ಸಿನಿಮಾ

ಸೋಲಿಲ್ಲದ ಸರದಾರ ಗುಬ್ಬಿಯ ವಾಸಣ್ಣ; ಹೊಸ ದಾಖಲೆ

ತುಮಕೂರು: ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಸತತ 5ನೇ ಬಾರಿಗೆ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್.ಶ್ರೀನಿವಾಸ್ ಹೊಸ ದಾಖಲೆ ಬರೆದರು.

2004ರಿಂದ 2023ರ ವರೆಗಿನ ಎಲ್ಲಾ ಚುನಾವಣೆಯಲ್ಲಿಯೂ ಗೆಲುವು ಪಡೆಯುವ ಮೂಲಕ ಸೋಲಿಲ್ಲದ ಸರದಾರ ಎಂಬ ಖ್ಯಾತಿ ಪಡೆದಿರುವ ಎಸ್.ಆರ್.ಶ್ರೀನಿವಾಸ್ ಜಿಲ್ಲೆಯಲ್ಲಿ ಸತತವಾಗಿ ಹೆಚ್ಚು ಬಾರಿ ಆಯ್ಕೆಯಾದ ಶಾಸಕರೆನ್ನಿಸಿದಾರೆ.

ಜೆಡಿಎಸ್‌ನಿಂದ ಉಚ್ಛಾಟನೆಯಾಗಿ ಕಾಂಗ್ರೆಸ್‌ನಿAದ ಸ್ಫರ್ಧಿಸಿದ್ದ ವಾಸಣ್ಣ ಗೆಲುವು ಕಷ್ಟವೆಂದೇ ಹೇಳಲಾಗಿತ್ತು, ಆದರೆ, ಶ್ರೀನಿವಾಸ್ ಚುನಾವಣಾ ತಂತ್ರಗಾರಿಕೆಗೆ ವಿರೋಧಿಗಳೆಲ್ಲಾ ಮಖಾಡೆಯಾಗಿದ್ದಾರೆ. ಗುಬ್ಬಿ ಕ್ಷೇತ್ರದ ಜಾತಿ ಸಮೀಕರಣವನ್ನು ಅರೆದು ಕುಡಿದಿರುವ ವಾಸು ಗೆಲುವಿನ ನಾಗಾಲೋಟ ಮುಂದಿವರಿದಿದೆ.

ಶ್ರೀನಿವಾಸ್ ಸೋಲಿಸುವ ಒಂದAಶAದ ಕಾರ್ಯಕ್ರಮ ರೂಪಿಸಿದ್ದ ಜೆಡಿಎಸ್ ಸಿ.ಎಸ್.ಪುರದ ಬಿ.ಎಸ್.ನಾಗರಾಜು ಅವರನ್ನು ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದರೂ ಚುನಾವಣೆಯಲ್ಲಿ ಪ್ರಯೋಜನವಾಗಿಲ್ಲ.

ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿ ಬಹಿರಂಗ ಹೇಳಿಕೆಗಳನ್ನು ನೀಡಿ ಕಿರಿಕಿರಿ ಮಾಡಿದರೂ ವಾಸಣ್ಣನ ಬಳಿಗೂ ಸೋಲು ಸುಳಿದಿಲ್ಲ, 2018ರಲ್ಲಿ ಪಕ್ಷದ ವಿರುದ್ಧವೇ ಬಂಡಾಯವೆದ್ದು ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದ ಎಸ್.ಡಿ.ದಿಲೀಪ್‌ಕುಮಾರ್
ಅವರನ್ನು ಹಣವಂತ ಎಂಬ ಕಾರಣಕ್ಕೆ ಬಿಜೆಪಿ ಕಣಕ್ಕಿಳಿಸಿದ್ದು ಯಾದವ ಮತದಾರರು ಕಾಂಗ್ರೆಸ್, ಜೆಡಿಎಸ್‌ಗೆ ಹೋಗಲು ಕಾರಣವಾಗಿದೆ.

Latest Posts

ಲೈಫ್‌ಸ್ಟೈಲ್