17.8 C
Bengaluru
Wednesday, January 22, 2020

ತುಳು ಲಿಪಿಯಲ್ಲಿ ಅಚ್ಚಾಗಲಿದೆ ಕನ್ನಡ ಕಾದಂಬರಿ ಮಾದಿರ!

Latest News

ಕರ್ನಾಟಕ ಕುಸ್ತಿ ಹಬ್ಬಫೆ. 15ರಿಂದ

ಧಾರವಾಡ: ಫೆ. 15ರಿಂದ 18ರವರೆಗೆ ನಗರದಲ್ಲಿ ಕರ್ನಾಟಕ ಕುಸ್ತಿ ಹಬ್ಬ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಕುಸ್ತಿಪಟುಗಳು ಸೇರಿ ಸುಮಾರು 2,000ಕ್ಕೂ ಹೆಚ್ಚು ಕುಸ್ತಿಪಟುಗಳು, ತರಬೇತಿದಾರರು...

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಈ ಪ್ರಯತ್ನ ಇದೇ ಮೊದಲು * ಅಜೆಕಾರು ಮೂಲದ ಲಕ್ಷ್ಮೀಶ ಶೆಟ್ಟಿ ಸಾಹಸ * ಕನ್ನಡದಲ್ಲೂ ಪ್ರಕಟ05

|ಭರತ್‌ರಾಜ್ ಸೊರಕೆ ಮಂಗಳೂರು
ಕನ್ನಡದ ಕಾದಂಬರಿ ತುಳು ಲಿಪಿಯಲ್ಲಿ ಮುದ್ರಣಕ್ಕೆ ಸಜ್ಜಾಗಿದೆ.
ಮುಂಬೈನಲ್ಲಿ ಸಿನಿಮಟೋಗ್ರಾಫರ್ ಆಗಿರುವ ಕಾರ್ಕಳದ ಅಜೆಕಾರು ಮೂಲದ ಲಕ್ಷ್ಮೀಶ ಶೆಟ್ಟಿ ಅವರ ‘ಮಾದಿರ’ ತುಳು ಲಿಪಿಯಲ್ಲಿ ಪ್ರಕಟವಾಗುತ್ತಿರುವ ಪ್ರಥಮ ಕನ್ನಡ ಕಾದಂಬರಿ ಎನಿಸಿಕೊಳ್ಳಲಿದೆ.
ಕೆಲಸದ ನಿಮಿತ್ತ ಮುಂಬೈನಲ್ಲಿ ನೆಲೆಸಿರುವ ಲಕ್ಷ್ಮೀಶ ಶೆಟ್ಟಿ ಮಾತೃಭಾಷೆಗೆ ಕೊಡುಗೆ ನೀಡಬೇಕು ಎನ್ನುವ ಹಂಬಲದಿಂದ ಈ ಸಾಹಸಕ್ಕೆ ಮುಂದಾಗಿದ್ದಾರೆ.

200 ಪುಟಗಳ ಕಾದಂಬರಿ ತುಳು ಮತ್ತು ಕನ್ನಡ ಲಿಪಿಯಲ್ಲಿ ಏಕಕಾಲದಲ್ಲಿ ಓದುಗರ ಕೈ ಸೇರಲಿದೆ. ತುಳು ಲಿಪಿಯಲ್ಲಿ ಓದಲು ಸಾಧ್ಯವಾಗದಿದ್ದವರಿಗೆ ಕನ್ನಡದ ಕೃತಿ ಓದಬಹುದು. ತುಳುಲಿಪಿ ಕಲಿಕೆಗೆ ಈ ಕೃತಿ ಪೂರಕ. ಎರಡನೇ ಹಂತದಲ್ಲಿ ಹಿಂದಿ, ಇಂಗ್ಲಿಷ್‌ಗೆ ಅನುವಾದ ಮಾಡಿ, ಅನ್ಯಭಾಷಿಗರಿಗೆ ಕತೆಯನ್ನು ತಲುಪುವಂತೆ ಮಾಡುವುದು ಕೃತಿಕಾರರ ಆಶಯ. ಇತ್ತೀಚೆಗೆ ಮಾ.ನಿಷ್ಕಲ್ ರಾವ್ ತುಳು ಲಿಪಿಯಲ್ಲಿ ‘ಶ್ರೀ ಹರಿ ಸ್ತುತಿ’ ಎಂಬ ಸ್ತೋತ್ರ ಪ್ರಕಟಿಸಿದ್ದಾರೆ. ಉಳಿದಂತೆ ಕ್ಯಾಲೆಂಡರ್, ಆಮಂತ್ರಣ ಪತ್ರಿಕೆಗಳು ಬಂದಿವೆ ಹೊರತು ಕಾದಂಬರಿ ಈವರೆಗೆ ಪ್ರಕಟವಾಗಿಲ್ಲ.

ಲೇಖಕರು ಕ್ಯಾಮರಾಮನ್: ಲೇಖಕ ಲಕ್ಷ್ಮೀಶ 23 ವರ್ಷಗಳಿಂದ ಸಿನಿಮಟೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲಿವುಡ್, ಕನ್ನಡ, ತುಳು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ರಾಮ್‌ಲೀಲಾ, ಗಬ್ಬರ್ ಈಸ್ ಬ್ಯಾಕ್, ಧರಮ್ ಸಂಕಟ್ ಮೆ ಮೊದಲಾದ ಹಿಂದಿ ಚಿತ್ರ, ಬಿಗ್‌ಬಾಸ್, ಕೌನ್ ಬಗೇನಾ ಕರೋಡ್‌ಪತಿ, ಸ ರೇ ಗ ಮ ಪ ಮೊದಲಾದ ರಿಯಾಲಿಟಿ ಶೋ ಗಳಲ್ಲಿ ದುಡಿದ ಅನುಭವಿ. ಹೊಸ ತುಳು ಚಿತ್ರ ‘ಬೆಳ್ಚಪ್ಪ’ಗೆ ಛಾಯಾಗ್ರಹಣ ಮಾಡಿದ್ದಾರೆ.

‘ಮಾದಿರ’ದಲ್ಲಿ ಏನಿದೆ?: ‘ಮಾದಿರ’ ಕಾದಂಬರಿ ಲಕ್ಷ್ಮೀಶ ಶೆಟ್ಟಿ ಬಾಲ್ಯದಲ್ಲಿ ಕಂಡ, ಕೇಳಿದ ಕತೆಯನ್ನು ಆಧರಿಸಿದೆ. ಇದರಲ್ಲಿ ಅಪರೂಪದ ಮಾದಿರ ಪಾಡ್ದನವನ್ನೂ ಸೇರಿಸಲಾಗಿದೆ. ಕಾದಂಬರಿಯ ಲಿಪಿ ಜೋಡಿಸುವ ಕೆಲಸ ಮಾಡಿದವರು ತುಳು ಲಿಪಿ ಶಿಕ್ಷಕಿ ವಿದ್ಯಾಶ್ರೀ. ಶ್ರೀಹರಿ ತುಳು ಫಾಂಟ್ ಬಳಸಲಾಗಿದೆ. ಮೂಲ ಕೃತಿಯ ಭಾಷೆ ಕನ್ನಡದಲ್ಲಿ ಇರುವ ಕಾರಣ ದಿನಕ್ಕೆ 10 ಪುಟಗಳನ್ನು ಮಾತ್ರ ತುಳು ಲಿಪಿಯಲ್ಲಿ ಟೈಪ್ ಮಾಡಲು ಸಾಧ್ಯವಾಗುತ್ತಿತ್ತು. ಮೊದಲ ತುಳು ಲಿಪಿ ಕಾದಂಬರಿಯಲ್ಲಿ ಕೆಲಸ ಮಾಡಿರುವುದು ಹೆಮ್ಮೆ ತಂದಿದೆ ಎಂದು ವಿದ್ಯಾಶ್ರೀ ಹೇಳಿದರು.

ತುಳು ಲಿಪಿಯಲ್ಲಿ ಪ್ರಕಟವಾಗುತ್ತಿರುವ ಪ್ರಥಮ ಕಾದಂಬರಿ ಇದು. ಮೊದಲ ಹಂತದಲ್ಲಿ ಕನ್ನಡ ಮತ್ತು ತುಳು ಲಿಪಿಯಲ್ಲಿ ಕೃತಿ ಬಿಡುಗಡೆಯಾಗಲಿದೆ. ಇದನ್ನು ಸಿನಿಮಾ ಮಾಡುವ ಯೋಚನೆಯೂ ಇದೆ. ಮುಂಬೈಯಲ್ಲಿದ್ದರೂ ತುಳು ಮೇಲಿನ ಪ್ರೀತಿಯಲ್ಲಿ ಹಲವು ತುಳು ವಿದ್ವಾಂಸರ ಜತೆ ಚರ್ಚಿಸಿ ಕೃತಿ ರಚಿಸಿದ್ದೇನೆ.

|ಲಕ್ಷ್ಮೀಶ ಶೆಟ್ಟಿ, ಕಾದಂಬರಿಕಾರ

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...