ಸಭೆಯಲ್ಲಿದ್ದರು.

ಅಡಕೆ ಶೀಘ್ರವೇ ಸೂಪರ್ ಮಾರ್ಕೆಟ್: ದೂರದ ಊರುಗಳಿಂದ ಅಡಕೆ ಮಾರಾಟ ಮಾಡಲು ಬರುವ ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಹೊಳಲ್ಕೆರೆ, ತಾವರೆಕೆರೆ, ಬಸವಾಪಟ್ಟಣ ಹಾಗೂ ಕಳೆದ ಸಾಲಿನಲ್ಲಿ ಹೊನ್ನಾಳಿಯಲ್ಲಿ ಶಾಖೆ ತೆರೆಯಲಾಗಿದೆ. ಎಪಿಎಂಸಿ ನಾಲ್ಕು ಅಂತಸ್ತಿನ ಗೋದಾಮು ನಿರ್ಮಿಸಲಾಗಿದೆ. ಬ್ಯಾಂಕ್ ಮಾದರಿಯಲ್ಲಿ ಸದಸ್ಯರ ಖಾತೆ ಮಾಹಿತಿಯನ್ನು ಎಸ್‌ಎಂಎಸ್ ಮತ್ತು ಎಟಿಎಂ ಸೌಲಭ್ಯ ನೀಡಲಾಗುತ್ತದೆ. ಮುಂದಿನ ಸಾಲಿನಲ್ಲಿ ಸೂಪರ್ ಮಾರ್ಕೆಟ್ ಪ್ರಾರಂಭ ಮಾಡಲಾಗುತ್ತದೆ. ಸದಸ್ಯರಿಗೆ ಮಾಹಿತಿ ನೀಡಲು ರೈತರ ಸಮಾಲೋಚನಾ ಸಭೆ ನಡೆಸಿ ಬೆಳೆಗಳ ಮಾಹಿತಿ ನೀಡಲಾಗುತ್ತದೆ. ಅಡಕೆ ವಹಿವಾಟು ನಡೆಸುವ 27 ಸಹಕಾರ ಸಂಘಗಳನ್ನು ಒಗ್ಗೂಡಿಸಿಕೊಂಡು ರಾಜ್ಯ ಅಡಕೆ ಸಹಕಾರ ಸಂಘಗಳ ಸಹಕಾರ ಮಹಾಮಂಡಳ ಒಕ್ಕೂಟವನ್ನು ಸ್ಥಾಪನೆ ಮಾಡಲಾಗಿದೆ. ರೈತರ ಹಿತರಕ್ಷಣೆ ಹಾಗೂ ಅಡಕೆ ಜೊತೆಗೆ ಮಿಶ್ರ ಬೆಳೆಯಾಗಿ ಕಾಳು ಮೆಣಸು ಹಾಗೂ ಇತರ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡುತ್ತದೆ ಎಂದು ಅಧ್ಯಕ್ಷ ಎಚ್.ಎಸ್.ಶಿವಕುಮಾರ್ ತಿಳಿಸಿದರು.