ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿ: ಪಚ್ಚೆಸಿರಿ ಕವಿಗೋಷ್ಠಿಯಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಕೆ.ಎಂ.ಹೆಗ್ಡೆ

blank

Contents
ಭಾಗವಹಿಸಿದ ಕವಿಗಳುಶ್ರೀಶಾವಾಸವಿ, ಅಶ್ವಿನಿ ತೆಕ್ಕುಂಜ, ಭಾಸ್ಕರ್ ಎ.ವರ್ಕಾಡಿ, ಸೌಮ್ಯಾ ಆರ್.ಶೆಟ್ಟಿ, ಸುಮಂಗಲಾ ದಿನೇಶ್ ಶೆಟ್ಟಿ, ಬಾಲಿನಿ ಎಂ.ಕರ್ಕೇರ, ಪದ್ಮನಾಭ ಮಿಜಾರ್, ಪದ್ಮನಾಭ ಪೂಜಾರಿ ಬಂಟ್ವಾಳ, ಉಮೇಶ್ ಶಿರಿಯ, ರಶ್ಮಿ ಸನಿಲ್, ನಳಿನಿ ಭಾಸ್ಕರ ರೈ, ಡಾ.ಸುರೇಶ ನೆಗಳಗುಳಿ, ನವೀನ್ ಕುಮಾರ್ ಪೆರಾರ, ಕೆ.ಶಶಿಕಲಾ ಭಾಸ್ಕರ್ ದೈಲಾ, ಹರೀಶ್ ಕುಮಾರ್ ಮೆಲ್ಕಾರ್, ವಿಶ್ವನಾಥ ಕುಲಾಲ್ ಮಿತ್ತೂರು, ಅಶೋಕ ಎಂ.ಕಡೇಶಿವಾಲಯ, ಹಿತೇಶ್ ಕುಮಾರ್ ಎ., ಮಲ್ಲಿಕಾ ಜೆ.ಆರ್.ರೈ, ಗುಲಾಬಿ ಸುರೇಂದ್ರ ಸುರತ್ಕಲ್, ಆರ್ಯನ್ ಸವಣಾಲ್, ಅನುರಾಧಾ ರಾಜೀವ್ ಸುರತ್ಕಲ್, ಜಯರಾಮ ಪಡ್ರೆ, ಹೇಮಂತ್ ಕುಮಾರ್, ಬದ್ರುದ್ದೀನ್ ಕೂಳೂರು, ಅರ್ಚನಾ ಎಂ.ಬಂಗೇರ, ಆಕೃತಿ ಭಟ್, ನಿಶಾನ್ ಅಂಚನ್, ಯಶೋದಾ ಕುಮಾರಿ, ಎಸ್.ಕೆ.ಕುಂಪಲ ಕವಿತೆ ವಾಚಿಸಿದರು.

ವಿಜಯವಾಣಿ ಸುದ್ದಿಜಾಲ ಮಂಗಳೂರು
ತುಳುನಾಡಿನ ಜನತೆ ತುಳು ಭಾಷೆಯ ಜತೆ ಇತರ ಭಾಷೆಗಳನ್ನು ಗೌರವಿಸುತ್ತಾರೆ. ಎಲ್ಲ ಜನರನ್ನು ತಮ್ಮವರಂತೆ ನೋಡಿಕೊಳ್ಳುವ ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿ ಎಂದು ರೋಟರಿ ಜಿಲ್ಲೆ 3181 ಇದರ ಅಸಿಸ್ಟೆಂಟ್ ಗವರ್ನರ್ ಕೆ.ಎಂ.ಹೆಗ್ಡೆ ಹೇಳಿದರು.

blank

ತುಳುವೆರೆ ಕಲ ವತಿಯಿಂದ ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ಭಾನುವಾರ ನಗರದ ಲಾಲ್ಬಾಗ್‌ನ ಇಂದಿರಾ ಪ್ರಿಯದರ್ಶಿನಿ ವನಿತಾಪಾರ್ಕ್‌ನಲ್ಲಿ ನಡೆದ ‘ಪಚ್ಚೆ ಸಿರಿ’ ತುಳು ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ರೆಡ್‌ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ತುಳು ಭಾಷೆಗೆ ಸಂಬಂಧಿಸಿದ ಸಾಹಿತ್ಯ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ನಮ್ಮ ಕರ್ತವ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ತುಳುವೆರೆ ಕಲದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಮಾತನಾಡಿ, ತುಳು ಲಿಪಿಯೇ ಭಾಷೆಯ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿ. ತುಳು ಲಿಪಿ ಕಲಿಕೆ ಜತೆಗೆ ತುಳುವಿನ ಮೂಲ ಶಬ್ದಗಳನ್ನೇ ಬಳಸುವ ಮೂಲಕ ಭಾಷೆಯ ಸೊಗಡು ಉಳಿಸಲು ಪ್ರಯತ್ನಿಸಬೇಕು ಎಂದರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ಭಾಗವಹಿಸಿದ್ದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷ ಬ್ರಾಯನ್ ಪಿಂಟೊ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸೀತಾರಾಮ್, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್. ಉಪಸ್ಥಿತರಿದ್ದರು.
ತುಳು ವಿದ್ವಾಂಸ ಚಂದ್ರಹಾಸ ಕಣಂತೂರು ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಶ್ರೀಶಾ ವಾಸವಿ ತುಳುನಾಡ್ ಸ್ವಾಗತಿಸಿ, ಸುಮಂಗಲಾ ದಿನೇಶ್ ಶೆಟ್ಟಿ ವಂದಿಸಿದರು. ಸೌಮ್ಯ.ಆರ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಭಾಗವಹಿಸಿದ ಕವಿಗಳು


ಶ್ರೀಶಾವಾಸವಿ, ಅಶ್ವಿನಿ ತೆಕ್ಕುಂಜ, ಭಾಸ್ಕರ್ ಎ.ವರ್ಕಾಡಿ, ಸೌಮ್ಯಾ ಆರ್.ಶೆಟ್ಟಿ, ಸುಮಂಗಲಾ ದಿನೇಶ್ ಶೆಟ್ಟಿ, ಬಾಲಿನಿ ಎಂ.ಕರ್ಕೇರ, ಪದ್ಮನಾಭ ಮಿಜಾರ್, ಪದ್ಮನಾಭ ಪೂಜಾರಿ ಬಂಟ್ವಾಳ, ಉಮೇಶ್ ಶಿರಿಯ, ರಶ್ಮಿ ಸನಿಲ್, ನಳಿನಿ ಭಾಸ್ಕರ ರೈ, ಡಾ.ಸುರೇಶ ನೆಗಳಗುಳಿ, ನವೀನ್ ಕುಮಾರ್ ಪೆರಾರ, ಕೆ.ಶಶಿಕಲಾ ಭಾಸ್ಕರ್ ದೈಲಾ, ಹರೀಶ್ ಕುಮಾರ್ ಮೆಲ್ಕಾರ್, ವಿಶ್ವನಾಥ ಕುಲಾಲ್ ಮಿತ್ತೂರು, ಅಶೋಕ ಎಂ.ಕಡೇಶಿವಾಲಯ, ಹಿತೇಶ್ ಕುಮಾರ್ ಎ., ಮಲ್ಲಿಕಾ ಜೆ.ಆರ್.ರೈ, ಗುಲಾಬಿ ಸುರೇಂದ್ರ ಸುರತ್ಕಲ್, ಆರ್ಯನ್ ಸವಣಾಲ್, ಅನುರಾಧಾ ರಾಜೀವ್ ಸುರತ್ಕಲ್, ಜಯರಾಮ ಪಡ್ರೆ, ಹೇಮಂತ್ ಕುಮಾರ್, ಬದ್ರುದ್ದೀನ್ ಕೂಳೂರು, ಅರ್ಚನಾ ಎಂ.ಬಂಗೇರ, ಆಕೃತಿ ಭಟ್, ನಿಶಾನ್ ಅಂಚನ್, ಯಶೋದಾ ಕುಮಾರಿ, ಎಸ್.ಕೆ.ಕುಂಪಲ ಕವಿತೆ ವಾಚಿಸಿದರು.

Share This Article
blank

ನಿಮ್ಮ ಬೆಳಿಗ್ಗೆಯನ್ನು ಹೀಗೆ ಆರಂಭಿಸಿ.. ಈ ಅಭ್ಯಾಸಗಳು ನಿಮ್ಮ ಜೀವನವನ್ನು ಬದಲಾಯಿಸುತ್ತವೆ..! healthy morning

healthy morning: ನಾವು ನಮ್ಮ ಬೆಳಿಗ್ಗೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎಂಬುದು ದಿನವಿಡೀ ನಮ್ಮ ಆಲೋಚನೆಗಳು ಮತ್ತು…

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

blank