Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಕಾನೂನಿನ ಅರಿವಿನಿಂದ ಧೈರ್ಯ ದೊರೆಯುತ್ತದೆ: ಕೃಷ್ಣಪ್ಪ

Saturday, 11.08.2018, 7:45 AM       No Comments

ತುಮಕೂರು: ಕಾನೂನಿನ ಅರಿವು ನಮಗೆ ಧೈರ್ಯ ತಂದುಕೊಡುತ್ತದೆ. ಈ ನಿಟ್ಟಿನಲ್ಲಿ ನಮ್ಮ ರಾಷ್ಟ್ರದ ಸಂವಿದಾನದ ವೈಶಾಲ್ಯತೆಯ ಅರಿವು ಮೂಡುತ್ತದೆ ಎಂದು ವಕೀಲ ಕೃಷ್ಣಪ್ಪ ತಿಳಿಸಿದರು.

ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದು, ಬದುಕಿನ ಚೈತನ್ಯವನ್ನು ನೀಡುತ್ತದೆ ಎಂದರು.

ತಿಲಕ್ ಪಾರ್ಕ್ ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಧಾಕೃಷ್ಣ ಟಿ.ಎಸ್ ಮಾತನಾಡಿ, ಕಾನುನುಗಳಿರುವುದು ಜನರ ಜೀವನ ರಕ್ಷಣೆಗಾಗಿ, ಇಂದಿನ ಯುವ ಜನಾಂಗಕ್ಕೆ ಸೂಕ್ತ ಅರಿವಿನ ಶಿಕ್ಷಣದ ಅಗತ್ಯತೆಯಿದ್ದು, ಪಠ್ಯಗಳಲ್ಲಿ ಸಂಚಾರ ನಿಯಮಗಳನ್ನು ತಿಳಿಸುವ ಪರಿಪಾಠ ಬೆಳೆಯಬೇಕು. ಮೊಬೈಲ್, ವಾಟ್ಸ್‌ಆಪ್‌, ಫೇಸ್‌ಬುಕ್‌ನ ಅತಿ ಬಳಕೆ ನಿಲ್ಲಿಸಿ‌, ಓದಿನ ಕಡೆ ಮಗ್ನರಾಗಿ ಎಂದು ಹೇಳಿದರು.

ಪ್ರಾಂಶುಪಾಲ ವಿಜಯೇಂದ್ರ, ಎಚ್.ಎಲ್. ಗೋವಿಂದರಾಜು, ಪ್ರೊ. ಕುಮಾರ್, ಧರಿತ್ರಿ ಫೌಂಡೇಶನ್ ಕಾರ್ಯದರ್ಶಿ ಪ್ರೊ ರಂಗಸ್ವಾಮಿ. ರಾ.ಸೇ.ಯೋ ಕಾರ್ಯಕ್ರಮಾಧಿಕಾರಿ ಶ್ರೀನಿವಾಸಮೂರ್ತಿ.ಎಲ್ ಗಂಗಾತನಯಸಿರಿ ಇದ್ದರು.

Leave a Reply

Your email address will not be published. Required fields are marked *

Back To Top